ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರಿಗೆ 20 ಸಾವಿರ ಮನೆ

Last Updated 25 ಏಪ್ರಿಲ್ 2017, 6:26 IST
ಅಕ್ಷರ ಗಾತ್ರ

ಬಳ್ಳಾರಿ: ‘ಹಮಾಲರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗಾಗಿ ನಗರ ಹೊರವಲಯದ ಮುಂಡರಗಿ ಬಳಿ 20 ಸಾವಿರ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಎರಡು–ಮೂರು ವಾರಗಳಲ್ಲಿ ಸರ್ಕಾರ ಅನುಮೋದನೆ ನೀಡಲಿದೆ’ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೋಮವಾರ ನೂತನ ಗೋದಾಮು ಹಾಗೂ ಬಹು­ಧಾನ್ಯಗಳ ಶುದ್ಧೀಕರಣ –ವರ್ಗೀಕರಣ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.\‘ಹಮಾಲರು, ದರ್ಜಿಗಳು, ಮೆಕ್ಯಾ­ನಿಕ್‌ಗಳು ಸೇರಿದಂತೆ ಅಸಂಘ-­ಟಿತರಾದ 15ಲಕ್ಷ ಕಾರ್ಮಿಕರಿಗೆ ಪಿಎಫ್ ಸೌಲಭ್ಯ­ವನ್ನು ಸರ್ಕಾರ ಕಲ್ಪಿಸಿದೆ. ಪಿಎಫ್ ಸೌಲಭ್ಯ ಪಡೆದವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು’ ಎಂದರು.

ಉಚಿತ: ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಗೋದಾಮು ಬಹು­ಧಾನ್ಯಗಳ ಘಟಕವನ್ನು ನಿರ್ಮಿಸ­ಲಾ­ಗಿದ್ದು, ರೈತರಿಗೆ ಉಚಿತವಾಗಿ ದೊರಕಲಿದೆ’ ಎಂದರು.‘ಬಳ್ಳಾರಿ ಎಪಿಎಂಸಿಯಲ್ಲಿ ಈ–-ಟೆಂಡರ್ ಮಾರಾಟ ವ್ಯವಸ್ಥೆ ಜಾರಿ­ಯಲ್ಲಿದೆ. ಅದರೊಂದಿಗೆ ಆನ್‌ಲೈನ್ ಮಾರ್ಕೆಟಿಂಗ್ ವ್ಯವವಸ್ಥೆಯನ್ನೂ ಕಲ್ಪಿ­ಸು­ವುದು ಅವಶ್ಯ. ಅದಕ್ಕೆ ಸಂಬಂಧಿ­ಸಿದಂತೆ ಕ್ರಿಯಾಯೋಜನೆ­ಯನ್ನು ಸಿದ್ದಪಡಿಸಿ ಸಲ್ಲಿಸಿದರೆ ಅನುಮೋದನೆ ದೊರಕಿಸ­ಲಾ­ಗು­ವುದು’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಂ ವೀರಭದ್ರಪ್ಪ, ‘ಜಿಲ್ಲೆಯಲ್ಲಿ ಮೆಣಸಿ­ನಕಾಯಿ ಬೆಳೆಯನ್ನು ಅತಿ ಹೆಚ್ಚು ಬೆಳೆಯ­ಲಾಗುತ್ತಿದ್ದು, ಬ್ಯಾಡಗಿಯ ಮಾರುಕಟ್ಟೆ ಕೇಂದ್ರವನ್ನು ಇಲ್ಲಿಯೇ ಸ್ಥಾಪಿಸಬೇಕು’ ಎಂದು ಪ್ರತಿಪಾದಿಸಿದರು.ಎಪಿಎಂಸಿ ಕಾರ್ಯದರ್ಶಿ ಜಿ.­ಖಲೀಲ್‌ ಸಾಬ್ ಪ್ರಾಸ್ತಾವಿಕ ಮಾತನಾ­ಡಿದರು. ಶಾಸಕ ಈ.ತುಕಾರಾಂ, ಮಹರ್ಷಿವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.­ಗಿರಿಮಲ್ಲಪ್ಪ, ನಿರಾಶ್ರಿತರ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಮೇಯರ್ ಜಿ.ವೆಂಕಟರಮಣ, ಬುಡಾ ಅಧ್ಯಕ್ಷ ಜೆ.ಎಸ್.ಅಂಜನೇಯಲು, ಜಿಲ್ಲಾ ಪಂಚಾಯತಿ ಸದಸ್ಯ ಅಲ್ಲಂ ಪ್ರಶಾಂತ, ಮುಂಡರಗಿ ನಾಗರಾಜ, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಸಿ.ಎಚ್.­ಮೋಹನ್, ಮಾರುಕಟ್ಟೆ ಅಭಿವೃದ್ಧಿ ಯೋಜನೆಯ ಸಹಾಯಕ ಕಾರ್ಯ­ನಿರ್ವಾಹಕ ಎಂಜನಿಯರ್ ಅಖ್ತರ್ ಮುಹಿಯುದ್ದೀನ್, ಎಪಿಎಂಸಿ ಅಧ್ಯಕ್ಷ ಸರಗು ನಾಗರಾಜ ಹಾಜರದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT