ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಸಿಂಗ್ ಪುಣೆಗೆ ರೋಚಕ ಜಯ

ಬೆನ್ ಸ್ಟೋಕ್ಸ್‌, ಉನದ್ಕತ್ ಮಿಂಚಿನ ದಾಳಿ
Last Updated 24 ಏಪ್ರಿಲ್ 2017, 20:05 IST
ಅಕ್ಷರ ಗಾತ್ರ

ಮುಂಬೈ: ಬಲಗೈ ವೇಗಿ ಬೆನ್ ಸ್ಟೋಕ್ಸ್ (21ಕ್ಕೆ2) ಮತ್ತು ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ (40ಕ್ಕೆ2) ಅವರ ಮೊನಚಾದ ದಾಳಿಯ ಬಲದಿಂದ ರೈಸಿಂಗ್ ಪುಣೆ ಸೂಪರ್‌ ಜೈಂಟ್ ತಂಡ 3 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ  ಜಯಿಸಿತು.

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪುಣೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 160 ರನ್‌ಗಳನ್ನು ಕಲೆ ಹಾಕಿತ್ತು. ಬ್ಯಾಟಿಂಗ್‌ ನಲ್ಲಿ ಬಲಿಷ್ಠವಾಗಿರುವ ಮುಂಬೈ ಕೊನೆಯ ಎಸೆತದವರೆಗೂ ಹೋರಾಟ ನಡೆಸಿತು. ಆದರೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್‌ ಗಳಿಸಿ ಸೋತಿತು.

ನಾಯಕ ರೋಹಿತ್ ಶರ್ಮಾ (58; 39ಎ, 6ಬೌಂ, 3ಸಿ) ಮತ್ತು ಪಾರ್ಥಿವ್ ಪಟೇಲ್ (33; 27ಎ, 4ಬೌಂ) ಅವರ ಹೋರಾಟ ವ್ಯರ್ಥವಾಯಿತು. ಕೊನೆಯ ಓವರ್‌ ಬೌಲಿಂಗ್ ಮಾಡಿದ ಉನದ್ಕತ್ ಅವರು ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿಕೆಟ್‌ ಗಳಿಸಿದ್ದರಿಂದ ಪುಣೆಗೆ ಜಯ ಸುಲಭವಾಯಿತು.

ಕೊನೆಯ ಎರಡು ಎಸೆತಗಳಲ್ಲಿ 11 ರನ್‌ ಅವ ಶ್ಯಕತೆಯಿತ್ತು. ಆದರೆ ಒಂದು ಎಸೆತದಲ್ಲಿ ಮೆಕಲೆಗಾನ್ ಕೂಡ ರನ್‌ಔಟ್ ಆದರು. ಕೊನೆಯ ಎಸೆತದಲ್ಲಿ ಹರಭಜನ್ ಸಿಕ್ಸರ್ ಹೊಡೆದು ಸೋಲಿನ ಅಂತರ ಕಡಿಮೆ ಗೊಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಪುಣೆ ತಂಡಕ್ಕೆ ಆರಂಭಿಕ ಜೋಡಿ ಅಜಿಂಕ್ಯ ರಹಾನೆ (38; 32ಎ; 5ಬೌಂ, 1ಸಿ) ಮತ್ತು ರಾಹುಲ್ ತ್ರಿಪಾಠಿ (45; 31ಎ, 3ಬೌಂ, 2ಸಿ) ಅವರು ಉತ್ತಮ ಅಡಿಪಾಯ ಹಾಕಿದರು. ಇವರು 9.3 ಓವರ್‌ಗಳಲ್ಲಿ 76 ರನ್‌ ಗಳಿಸಿದರು.  

ಅದರಿಂದಾಗಿ ತಂಡವು ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆ ಮೂಡಿತ್ತು. ಕರಣ್‌ ಶರ್ಮಾ ಬೌಲಿಂಗ್‌ನಲ್ಲಿ ರಹಾನೆ ಔಟಾದ ಎರಡು ಓವರ್‌ಗಳ ನಂತರ ತ್ರಿಪಾಠಿ ಕೂಡ  ನಿರ್ಗಮಿಸಿದರು. ನಾಯಕ ಸ್ಟೀವನ್ ಸ್ಮಿತ್ (17ರನ್) ಮತ್ತು  ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಅಬ್ಬರಿಸಿದ್ದ ಮಹೇಂದ್ರಸಿಂಗ್ ದೋನಿ (7) ಬೇಗನೆ ನಿರ್ಗಮಿಸಿದರು.

ಹರಭಜನ್‌ಗೆ 200 ವಿಕೆಟ್‌: ಅನುಭವಿ ಆಫ್‌ಸ್ಪಿನ್ನರ್ ಹರಭಜನ್ ಅವರು ಟ್ವೆಂಟಿ–20 ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಿದರು. ಪಂದ್ಯದಲ್ಲಿ  ಸ್ಮಿತ್ ವಿಕೆಟ್ ಪಡೆಯುವ ಮೂಲಕ ಇನ್ನೂರರ ಗಡಿ ಹರಭಜನ್ ದಾಟಿದರು.

ಸಂಕ್ಷಿಪ್ತ ಸ್ಕೋರು: ರೈಸಿಂಗ್ ಪುಣೆ ಸೂಪರ್‌ಜೈಂಟ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 160 (ಅಜಿಂಕ್ಯ ರಹಾನೆ 38, ರಾಹುಲ್ ತ್ರಿಪಾಠಿ 45, ಸ್ಟೀವನ್ ಸ್ಮಿತ್ 17, ಸ್ಟೋಕ್ಸ್‌ 17, ಮನೋಜ್ ತಿವಾರಿ 22, ಮಿಷೆಲ್ ಜಾನ್ಸನ್ 34ಕ್ಕೆ1, ಕರ್ಣ ಶರ್ಮಾ  39ಕ್ಕೆ2, ಜಸ್‌ಪ್ರೀತ್ ಬೂಮ್ರಾ 29ಕ್ಕೆ2, ಹರಭಜನ್ ಸಿಂಗ್ 20ಕ್ಕೆ1).

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 (ಪಾರ್ಥಿವ್ ಪಟೇಲ್ 33,  ರೋಹಿತ್ ಶರ್ಮಾ 58; ಜಯದೇವ್ ಉನದ್ಕತ್ 40ಕ್ಕೆ2, ಬೆನ್ ಸ್ಟೋಕ್ಸ್ 21ಕ್ಕೆ2) ಫಲಿತಾಂಶ: ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಕ್ಕೆ 3 ರನ್‌ ಜಯ.  ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT