ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಎಸ್‌ ಗಂಗನಾಳ

Last Updated 25 ಏಪ್ರಿಲ್ 2017, 6:19 IST
ಅಕ್ಷರ ಗಾತ್ರ

ತಾವರಗೇರಾ : ಸಮೀಪದ ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಗಂಗನಾಳ ಗ್ರಾಮವು ಸರ್ಕಾರದ  ಸೌಲಭ್ಯಗಳಿಂದ ವಂಚಿತವಾಗಿದೆ.

‘ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಬಿಡುಗ ಡೆಯಲ್ಲಿ ವಿಳಂಬವಾಗುತ್ತಿದೆ. ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಲ್ಲ. ರೈತರಿಗೆ ಬೆಳೆ ಪರಿಹಾರ ನೀಡಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮದ ಬಹುತೇಕ ಕುಟುಂಬ ಗಳು  ಕೂಲಿ ಕೆಲಸ ನಂಬಿ ಬದುಕುತ್ತಿವೆ. ಆದರೆ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಕಾಮಗಾರಿ ಕೆಲಸದ ಕೂಲಿ ಹಣ ಪಾವತಿ ವಿಳಂಬ ಮಾಡುತ್ತಿದೆ’ ಎಂದು ಗ್ರಾಮದ ನಿವಾಸಿ ರಾಮಣ್ಣ ಮೂಲಿ ಆರೋಪಿಸಿದರು.

‘ಒಂದು ವರ್ಷದ ಹಿಂದೆ  ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ಕಾಮಗಾರಿ ಮುಗಿದಿವೆ. ಆದರೆ  ಕ್ರಿಯಾಯೋಜನೆ ಪ್ರಕಾರ ಫಲಾನು ಭವಿಗಳಿಗೆ ₹12 ಸಾವಿರ ನೀಡಬೇಕಿತ್ತು. ಆದರೆ, ಕೇವಲ ₹4,500  ನೀಡಿದ್ದಾರೆ’ ಎಂದರು.

‘ಎರಡು ತಿಂಗಳ ಹಿಂದೆ ಪ್ರಸ್ತುತ  ವರ್ಷದ ಬಜೆಟ್ ಕಾಮಗಾರಿಯ ವೈಯಕ್ತಿಕ ದನದ ದೊಡ್ಡಿ ಶೆಡ್ ನಿರ್ಮಾಣ ಮಾಡಿಕೊಂವರಿಗೂ ಹಣ ನೀಡಿಲ್ಲ’ ಎಂದು ದೂರಿದರು.

‘ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಕಾರಣ  ರೈತರ ಬೆಳೆ ಒಣಗುತ್ತಿದೆ. ದಿನಕ್ಕೆ ಮೂರು ತಾಸು ಇಲ್ಲವೆ ನಾಲ್ಕು ತಾಸು ಮಾತ್ರ ವಿದ್ಯುತ್ ಇರುತ್ತದೆ. ಗ್ರಾಮದಲ್ಲಿ ವಿದ್ಯುತ ಕೊರತೆಯಿಂದ ಜನರಿಗೆ  ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.  ಗ್ರಾಮದ ಎರಡು ಕೊಳವೆಬಾವಿಗಳು ಕೆಟ್ಟಿವೆ.  ಕೆಲವು ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಇಲ್ಲದೆ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಗ್ರಾಮಕ್ಕೆ ಒಂದು ನೀರು ಶುದ್ಧಿಕರಣ ಘಟಕ ಮಂಜೂರಾಗಿದ್ದು,  ಮೂರು ತಿಂಗಳ ಹಿಂದೆ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ.  ಆದರೆ ಇನ್ನೂ ಕಟ್ಟಡ ಕಾಮಗಾರಿ ಆರಂಭಿಸಿಲ’ ಎಂದು ಗ್ರಾಮದ ಮುದಕಪ್ಪ ತಳವಾರ ಹೇಳಿದರು.

‘ಸರ್ಕಾರ ನೀಡುವ ಬೆಳೆ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಿಲ್ಲ. ಗ್ರಾಮ ಲೆಕ್ಕಾಧಿಕಾರಿಯನ್ನು ಕೇಳಿದರೆ ವಾರದಲ್ಲಿ ಜಮಾ ಆಗುತ್ತದೆ ಎನ್ನುತ್ತಾರೆ. ಬ್ಯಾಂಕಿಗೆ ಹೋಗಿ ಕೇಳಿದರೆ ಇನ್ನೂ ಹಣ ಬಂದಿಲ್ಲ ಎಂಬ ಉತ್ತರ ನೀಡುತ್ತಾರೆ.  ರೈತರು ಪರಿಹಾರದ ಹಣ ಪಡೆಯಲು ಹರಸಾಹಸ ಪಡುವಂತಾ ಗಿದೆ.  ಗ್ರಾಮದಲ್ಲಿ ಕೇವಲ ಎಂಟು ಜನ ರೈತರಿಗೆ ಮಾತ್ರ ಬೆಳೆ ಪರಿಹಾರ ಹಣ ಜಮಾ ಆಗಿದೆ’ ಎಂದು ಹನಮಂತಪ್ಪ ಶಿರವಾರ ತಿಳಿಸಿದರು.    

‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಪಾಟೀಲ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದಿಲ್ಲ.   ಶಾಲಾ ಮೈದಾನ, ಹೊಲ ದ ರಸ್ತೆ ದುರಸ್ತಿ ಮಾಡಿಲ್ಲ.  ರೈತ ರಿಗೆ ಕೃಷಿ ತರಬೇತಿ, ಕೌಶಲ ತರಬೇತಿ  ಹೀಗೆ ಹಲವು ಯೋಜನೆಗಳ ಸೌಲಭ್ಯ ಜನರಿಗೆ ತಲು ಪುತ್ತಿಲ್ಲ. ಈ ಬಗ್ಗೆ ಜಿ.ಪಂ ಸಿಇಒಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

-ಕೆ.ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT