ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸಣ್ಣ ಕಾರುಗಳ ಬೆಲೆ ಏರಿಕೆ ಸಾಧ್ಯತೆ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕನಿಷ್ಠ  10 ತೆರಿಗೆಗಳೆಲ್ಲ ರದ್ದಾಗಿ ಒಂದೇ ತೆರಿಗೆ ವ್ಯವಸ್ಥೆ ಜುಲೈ 1ರಿಂದ ಜಾರಿಗೆ ಬರಲಿದೆ. ವಿಭಿನ್ನ ಸರಕುಗಳು ನಾಲ್ಕು  ಬೇರೆ, ಬೇರೆ  ಹಂತದ ತೆರಿಗೆ ವ್ಯಾಪ್ತಿಗೆ ಒಳಪಡುವುದರಿಂದ ಕಾರುಗಳ ಬೆಲೆ ಅಲ್ಪ  ಪ್ರಮಾಣದಲ್ಲಿ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ.

ಸಣ್ಣ ಕಾರುಗಳ ಮೇಲೆ ಸದ್ಯಕ್ಕೆ ಶೇ 12.5ರಷ್ಟು ಕೇಂದ್ರೀಯ ಅಬಕಾರಿ ಸುಂಕ ಮತ್ತು ರಾಜ್ಯಗಳ ಶೇ 14.5 ರಿಂದ ಶೇ 15ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುತ್ತಿದೆ.  ಇವುಗಳ ಒಟ್ಟು ಹೊರೆ ಶೇ 27 ರಿಂದ ಶೇ 27.5ರಷ್ಟಾಗುತ್ತದೆ. ಜಿಎಸ್‌ಟಿಯಲ್ಲಿ ನಿಗದಿ ಮಾಡಿರುವ ನಾಲ್ಕು ಹಂತದ (ಶೇ 5, 12, 18 ಮತ್ತು 28) ತೆರಿಗೆ ಪೈಕಿ  ಶೇ 28ರಷ್ಟು ತೆರಿಗೆಯು ಇಂತಹ ಕಾರ್‌ಗಳಿಗೆ ಅನ್ವಯವಾಗಲಿದೆ.

ಕೆಲ ಆಯ್ದ ವಾಹನಗಳಿಗೆ ತೆರಿಗೆ ಹೊರೆಯು ಸದ್ಯದ ತೆರಿಗೆಗೆ ಹೋಲಿಸಿದರೆ  ಕೆಲ ಮಟ್ಟಿಗೆ ಕಡಿಮೆಯಾಗಲಿದೆ. ತಯಾರಕರು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಅವುಗಳ ಬೆಲೆ ಕಡಿಮೆಯಾಗಲಿದೆ.

ಬಿಹಾರ: ಜಿಎಸ್‌ಟಿಗೆ ಒಪ್ಪಿಗೆ:  ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗೆ ಬಿಹಾರ ವಿಧಾನ ಮಂಡಲ ಸೋಮವಾರ ಅನುಮೋದನೆ ನೀಡಿದೆ.

ಬಿಹಾರ ತನ್ನ ರಾಜ್ಯಕ್ಕೆ ಸಂಬಂಧಿಸಿದ (ಬಿಹಾರ ಸರಕು–ಸೇವಾ ತೆರಿಗೆ ಕಾಯ್ದೆ–2017) ಕಾಯ್ದೆ ಅಳವಡಿಸಿಕೊಳ್ಳುವ ಸಂಬಂಧ ಮಸೂದೆಗೆ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT