ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಮಹಿಳಾ ಪಿಎಸ್‌ಐ ಮಂಜಿತ್‌ ಕೌರ್‌ ‘ಸಲಿಂಗ ವಿವಾಹ’

Last Updated 25 ಏಪ್ರಿಲ್ 2017, 17:18 IST
ಅಕ್ಷರ ಗಾತ್ರ

ಜಲಂದರ್‌: ಪಂಜಾಬ್‌ನ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿರುವ ‘ಸಲಿಂಗ ವಿವಾಹ’ದ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಪರ ವಿರೋಧ ಅಭಿ‍ಪ್ರಾಯಗಳು ವ್ಯಕ್ತವಾಗುತ್ತಿವೆ.

30 ವರ್ಷ ವಯೋಮಾನದ ಮಹಿಳಾ ಪಿಎಸ್‌ಐ ಮಂಜಿತ್‌ ಕೌರ್‌ ಅವರು ತಮ್ಮ ಬಾಳ ಸಂಗಾತಿಯಾಗಿ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನೆರವೇರಿದ್ದು, ಕೌರ್‌ ತಮ್ಮ ಸಂಗಾತಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಪಂಜಾಬಿ ಸಾಂಪ್ರದಾಯಿಕ ವರನ ಉಡುಪು ಧರಿಸಿದ್ದ ಕೌರ್‌, ತಲೆಗೆ ಕೆಂಪು ಪೇಟವನ್ನು ಹಾಕಿಕೊಂಡಿದ್ದರು. ವಧು ಪಂಜಾಬಿ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವಾಧ್ಯಮೇಳಗಳೊಂದಿಗೆ ಕುದುರೆ ಸಾರೋಟಿನಲ್ಲಿ ಕುಳಿತು ಮೆರವಣಿಗೆ ಸಾಗಿದರು.‌

ಈ ವಿವಾಹ ಕಾರ್ಯಕ್ರಮ ಏ.22ರಂದು ಕೌರ್ ಅವರ ಕುಟುಂಭದ ಉಪಸ್ಥಿತಿಯಲ್ಲಿಯೇ ನಡೆದಿದ್ದು, ಮಂಜಿತ್‌ ಅವರ ಸಹಪಾಠಿಗಳು ಹಾಗೂ ಸಹೋದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು ಎಂದು India.com ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT