ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ವೆಚ್ಚ: ಭಾರತಕ್ಕೆ 5ನೇ ಸ್ಥಾನ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮಿಲಿಟರಿ ಕ್ಷೇತ್ರದ ಮೇಲೆ ಅತಿ ಹೆಚ್ಚು ಹಣ ವೆಚ್ಚ ಮಾಡುವ ರಾಷ್ಟ್ರಗಳ ಪೈಕಿ ಭಾರತ ಐದನೆಯ ಸ್ಥಾನದಲ್ಲಿದೆ ಎಂದು ಯುರೋಪಿನ ಸಂಶೋಧನಾ ಸಂಸ್ಥೆಯೊಂದರ ವರದಿ ಹೇಳಿದೆ.

ಮಿಲಿಟರಿಗೆ ಅತಿ ಹೆಚ್ಚು ಹಣ ವೆಚ್ಚ ಮಾಡುತ್ತಿರುವ ಐದು ರಾಷ್ಟ್ರಗಳ ಪೈಕಿ ಮೂರು ರಾಷ್ಟ್ರಗಳು ಏಷ್ಯಾ ಖಂಡಕ್ಕೆ ಸೇರಿದವು. ಚೀನಾ ಮತ್ತು ಸೌದಿ ಅರೇಬಿಯಾ ಈ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿವೆ. ಅತಿ ಹೆಚ್ಚು ಹಣ ಖರ್ಚು ಮಾಡುವ 15 ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಸ್ಥಾನ ಇಲ್ಲ.

ಮನೋಹರ ಪರಿಕ್ಕರ್ ಅವರು ದೇಶದ ರಕ್ಷಣಾ ಸಚಿವರಾಗಿದ್ದ ಅವಧಿಯನ್ನೂ  ಈ  ವರದಿ ಒಳಗೊಂಡಿದೆ. ಆ ಅವಧಿಯಲ್ಲಿ ಪರಿಕ್ಕರ್ ಅವರು ಎರಡು ಆರ್ಥಿಕ ವರ್ಷಗಳಲ್ಲಿ ಜಾರಿಗೆ ಬರುವ, ಒಟ್ಟು ₹4 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಸಮ್ಮತಿ ಸೂಚಿಸಿದ್ದರು.

ಅಲ್ಲದೆ, ಒಟ್ಟು ₹ 2 ಲಕ್ಷ ಕೋಟಿ ಮೊತ್ತದ 141 ಯೋಜನೆಗಳಿಗೆ ಇದೇ ಅವಧಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT