ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ ಮುಗಿಸಿದ ಶರಪೋವಾ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸ್ಟಟ್‌ಗಾರ್ಟ್‌: ಟೆನಿಸ್‌ ಟೂರ್ನಿಯ ವೇಳೆ ನಿಷೇಧಿತ ಉದ್ದೀಪನಾ ಮುದ್ದು ಸೇವಿಸಿ 15 ತಿಂಗಳು ನಿಷೇಧಕ್ಕೆ ಒಳಗಾಗಿದ್ದ ರಷ್ಯಾದ ಮರಿಯಾ ಶರಪೋವಾ ಅವರು ಶಿಕ್ಷೆ ಪೂರ್ಣಗೊಳಿಸಿದ್ದು, ಮೊದಲ ಟೂರ್ನಿ ಆಡಲು ಸಜ್ಜಾಗಿದ್ದಾರೆ.

ಗ್ರ್ಯಾಂಡ್ ಸ್ಲಾಮ್ ಟೆನಿಸ್‌ ಟೂರ್ನಿಗಳ ಸಿಂಗಲ್ಸ್‌ ವಿಭಾಗದಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಶರಪೋವಾ 2016ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ವೇಳೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.

ಇಲ್ಲಿ ನಡೆಯುತ್ತಿರುವ ಸ್ಟಟ್‌ಗಾರ್ಟ್‌ ಟೆನಿಸ್‌ ಟೂರ್ನಿಯಲ್ಲಿ ಶರಪೋವಾ ಆಡುತ್ತಿದ್ದಾರೆ. ನಿಷೇಧ ಶಿಕ್ಷೆ ಮುಗಿಸಿದ ಬಳಿಕ ಅವರು ಕಣಕ್ಕಿಳಿದ ಮೊದಲ ಟೂರ್ನಿ ಇದಾಗಿದೆ. ಇಲ್ಲಿ ಅವರಿಗೆ ‘ವೈಲ್ಡ್‌ ಕಾರ್ಡ್‌’ ಪ್ರವೇಶ ಲಭಿಸಿದೆ. ತಮ್ಮ ಮೊದಲ ಪಂದ್ಯದಲ್ಲಿ ಇಟಲಿಯ ಹಿರಿಯ ಆಟಗಾರ್ತಿ ರಾಬೆರ್ಟಾ ವಿನ್ಸಿ ಎದುರು ಪೈಪೋಟಿ ನಡೆಸಲಿದ್ದಾರೆ.

ಜರ್ಮನಿಯ ಆಟಗಾರ್ತಿ ಆ್ಯಂಜಲಿಕ್ ಕೆರ್ಬರ್  ಇಲ್ಲಿ ಅಗ್ರ ಶ್ರೇಯಾಂಕದ ಹೊಂದಿದ್ದಾರೆ. ‘ಜರ್ಮನಿಯಲ್ಲಿ ಟೂರ್ನಿ ಆಯೋಜನೆಯಾಗಿರುವ ಕಾರಣ ಅನೇಕ ಸ್ಥಳೀಯ ಆಟಗಾರ್ತಿಯರು ಇರುತ್ತಾರೆ. ಇದರಿಂದ ಕಠಿಣ ಸವಾಲು ಎದುರಾಗುತ್ತದೆ’ ಎಂದು ಕೆರ್ಬರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT