ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಜೋಡಿ ಉಚಿತ ಸಾಮೂಹಿಕ ವಿವಾಹ

Last Updated 25 ಏಪ್ರಿಲ್ 2017, 5:18 IST
ಅಕ್ಷರ ಗಾತ್ರ

ಗದಗ: ರಂಭಾಪುರಿ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಮಹೋತ್ಸವ, 508 ಕುಂಭ, ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭ, ಜುಕ್ತಿ ಹಿರೇ ಮಠದ ನೂತನ ಕಟ್ಟಡದ ಉದ್ಘಾಟನೆ, ನೂತನ ಗೋಪುರಕ್ಕೆ ಕಳಶಾರೋಹಣ, ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ.30 ರಿಂದ ಮೇ 4 ರವರೆಗೆ ರೋಣ ತಾಲ್ಲೂ ಕಿನ ಸೂಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರಿನ ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು 5 ದಿನಗಳವರೆಗೆ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರ ಬಸವೇಶ್ವರ ಶಿವಾ ಚಾರ್ಯ ಸ್ವಾಮೀಜಿ ನೇತೃತ್ವವಹಿ ಸುವರು.

ಏ.30 ರಂದು ಸಂಜೆ 6.30ಕ್ಕೆ ರಂಭಾಪುರಿ ಸ್ವಾಮೀಜಿಯ ಪೀಠಾ ರೋಹಣ ರಜತಮಹೋತ್ಸವ      ಹಾಗೂ ಸಚಿವ ಎಚ್.ಕೆ.ಪಾಟೀಲ ಅವರು ಜುಕ್ತಿಹಿರೇಮಠವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ವಿವರಿಸಿದರು.ಮೇ 1 ರಂದು ಸಂಜೆ 6.30ಕ್ಕೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ವೀರಶೈವ ಪರಂಪರೆಯ ಪುನರುತ್ಥಾನ ಧರ್ಮ ಸಮಾರಂಭ ಉದ್ಘಾಟಿಸಲಿ ದ್ದಾರೆ. ಕೊಟ್ಟೂರು ಬಸವೇಶ್ವರ ಗುರು ಕುಲ ಸೇವಾ ಸಮಿತಿ ಶಾಲೆಯ ನಾಮ ಫಲಕವನ್ನು ವಿಧಾನ ಪರಿಷತ್‌ ಸದಸ್ಯ ಮಾಜಿ ಸಚಿವ ಬಸವರಾಜ ಹೊರಟ್ಟಿ ಅನಾವರಣಗೊಳಿಸಲಿದ್ದಾರೆ.

ಮೇ 2 ರಂದು ಸಂಜೆ 6.30ಕ್ಕೆ ನಡೆ ಯುವ ಮಹಿಳಾ ಧರ್ಮ ಸಭೆಯನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಲಿ ದ್ದಾರೆ. ಗಿರಿಜಾದೇವಿ ದುರ್ಗದಮಠ ಉಪನ್ಯಾಸ ನೀಡುವರು. ಮೇ 3 ರಂದು ಸಂಜೆ 6.30ಕ್ಕೆ ಯುವ ಜಾಗೃತಿ ಧರ್ಮ ಸಭೆ ನಡೆಯಲಿದೆ. ಸಂಸದ ಪ್ರಹ್ಲಾದ್‌ ಜೋಶಿ ಸಭೆಯನ್ನು ಉದ್ಘಾಟಿಸುವರು. ಬೆಂಗಳೂರಿನ ಜಿ.ಎಸ್.ಫಣಿಭೂಷಣ ಉಪನ್ಯಾಸ ನೀಡುವರು. ಮೇ 4 ರಂದು ಬೆಳಿಗ್ಗೆ 11ಕ್ಕೆ 40 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಮಾರಂಭ ನಡೆಯಲಿದೆ.

ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸಮಾರಂಭ ಉದ್ಘಾಟಿಸಲಿ ದ್ದಾರೆ. ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಸೇರಿದಂತೆ 150 ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಸಣ್ಣ ಮಲ್ಲಾಡದ, ಎಸ್.ಆರ್.ಮಾರನಬಸರಿ, ಸದಾಶಿವಯ್ಯ ಮದರಿಮಠ, ಲಿಂಗರಾಜ ಗುಡಿಮನಿ, ಚಂದ್ರು ಬಾಳಿಹಳ್ಳಿಮಠ, ವಸಂತಗೌಡ ಪೊಲೀಸ್‌ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT