ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಸಂಘ: ಆರ್‌.ಕೆ.ಹಿರೇಮಠ ಗೆಲುವು

Last Updated 25 ಏಪ್ರಿಲ್ 2017, 5:40 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಲ್ಲಾ ವಕೀಲರ ಸಂಘಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್‌.ಕೆ. ಹಿರೇಮಠ, ಉಪಾಧ್ಯಕ್ಷರಾಗಿ ಸತೀಶ ಆರ್‌. ಪಾಟೀಲ ಭರ್ಜರಿ ಗೆಲುವು ದಾಖಲಿಸಿದರು.

ಹಿರೇಮಠ ಅವರು 920 ಮತ ಪಡೆದರೆ, ಸಮೀಪದ ಸ್ಪರ್ಧಿ ಅರುಣಕುಮಾರ್‌ ಕಿಣ್ಣಿ ಅವರು 669 ಮತ ಪಡೆದರು. ಸತೀಶ ಅವರು 455 ಮತ ಪಡೆದರೆ, ಸಮೀಪದ ಸ್ಪರ್ಧಿ ಫತ್ರುಬಿ ಖಾಸಿಂ ಶಹಾ ಅವರು 441 ಮತ ಪಡೆದು ಅಲ್ಪ ಅಂತರಲ್ಲಿ ಸೋಲು ಅನುಭವಿಸಿದರು.

ಕಾರ್ಯದರ್ಶಿಯಾಗಿ ಬಿ.ಎನ್‌.ಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ಅಮರೇಶ ಉಡಚಣ ಹಾಗೂ ಖಜಾಂಚಿಯಾಗಿ ವೈಜನಾಥ ಝಳಕಿ ಅವರು ಗೆಲುವಿನ ನಗೆ ಬೀರಿದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಕೀಲರು, ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತಡರಾತ್ರಿವರೆಗೂ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಂಭ್ರಮಾಚರಣೆ ನಡೆಯಿತು.

ಅವಿರೋಧ ಆಯ್ಕೆ: ಸಂಘದ ಕಾರ್ಯಕಾರಿ ಸಮಿತಿಗೆ 12 ಮಂದಿ ಮೊದಲೇ ಅವಿರೋಧ ಆಯ್ಕೆಯಾಗಿದ್ದರು. ಆನಂದ ಶಿವಶರಣಪ್ಪ, ಚೆಂಗ್ತಾ ರಮೇಶ, ಚೂಡಾಮಣಿ ಮಾಲಿಪಾಟೀಲ, ಗಣಪತಿರಾವ ಜಮಾದಾರ, ಕಾಮರಾಜ ಕಟ್ಟಾಲಿ, ಮಂಜುನಾಥ ಅಪಚಂದ್, ಫಯಾಜ್‌ ಮೊಹಮ್ಮದ್, ನಾಗರಾಜಚಾರ್ಯ ಕೆಂಭಾವಿ, ನಾಗೇಂದ್ರಪ್ಪ ಪೂಜಾರಿ, ಸಂಜೀವಕುಮಾರ್‌ ಶಿವಶರಣಪ್ಪ, ಶಿವಶರಣಪ್ಪ ಮುನ್ನೊಳ್ಳಿ ಹಾಗೂ ವೆಂಕಟೇಶರಾವ ಕುಲಕರ್ಣಿ ಅವಿರೋಧ ಆಯ್ಕೆಯಾದರು.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ನಿಧಾನವಾಗಿ ಬಿರುಸು ಪಡೆಯಿತು. ಮಧ್ಯಾಹ್ನ 2.30ಕ್ಕೆ ಮತದಾನ ಅಂತ್ಯವಾಯಿತು.

‘ಸಂಘದಲ್ಲಿ 1,808 ಸದಸ್ಯರಿದ್ದು,  14 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಮಧ್ಯರಾತ್ರಿ ಪೂರ್ಣಗೊಂಡಿತು’ ಎಂದು ಚುನಾವಣಾಧಿಕಾರಿ ಬಸವರಾಜ ಕೊಬಾಳ ತಿಳಿಸಿದರು.

ಅಧಿಕಾರ ಎರಡು ವರ್ಷ: ‘ಸಂಘದ ಪದಾಧಿಕಾರಿಗಳ ಅವಧಿಯನ್ನು ಪ್ರಸಕ್ತ ವರ್ಷದಿಂದ ಹೆಚ್ಚಳ ಮಾಡಲಾಗಿದೆ. ಹಿಂದೆ ಒಂದು ವರ್ಷಕ್ಕೆ ಸೀಮಿತವಾಗಿದ್ದ ಅವಧಿಯನ್ನು ತಿದ್ದುಪಡಿ ಮೂಲಕ ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ’ ಎಂದು ಕೊಬಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT