ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡೈ ಹೊಸ ಎಕ್ಸೆಂಟ್‌

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೆ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ಹುಂಡೈ ಮೋಟಾರ್‌ ಇಂಡಿಯಾ (ಎಚ್ಎಂಐಎಲ್‌), ದೇಶಿ ಮತ್ತು ವಿದೇಶಿ ಮಾರುಕಟ್ಟೆಗೆ ಹೊಸ ಎಕ್ಸೆಂಟ್‌ ಕಾರನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಿತು.

‘ಗ್ರಾಹಕರ ಹೊಸ ನಿರೀಕ್ಷೆಗಳನ್ನೆಲ್ಲ ಈ ಹೊಸ ಕಾರ್‌ನಲ್ಲಿ ಈಡೇರಿಸಲಾಗಿದೆ.  ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಈ ಕಾರು ಯುವ ಮತ್ತು ಆಧುನಿಕ ಮನೋಭಾವದವರಿಗೆ ಖಂಡಿತವಾಗಿಯೂ ಮೆಚ್ಚುಗೆ ಆಗಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೈಕೆ ಕೂ ಹೇಳಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ  ಕಾರು ತಲಾ ಐದು ಮಾದರಿಯಲ್ಲಿ ದೊರೆಯಲಿದೆ. ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇದೆ.

ಪೆಟ್ರೋಲ್‌  ಚಾಲಿತ ಕಾರ್‌ನ ಬೆಲೆ (ದೆಹಲಿ ಎಕ್ಸ್‌ಷೋರೂಂ) ₹ 5,38,381 ದಿಂದ ಮತ್ತು ಡೀಸೆಲ್‌ ಚಾಲಿತ ಕಾರ್‌ನ ಬೆಲೆ ₹ 6,28,281 ದಿಂದ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT