ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬಡಾವಣೆಗಳ ತೆರವು

Last Updated 25 ಏಪ್ರಿಲ್ 2017, 4:35 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಹೊರವಲಯದ ದೊಡ್ಡಬೂದಿಹಾಳ, ಚಿಕ್ಕಬೂದಿಹಾಳ ಮತ್ತು ದೇವರಹಟ್ಟಿ ವ್ಯಾಪ್ತಿಯಲ್ಲಿ ‘ದೂಡಾ’ ಅನುಮತಿಯಿಲ್ಲದೇ ನಿರ್ಮಿ ಸಿದ್ದ ಬಡಾವಣೆಗಳನ್ನು ಸೋಮವಾರ ತೆರವುಗೊಳಿಸಲಾಯಿತು.

ತಹಶೀಲ್ದಾರ್ ಸಂತೋಷಕುಮಾರ್ ಹಾಗೂ ‘ದೂಡಾ’ ಆಯುಕ್ತ ಆದಪ್ಪ ಅವರ ನೇತೃತ್ವದ ತಂಡ ಆ ವ್ಯಾಪ್ತಿಯ ಸರ್ವೆ ನಂ.5, 6 ಮತ್ತು 13 ಸರ್ವೆ  ನಂಬರ್‌ಗಳಲ್ಲಿ ನಿರ್ಮಿಸಲಾಗಿದ್ದ ಸುಮಾರು ಇಪ್ಪತ್ತು ಎಕರೆ ಬಡಾವಣೆ ಸ್ಥಳವನ್ನು ತೆರವುಗೊಳಿಸಲಾಯಿತು.

‘ಬಡಾವಣೆಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಅಲ್ಲದೇ ಯೋಜನಾ ವ್ಯವಸ್ಥೆಗೆ ವಿರುದ್ಧವಾಗಿ ಬಡಾವಣೆಗಳನ್ನು ನಿರ್ಮಿಸಿ ಅಮಾಯಕರಿಗೆ ವಂಚಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಹಾಗೂ ಈ ಜಾಗವನ್ನು ಸರ್ಕಾರಿ ಜಾಗವೆಂದು ಪರಿಗಣಿಸಲು ಕೋರಲಾಗುವುದು’ ಎಂದು
ಸಂತೋಷ್‌ ಕುಮಾರ್‌ ಹೇಳಿದರು.

‘ಈ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿ ಎಚ್ಚರಿಸಲಾಗಿದೆ. ಆದರೂ ಸಾರ್ವಜನಿಕರು ಮೋಸ ಹೋಗುತ್ತಿದ್ದಾರೆ’ ಎಂದು ದೂಡಾ ಆಯುಕ್ತ  ಹೇಳಿದರು.

ಈ ಕಾರ್ಯಾಚರಣೆಯಲ್ಲಿ ‘ದೂಡಾ’ ಕಾರ್ಯಪಾಲಕ ಎಂಜಿನಿಯರ್ ಶ್ರೀಕರ್, ಜಂಟಿ ನಿರ್ದೇಶಕ ಗೋಪಾಲಕೃಷ್ಣ, ರೇಣುಕಾಪ್ರಸಾದ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT