ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ವಿಚ್ಛೇದನ ಪಡೆದ ಖುಷಿಯಲ್ಲಿ 50 ಕೆಜಿ ಸಿಹಿತಿಂಡಿ ಹಂಚಿದ ಯುವಕ!

Last Updated 25 ಏಪ್ರಿಲ್ 2017, 19:19 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಾನೂನು ಹೋರಾಟದಲ್ಲಿ ಕೊನೆಗೂ ವಿಚ್ಛೇದನ ಪಡೆದ ಸಂಭ್ರಮವನ್ನು ವ್ಯಕ್ತಿಯೊಬ್ಬರು ಸುಮಾರು 50 ಕೆ.ಜಿ. ಸಿಹಿ ಹಂಚುವ ಮೂಲಕ ಆಚರಿಸಿದ್ದಾರೆ.

ರಾಜ್‌ಕೋಟ್‌ ನಿವಾಸಿಯಾಗಿರುವ ಉದ್ಯಮಿ ರಿಂಕೇಶ್‌ ರಚ್ (26) ಎರಡು ವರ್ಷದ ಕಾನೂನು ಹೋರಾಟದ ಬಳಿಕ ಏಪ್ರಿಲ್‌ 15ರಂದು ವಿಚ್ಛೇದನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಮುದ್ರಿಸಿರುವ ಪೆಟ್ಟಿಗೆಯಲ್ಲಿ ಗೋಡಂಬಿ ಬರ್ಫಿಯನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ.

‘ವಿಚ್ಛೇದನ ಎನ್ನುವುದು ಒಂದು ವರ್ಷದ ಸಾಂಸಾರಿಕ ಬದುಕು ಮತ್ತು ಎರಡು ವರ್ಷದ ಕಾನೂನು ಹೋರಾಟದ ಹೆಣಗಾಟದ ಬಳಿಕ ದೊರೆತ ಸಿಹಿ ಕೊಡುಗೆ. ಇದಕ್ಕೆ ಸಂಭ್ರಮಿಸಲೇಬೇಕು’ ಎಂದು ರಿಂಕೇಶ್‌ ಹೇಳಿಕೊಂಡಿದ್ದಾರೆ.

ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಅವರು ಸಿಹಿ ಹಂಚುತ್ತಿರುವ ಪೆಟ್ಟಿಗೆಯಲ್ಲಿ ವಿವರಿಸಿದ್ದಾರೆ.

ಪೆಟ್ಟಿಗೆಯಲ್ಲಿ ಅವರ ಮೊಬೈಲ್‌ ಸಂಖ್ಯೆ ನೋಡಿ ಕುಟುಂಬದವರಲ್ಲದೆ, ಅಪರಿಚಿತರೂ ಕರೆ ಮಾಡಿ ಅವರಿಗೆ ಶುಭಾಶಯ ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಖುಷಿ ಆಚರಣೆಯ ಚಿತ್ರಗಳನ್ನು ನೋಡಿ ಸಲಹೆಗಳನ್ನೂ ಕೇಳುತ್ತಿದ್ದಾರೆ.

‘ನನ್ನ ಖುಷಿಯನ್ನು ಅರ್ಥಮಾಡಿಕೊಂಡ ಅನೇಕ ಪುರುಷರು ನನಗೆ ಕರೆ ಮಾಡಿದ್ದಾರೆ. ಮಹಿಳೆಯರ ಪರವಾಗಿರುವ ಕಾನೂನಿನಲ್ಲಿ ಹೋರಾಟವನ್ನು ಹೇಗೆ ನಿಭಾಯಿಸಿದ್ದೀರಿ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವು ಮಹಿಳೆಯರು ತಮ್ಮ ಸೊಸೆಯೊಂದಿಗಿನ ಭಯಾನಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ರಿಂಕೇಶ್‌ ತಿಳಿಸಿದ್ದಾರೆ.

‘ನನ್ನ ಕುಟುಂಬದಿಂದ ಬೇರೆಯಾಗಿ ನೆಲೆಸಲು ಆರಂಭಿಸಿದಾಗಲೇ ಈ ಎಲ್ಲ ಸಮಸ್ಯೆಗಳೂ ಶುರುವಾದವು. ವಿಚ್ಛೇದನ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕವೇ ಮಹಿಳೆಯರ ಪರವಾದ ಕಾನೂನಿನ ಕುರಿತು ನನಗೆ ಅರಿವಾಗಿದ್ದು. ವಿಚ್ಛೇದನಕ್ಕೆ ಪರಿಹಾರವಾಗಿ ಆಕೆ ಬೇಡಿಕೆ ಇಟ್ಟ ಹಣ ನನ್ನ ಸಾಮರ್ಥ್ಯವನ್ನೂ ಮೀರಿದ್ದಾಗಿತ್ತು.  ಅತ್ಯುತ್ತಮ ವಕೀಲರು ಎನಿಸಿಕೊಂಡವರೂ ಅಸಹಾಯಕರಾಗಿದ್ದರು. ಇದಕ್ಕೆ ಎರಡು ವರ್ಷ

ಹೋರಾಡಬೇಕಾಯಿತು’ ಎಂದು ಹೇಳಿಕೊಂಡಿದ್ದಾರೆ.  ಆದರೆ  ಎಲ್ಲಿಯೂ ತಮ್ಮ ಮಾಜಿ ಪತ್ನಿಯ ವಿವರಗಳನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT