ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಆಳದಿಂದ ಏಳುವುದೇ ಆರ್‌ಸಿಬಿ?

ಡಿವಿಲಿಯರ್ಸ್–ಕೊಹ್ಲಿ ಮೇಲೆ ನಿರೀಕ್ಷೆ
Last Updated 24 ಏಪ್ರಿಲ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತುಂಗದಿಂದ ಪಾತಾ ಳಕ್ಕೆ ಜಾರಿ ಬಿದ್ದಂತಾಗಿದೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ. ಒಂದು ವಾರದ ಹಿಂದಷ್ಟೆ ರಾಜ್‌ ಕೋಟ್‌ನಲ್ಲಿ ಗುಜರಾತ್ ಲಯನ್ಸ್‌ ವಿರುದ್ಧ 20 ಓವರ್‌ಗಳಲ್ಲಿ 2 ವಿಕೆಟ್‌ ಗಳನ್ನು ಕಳೆದುಕೊಂಡು 213 ರನ್‌ ಗಳಿಸಿದ್ದ ತಂಡವು ಭಾನುವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ಕೇವಲ 49 ರನ್‌ ಗಳಿಸಿ ಹೀನಾಯವಾಗಿ ಸೋತಿತ್ತು.

ಕ್ರಿಕೆಟ್‌ ಜಗತ್ತಿನ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ (7), ವಿರಾಟ್ ಕೊಹ್ಲಿ (0), ಎ.ಬಿ. ಡಿವಿಲಿಯರ್ಸ್ (8 ) ಸೇರಿದಂತೆ ತಂಡದ ಎಲ್ಲ ಹತ್ತು ಆಟಗಾರರೂ ಒಂದಂಕಿಗೆ ಉರುಳಿದ್ದು ಕೂಡ ದಾಖಲೆಯೇ!

ಇದರಿಂದಾಗಿ ಮಂಗಳವಾರ ತನ್ನ ತವರಿನ ಅಂಗಳದಲ್ಲಿ ಕೊಹ್ಲಿ ಪಡೆಯು ಹಾಲಿ ಚಾಂಪಿಯನ್ ಸನ್‌ರೈಸರ್ಸ್‌ ಹೈದ ರಾಬಾದ್ ಎದುರು ಯಾವ ರೀತಿ ಆಡಲಿ ದೆಯೆಂಬ ಆತಂಕ ಮತ್ತು ಪುಟಿದೇ ಳುವುದೇ ಎಂಬ ನಿರೀಕ್ಷೆಗಳ ಮಿಶ್ರಭಾವ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಕಹಿಯೇ ಹೆಚ್ಚು: ಐಪಿಎಲ್ ಹತ್ತನೇ ಆವೃತ್ತಿಯ ಒಂದು ಸುತ್ತು ಮುಗಿದಿರುವ ಈ ಸಂದರ್ಭದಲ್ಲಿ ಹಿಂತಿರುಗಿ ನೋಡಿ ದರೆ ಆರ್‌ಸಿಬಿ  ಕಹಿ ಉಂಡಿರುವುದೇ ಹೆಚ್ಚು. ಆಡಿದ ಏಳು ಪಂದ್ಯಗಳಲ್ಲಿ ಗೆದ್ದಿ ರುವುದು ಎರಡರಲ್ಲಿ ಮಾತ್ರ.  ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿದೆ. 


ಇದರಿಂದಾಗಿ ಈಗ ತಂಡದ ಮೇಲೆ ಒತ್ತಡ ಹೆಚ್ಚಿದೆ. ತಂಡದ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಟಗಾರರು ಇದ್ದಾರೆ. ಆದರೆ ಫಾರ್ಮ್‌ನಲ್ಲಿ ಅನಿ ಶ್ಚಿತತೆ ಇದೆ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ಆರಂಭದ ಕೆಲವು ಪಂದ್ಯಗಳಲ್ಲಿ ಬೌಲಿಂಗ್‌ ವಿಭಾಗ ಪರಿಣಾಮಕಾರಿ ಯಾಗಿರಲಿಲ್ಲ. ಆದರೆ ಬ್ಯಾಟಿಂಗ್ ಚೆನ್ನಾಗಿತ್ತು. ಕೋಲ್ಕತ್ತದಲ್ಲಿ ಬೌಲರ್‌ಗಳು ಅಮೋಘ ಆಟವಾಡಿದ್ದರು. ಕೇವಲ 131 ರನ್‌ಗಳಿಗೆ ಕೆಕೆಆರ್‌ ತಂಡವನ್ನು ಕಟ್ಟಿಹಾಕಿದ್ದರು. ಆದರೆ ಬ್ಯಾಟಿಂಗ್ ಬಲ ನೆಲಕಚ್ಚಿತ್ತು.

ಆರ್‌ಸಿಬಿ ಪರವಾಗಿ ಕೇದಾರ್ ಜಾಧವ್ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ, ಗೇಲ್, ಕೊಹ್ಲಿ ಮತ್ತು ಎಬಿಡಿ ಅವರ ಆಟದ ಮೇಲೆಯೇ ತಂಡ ಹೆಚ್ಚು ಅವಲಂಬಿತವಾಗಿದೆ. ಅವರು ಅಬ್ಬರಿಸಿ ದರೆ ಮಾತ್ರ ತಂಡವು ದೊಡ್ಡ ಮೊತ್ತ ಕಲೆಹಾಕುವ ಸಾಧ್ಯತೆ ಹೆಚ್ಚು ಇಲ್ಲದಿದ್ದರೆ ಇಲ್ಲ ಎನ್ನುವಂತಾಗಿದೆ.



ಸ್ಥಳೀಯ ಆಟಗಾರ ಸ್ಟುವರ್ಟ್‌ ಬಿನ್ನಿ ಅವರು ತಮಗೆ ಲಭಿಸುತ್ತಿರುವ ಅವಕಾಶ ಗಳಲ್ಲಿ ಮಿಂಚಿಲ್ಲ. ಮನದೀಪ್ ಸಿಂಗ್ ಕೂಡ ತಮ್ಮ ಸಾಮರ್ಥ್ಯವನ್ನು ಸಂಪೂ ರ್ಣವಾಗಿ ವಿನಿಯೋಗಿಸುತ್ತಿಲ್ಲ. ಇದರಿಂದಾಗಿ ಕೆಲವು ಬದಲಾವಣೆಗ ಳೊಂದಿಗೆ ತಂಡವು ಕಣಕ್ಕಿಳಿಯುವ ಸಾಧ್ಯತೆ ಇದೆ.

ಟ್ರಾವಿಸ್ ಹೆಡ್ ಅಥವಾ ಶೇನ್ ವಾಟ್ಸನ್‌ ತಂಡಕ್ಕೆ ಮರಳಿದರೆ ಎಬಿಡಿ ಅಥವಾ ಸ್ಯಾಮುಯೆಲ್ ಬದ್ರಿ ಸ್ಥಾನ ತೆರವುಗೊಳಿಸಬೇಕಾಗಬಹುದು. ಬಿನ್ನಿ ಬೆಂಚ್‌ ಕಾಯಿಸಿದರೆ ಸಚಿನ್ ಬೇಬಿ ಅಥವಾ ವಿಷ್ಣುವಿನೋದ್ ಸ್ಥಾನ ಪಡೆ ಯಬಹುದು.

ಸಮಾಧಾನಕರ ವಿಷಯವೆಂದರೆ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಯಜು ವೇಂದ್ರ ಚಹಲ್ ಮತ್ತು ಪವನ್ ನೇಗಿ ನಿರಂತರವಾಗಿ ತಂಡಕ್ಕೆ ಆಸರೆಯಾಗು ತ್ತಿದ್ದಾರೆ. ಹರಿಯಾಣದ ಲೆಗ್‌ಸ್ಪಿನ್ನರ್ ಯಜುವೇಂದ್ರ ಒಟ್ಟು ಏಳು ವಿಕೆಟ್‌ ಗಳನ್ನು ಗಳಿಸಿದ್ದಾರೆ.

ದೆಹಲಿಯ ಪವನ್ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಕೊನೆಯ ಓವರ್‌ನಲ್ಲಿ ಮಿಂಚಿದ್ದ ಅವರು, ಭಾನು ವಾರ ಕೆಕೆಆರ್‌ ಎದುರು ಎರಡು ವಿಕೆಟ್ ಗಳಿಸಿದ್ದರು. ಅದೇ ಪಂದ್ಯದಲ್ಲಿ ಎಡಗೈ ವೇಗಿ ಟೈಮಲ್ ಮಿಲ್ಸ್ ಮತ್ತು ಕರ್ನಾ ಟಕದ ಎಸ್. ಅರವಿಂದ್ ಉತ್ತಮ ಬೌಲಿಂಗ್ ಮಾಡಿದ್ದರು.



ಕಠಿಣ ಎದುರಾಳಿ ಸನ್‌ರೈಸರ್ಸ್: ಈ ಟೂರ್ನಿಯಲ್ಲಿ ಅತ್ಯಂತ ಕಠಿಣ ಎದು ರಾಳಿಯಾಗಿರುವ ವಾರ್ನರ್‌ ಬಳಗವನ್ನು ಎದುರಿಸಲು ಆರ್‌ಸಿಬಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಬೇಕು. ಅದರಲ್ಲೂ ಹೀನಾಯ ಸೋಲಿನ ನಂತರ ಬಲಿಷ್ಠ  ತಂಡವನ್ನು ಎದುರಿಸುವುದು ಕ್ಲಿಷ್ಟ ಸವಾಲಾಗಲಿದೆ.
ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ.

ವಾರ್ನರ್, ಶಿಖರ್ ಧವನ್, ಗಾಯ ದಿಂದ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್, ಮೊಸೆಸ್ ಹೆನ್ರಿಕ್ಸ್, ಕೇನ್ ವಿಲಿಯಮ್ಸನ್ ಎಂತಹ ಪರಿಸ್ಥಿತಿಯಲ್ಲಿಯೂ ರನ್‌ಗಳನ್ನು ಸೂರೆ ಮಾಡುವ ಆಟಗಾರರು. ಆಫ್ಘಾನಿಸ್ತಾನದ ರಶೀದ್ ಖಾನ್, ವಿಫುಲ್ ಶರ್ಮಾ, ಮಧ್ಯಮ ವೇಗಿ ಭುವನೇಶ್ವರ್ ಕುಮಾರ್,  ಅನು ಭವಿ ಆಶಿಶ್ ನೆಹ್ರಾ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್‌ಗಳು.

ವಾರ್ನರ್‌ ಬಳಗವು ತನ್ನ ತವರಿನಲ್ಲಿ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನೂ ಗೆದ್ದಿದೆ.  ಆದರೆ ಹೊರಗೆ ಆಡಿದ ಮೂರು ಪಂದ್ಯಗಳಲ್ಲಿಯೂ ಸೋತಿದೆ. ಪುಣೆಯಲ್ಲಿ ಗೆಲ್ಲುವ ಅವಕಾಶವನ್ನು ಮಹೇಂದ್ರಸಿಂಗ್ ದೋನಿ ಕಿತ್ತು ಕೊಂಡಿದ್ದರು.

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಎದುರು ಸೋಲನುಭವಿಸಿತ್ತು. ಹೋದ ವರ್ಷದ ಫೈನಲ್‌ ಕೂಡ ಇಲ್ಲಿಯೇ ನಡೆದಿತ್ತು. ಆಗಲೂ ಆರ್‌ಸಿಬಿ ತಂಡವು ವಾರ್ನರ್‌ ಬಳಗದ ಎದುರು ಸೋತಿತ್ತು. ಚಾಣಾಕ್ಷ ಬ್ಯಾಟ್ಸ್‌ಮನ್‌ಗಳು ಮತ್ತು ಶಿಸ್ತಿನ ಸ್ಪಿನ್ನರ್‌ಗಳಿಗೆ  ನೆರವು ನೀಡುವ ಇಲ್ಲಿಯ ಪಿಚ್‌ ಯಾರಿಗೆ ಒಲಿಯು ವುದೋ ಕಾದು ನೋಡಬೇಕು. 

ಆರ್‌ಸಿಬಿ ಅಪಾಯಕಾರಿ ತಂಡ: ಮುತ್ತಯ್ಯ
ರಾಯಲ್ ಚಾಲೆಂ ಜರ್ಸ್‌ ತಂಡವು ಕೋಲ್ಕತ್ತದಲ್ಲಿ  ಸೋತಿರಬಹುದು. ಆದರೂ  ಅದು ಅಪಾಯಕಾರಿ ತಂಡ.  ಶ್ರೇಷ್ಠ ಆಟಗಾರರು ಇರುವ ಬಳಗವನ್ನು ಹಗುರವಾಗಿ ಪರಿಗಣಿಸಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಮುತ್ತಯ್ಯ ಮುರಳೀಧರನ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿಯೊಂದು ತಂಡಕ್ಕೆ ಒಮ್ಮೊಮ್ಮೆ ಕೆಟ್ಟ ದಿನ ಇರುತ್ತದೆ. ಭಾನುವಾರ ಆರ್‌ಸಿಬಿಗೆ ಅಂತಹ ಕರಾಳ  ದಿನವಾಗಿತ್ತು. ಕ್ರಿಕೆಟ್‌ನಲ್ಲಿ ಇಂತಹವುಗಳು ಸಹಜ. ಅದನ್ನು ಆರ್‌ಸಿಬಿಯ ಕಳಪೆ ಫಾರ್ಮ್ ಎಂದು ಹೇಳಲಾಗುವುದಿಲ್ಲ.  ಅವರು ತಿರುಗೇಟು ನೀಡಬಲ್ಲರು’ ಎಂದರು.

‘ಐಪಿಎಲ್ ಟೂರ್ನಿಯ ಅರ್ಧದಾರಿ ಸವೆಸಿದ್ದೇವೆ. ತವರಿನಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದಿದ್ದೇವೆ. ಹೊರಗಿನ ಪಂದ್ಯಗಳಲ್ಲಿ ಜಯ ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸಿಕ್ಸ್

*
ಯುವರಾಜ್ ಸಿಂಗ್ ಅವರು ಫಿಟ್ ಆಗಿದ್ದು ಆಡುವುದು ಬಹುತೇಕ ಖಚಿತ. ಇದರಿಂದ ತಂಡದ ಬಲ ಹೆಚ್ಚಿದಂತಾಗಿದೆ. ಗೆಲುವಿನ ವಿಶ್ವಾಸ ವೃದ್ಧಿಸಿದೆ.
-ಟಾಮ್ ಮೂಡಿ,
ಸನ್‌ರೈಸರ್ಸ್ ಮುಖ್ಯ ಕೋಚ್

*
ಸೋಲು–ಗೆಲುವು ಆಟದ ಭಾಗ. ಕೋಲ್ಕತ್ತದಲ್ಲಿ ಬ್ಯಾಟಿಂಗ್ ವೈಫಲ್ಯ ಕಾಡಿತ್ತು. ಅದನ್ನು ಮರೆತು ಇಲ್ಲಿ ಕಣಕ್ಕಿಳಿಯಲಿದ್ದೇವೆ. ಉತ್ತಮವಾಗಿ ಆಡಿ ಜಯಿಸುತ್ತೇವೆ.
ಪವನ್ ನೇಗಿ
ಆರ್‌ಸಿಬಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT