ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್‌ಕುಮಾರ ಮರೆಯಲಾಗದ ಮಹಾನ್ ವ್ಯಕ್ತಿ’

Last Updated 25 ಏಪ್ರಿಲ್ 2017, 6:05 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಶತಮಾನಗಳು ಉರುಳಿದರೂ ಕನ್ನಡದ ವರನಟ ನಟ, ಸಾರ್ವಭೌಮ ಡಾ.ರಾಜ್‌ಕುಮಾರ ಅವರನ್ನು ಮೆರೆಯಲು ಸಾಧ್ಯವಿಲ್ಲ. ಅವರೊಬ್ಬ ಅಪರೂಪದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಅವರಂತೆ ವಿಶಿಷ್ಟ ವ್ಯಕ್ತಿತ್ವ ಹೊಂದಬಹುದು’ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಅಭಿಪ್ರಾಯಪಟ್ಟರು.

ಗೊಟಗೋಡಿಯಲ್ಲಿ ಉತ್ಸವ ರಾಕ್ ಗಾರ್ಡನದ ರಾಜ್‌ಕುಮಾರ ವೃತ್ತದಲ್ಲಿ ಉತ್ಸವ ರಾಕ್ ಗಾರ್ಡನ್ ಸಮಿತಿ ಸಹಯೋಗದಲ್ಲಿ ನಡೆದ ಡಾ.ರಾಜ್ಕುಮಾರ ಅವರ 88ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ಅಗಾಧವಾದ ಎತ್ತರಕ್ಕೆ ಬೆಳೆದರೂ ಅಹಂಕಾರದಿಂದ ಮೆರೆಯಲಿಲ್ಲ. ಹಿರಿಯರೇ ಇರಲಿ, ಕಿರಿಯರೇ ಇರಲಿ ಎಲ್ಲರೊಂದಿಗೆ ಬೆರೆಯುವ ವಿಶಿಷ್ಟ ಗುಣ ಅವರದ್ದಾಗಿತ್ತು. ಹೀಗಾಗಿ ಅವರೊಬ್ಬ ಧ್ರುವ ನಕ್ಷತ್ರದಂತೆ ಕಾಣುತ್ತಾರೆ’ ಎಂದರು.

‘ಭಾರತೀಯ ಚಲನಚಿತ್ರರಂಗ ಕಂಡ ಮಹಾನ ನಟನಾಗಿದ್ದ ಅವರು ಕನ್ನಡವೇ ನನ್ನ ಸರ್ವಸ್ವ. ಅಭಿಮಾನಗಳೇ ನನ್ನ ದೇವರು ಎಂದ ದೇವತಾ ಮನುಷ್ಯರಾಗಿ ಬಾಳಿ ಬದುಕಿದ್ದರು. ಅಂತಹ ವ್ಯಕ್ತಿತ್ವ ಇತರರಲ್ಲಿ ಮೂಡಬೇಕು ಎಂದರು.ತಾಲ್ಲೂಕು ಪಂಚಾಯ್ತಿ  ಕಾರ್ಯ ನಿರ್ವಹಕ ಅಧಿಕಾರಿ ಜಿ.ಹನುಮಂತಪ್ಪ ಮಾತನಾಡಿ, ‘ರಾಜ್ ಅವರು ದೇಶ ಕಂಡ ಪುರುಷರಲ್ಲಿ ಒಬ್ಬರು. ಅವರ ಚಲನಚಿತ್ರ ಹಾಗೂ ವೈಯಕ್ತಿಕ ಜೀವನ ಪರಸ್ಪರ ಹತ್ತಿರವಾಗಿದ್ದವು. ಪ್ರತಿ ಪಾತ್ರಗಳಿಗೆ ಜೀವಕಳೆ ತುಂಬುವ ಮೂಲಕ ಜನಾರ್ಕಷಿಸುವ ಸಾಮರ್ಥ್ಯ ಅವರಲ್ಲಿತ್ತು. ಹೀಗಾಗಿ ಅವರ ಸ್ಮರಣೆ ಅರ್ಥಪೂರ್ಣವಾಗಿದೆ’ ಎಂದರು.

ವನಹಳ್ಳಿ ಗ್ರಾಮ ಪಂಚಾಯ್ತಿ ಗ್ರಾಮಾಭಿವೃದ್ಧಿ ಅಧಿಕಾರಿ ಶಿವಾನಂದ ಹಡಪದ, ಗಾರ್ಡನ್‌ನ ವ್ಯವಸ್ಥಾಪಕ ಸಿ.ಡಿ.ಪಾಟೀಲ, ಗಂಗಾಧರ ಕೆಂಚಣ್ಣನವರ, ಮಂಜುನಾಥ ಇಂದೂರ, ಬಸವರಾಜ ಹಾವಣಗಿ, ಶಿಗಾರ್ಡನದಲ್ಲಿ ಕಲಾವಿದರು ಇದ್ದರು.ಶೈಲಜಾ ಹಿರೇಮಠ  ನಿರೂಪಿಸಿ ದರು. ಮೇಘನಾ ಕವದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT