ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ಬ್ರಾಡ್‌ಕಾಸ್ಟ್‌ ಪ್ರೊ ಆ್ಯಪ್…

ಮಾರುಕಟ್ಟೆ ಮಾತು
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಜಾಗತಿಕವಾಗಿ ಉತ್ತಮ ಹೆಸರು ಮಾಡಿರುವ ಕ್ಲೇ ಸಾಫ್ಟ್‌ವೇರ್‌ ಕಂಪೆನಿ ಇದೀಗ ಪ್ರವಾಸಿಗರ ರಕ್ಷಣೆಗಾಗಿ ನೂತನ ಆ್ಯಪ್ ಅಭಿವೃದ್ಧಿಪಡಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ.
 
ಬ್ರಾಡ್‌ಕಾಸ್ಟ್‌ ಪ್ರೊ ಆ್ಯಪ್ ಅನ್ನು ಐಒಎಸ್, ವಿಂಡೋಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಖರೀದಿಗೆ ಗ್ರಾಹಕರು ಸ್ವಲ್ಪ ಹಣ ತೆರಬೇಕಾಗುತ್ತದೆ. ಇದರ ಮತ್ತೊಂದು ಹೆಗ್ಗಳಿಕೆ ಎಂದರೇ ಇದು ಇಂಟರ್‌ನೆಟ್‌ ಸಂಪರ್ಕ ಇರದಿದ್ದರೂ (ಆಫ್‌ಲೈನ್‌)  ಕೆಲಸ ಮಾಡುತ್ತದೆ! ಚಾರಣಿಗರು, ಪ್ರವಾಸಿಗರು, ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯ ನಡೆಸುವ ಸಂಶೋಧಕರಿಗೆ ಹೆಚ್ಚು ಉಪಯುಕ್ತವಾಗಿದೆ.
 
ಜಿಪಿಆರ್್ಎಸ್ ಮತ್ತು ಗೂಗಲ್ ಮ್ಯಾಪಿಂಗ್ ತಂತ್ರಜ್ಞಾನದಲ್ಲಿ ಈ ಆ್ಯಪ್ ಕೆಲಸ ಮಾಡುತ್ತದೆ. ಉದಾಹರಣೆಗೆ ಪ್ರವಾಸಿಗನೊಬ್ಬ ಅರಣ್ಯ ಪ್ರದೇಶದಲ್ಲಿ ತಪ್ಪಿಸಿಕೊಂಡಿದ್ದರೆ ಇದು ಗೂಗಲ್ ಮ್ಯಾಪ್ ನೆರವಿನ ಮೂಲಕ ಪ್ರವಾಸಿಗನನ್ನು ಸುಲಭವಾಗಿ ಪತ್ತೆ ಹಚ್ಚುತ್ತದೆ. ತಪ್ಪಿಸಿಕೊಂಡಿರುವ ಪ್ರವಾಸಿಗನ ಬಳಿ ಮೊಬೈಲ್ ಸಾಧನ ಇರುವುದರ ಜತೆಗೆ ಬ್ರಾಡ್‌ಕಾಸ್ಟ್‌ ಪ್ರೊ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರೆ ಮಾತ್ರ ಪತ್ತೆಹಚ್ಚಲು ಸಾಧ್ಯ. 
 
ಬಳಕೆದಾರರು ತಮ್ಮ ಆ್ಯಪ್‌ನಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿದ್ದರೆ ಅವರಿಗೆ ಎಚ್ಚರಿಕೆಯ ಸಂದೇಶಗಳನ್ನು ಆ್ಯಪ್ ಸ್ವಯಂ ಚಾಲಿತವಾಗಿ ರವಾನಿಸುತ್ತಿರುತ್ತದೆ. ತಪ್ಪಿಸಿಕೊಂಡಿರುವ ಗ್ರಾಹಕ ಕ್ಯಾಮೆರಾ ಮೂಲಕ ತಾನು ಇರುವ ಸ್ಥಳವನ್ನು ವಿಡಿಯೊ ಮೂಲಕ ಆಫ್‌ಲೈನ್‌ನಲ್ಲಿ ಕಳುಹಿಸಿಕೊಡಬಹುದು. 
ಗೂಗಲ್ ಪ್ಲೇಸ್ಟೋರ್: Broadcast pro app
 
ಸ್ವಸ್ಥ ಭಾರತ್ ಹೆಲ್ತ್ ಆ್ಯಪ್…
ದೇಶದ ಸ್ಮಾರ್ಟ್ ಸಿಟಿಗಳು, ಎರಡನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶದ ನಾರಿಕರಿಗೆ ಆರೋಗ್ಯ ಸೇವೆ ನೀಡುವ ಸಲುವಾಗಿ ಮ್ಯಾಪ್ ಮೈ ಇಂಡಿಯಾ ಮತ್ತು ವಿ.ಐ.ಎಸ್.ಟಿ ಇಂಟರ್ನೆಟ್ ಪೂರೈಕೆ ಸೇವಾ ಕಂಪೆನಿಗಳು ನೂತನ ಸ್ವಸ್ಥ ಭಾರತ್ ಹೆಲ್ತ್ ಆ್ಯಪ್ ವಿನ್ಯಾಸ ಮಾಡಿವೆ. 
 
ಈ ಆ್ಯಪ್ ಗೂಗಲ್ ಮ್ಯಾಪ್ ಮತ್ತು ಜಿಪಿಆರ್್ಎಸ್್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತದೆ. ಮಹಾ ನಗರಗಳಲ್ಲಿ ಸಾರ್ವಜನಿಕರು ಆ್ಯಪ್ ಮೂಲಕ ಆರೋಗ್ಯ ಸೇವಾ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆದರೆ, ಜಿಲ್ಲಾ ಮಟ್ಟದ ಜನರಿಗೆ ಇಂತಹ ಅವಕಾಶಗಳು ಲಭ್ಯವಿರುವುದಿಲ್ಲ.
 
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೂ ಸಹ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಮಹಾನಗರಗಳ ಜನರಿಗೆ ಸಿಗುವಂತಹ ಆರೋಗ್ಯ ಸೇವಾ ಮಾಹಿತಿ ಇವರಿಗೂ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಈ ಆ್ಯಪ್ ವಿನ್ಯಾಸ ಮಾಡಲಾಗಿದೆ ಎಂದು ಮ್ಯಾಪ್ ಮೈ ಇಂಡಿಯಾ ಕಂಪೆನಿಯ ಮುಖ್ಯಸ್ಥ ರೋಹನ್ ವರ್ಮಾ ಹೇಳುತ್ತಾರೆ.
 
ಬಳಕೆದಾರರು ಈ ಆ್ಯಪ್ ಅನ್ನು ಗೂಗಲ್ ಪೇಸ್ಟೋರ್ ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರ ಮೂಲಕ ಆಂಬ್ಯುಲೆನ್ಸ್ ಸೇವೆಯ ಲಭ್ಯತೆ, ಹತ್ತಿರದ ಆಸ್ಪತ್ರೆ, ಕ್ಲಿನಿಕ್, ಪ್ರಯೋಗಾಲಯ, ಫಾರ್ಮಸಿ, ವೈದ್ಯರ ಮಾಹಿತಿ ಪಡೆಯಬಹುದು. ಹಾಗೇ ವೈದ್ಯರು ಮತ್ತು ಫಾರ್ಮಸಿ ನೌಕರಿಗೆ ಸಂದೇಶಗಳನ್ನು ಕಳುಹಿಸಬಹುದು ಮತ್ತು ವಿಡಿಯೊ ಚಾಟಿಂಗ್ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. 
ಗೂಗಲ್ ಪ್ಲೇಸ್ಟೋರ್: swastha bharat m-health app
 
ಒಬಿನೊ ಆರೋಗ್ಯ ಆ್ಯಪ್…
ಮುಂಬೈ ಮೂಲದ ಮನ್ನಾ ಹೆಲ್ತ್ ಕೇರ್ ಕಂಪೆನಿಯು ಗ್ರಾಹಕರ ಅನುಕೂಲಕ್ಕೆ ನೂತನ ಒಬಿನೊ ಆರೋಗ್ಯ ಆ್ಯಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಆಹಾರ ಮತ್ತು ವ್ಯಾಯಾಮದ ಬಗ್ಗೆ ತರಬೇತಿ ನೀಡುವ ಆ್ಯಪ್ ಆಗಿದೆ.
 
ಫಿಟ್್ನೇಸ್ ತರಬೇತಿದಾರ ಮತ್ತು ಆಹಾರ ತಜ್ಞರನ್ನು ಸಂಪರ್ಕ ಮಾಡದೇ ಈ ಆ್ಯಪ್ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಆ್ಯಪ್ ವಿನ್ಯಾಸಕರು ಹೇಳಿದ್ದಾರೆ, ಬಾಡಿ ಬಿಲ್ಡಿಂಗ್, ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಸಿಕೊಳ್ಳುವುದಕ್ಕೂ ಒಬಿನೊ ಆ್ಯಪ್ ಸಹಾಯ ಮಾಡುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದ್ದು ಈವರೆಗೂ ಇದನ್ನು 5 ಲಕ್ಷ ಜನರು ಬಳಕೆ ಮಾಡುತ್ತಿದ್ದಾರೆ ಎಂದು ಕಂಪೆನಿ ತಿಳಿಸಿದೆ.
 
ಆ್ಯಪ್ ಬಳಕೆಯಿಂದಾಗಿ ಗ್ರಾಹಕರಿಗೆ ಇಲ್ಲಿಯವರೆಗೂ ಯಾವುದೇ ತೊಂದರೆ ಅಥವಾ ಅಡ್ಡಪರಿಣಾಮಗಳು ಉಂಟಾದ ಬಗ್ಗೆ ದೂರುಗಳು ಬಂದಿಲ್ಲ. ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಕಾಲ ಕಾಲಕ್ಕೆ ಒಬಿನೊ ಆ್ಯಪ್‌ಗೆ ಸೇರಿಸಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಈ ಆ್ಯಪ್ ಅನ್ನು ಗ್ರಾಹಕರು ಹಣಕೊಟ್ಟು ಖರೀದಿಸಬೇಕು.
ಗೂಗಲ್ ಪ್ಲೇಸ್ಟೋರ್: obino app
 
ವೈಫೈ ನೆಟ್‌ವರ್ಕ್‌ ಹೆಚ್ಚಿಸುವ ವೇಟ್‌ಸೂಟ್‌ ಆ್ಯಪ್…
ಸಾಮಾನ್ಯವಾಗಿ ಕಚೇರಿಯಲ್ಲಿರುವ ನೌಕರರು, ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ನೆಟ್‌ವರ್ಕ್‌ ಬಳಸುವ ಬಳಕೆದಾರರು ವೈಫೈ ಸಂಪರ್ಕ ವೇಗ ತುಂಬಾ ಕಡಿಮೆ ಇದೆ ಗೋಳಾಡುತ್ತಿರುತ್ತಾರೆ. ಯಾಕೆಂದರೆ 10 ಜನ ಬಳಸುವಂತಹ ನೆಟ್‌ವರ್ಕ್‌ ಅನ್ನು 20 ಜನ ಬಳಸಿದರೆ ಸಹಜವಾಗಿಯೇ ಸಂಪರ್ಕದ ವೇಗ ಕಡಿಮೆಯಾಗುತ್ತದೆ. ಇದೀಗ ಅಮೆರಿಕದ ವಿಜ್ಞಾನಿಗಳು ಆ್ಯಪ್ ಮೂಲಕ ಈ ಸಮಸ್ಯೆ ಬಗೆಹರಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮೆಸಾಚುಸ್ಸೆಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವೈಫೈ ನೆಟ್‌ವರ್ಕ್‌ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ವೇಟ್‌ಸೂಟ್‌ ಎಂದು ನಾಮಕರಣ ಮಾಡಿದ್ದಾರೆ. ಬಳಕೆದಾರರು ಈ ಆ್ಯಪ್ ಮೂಲಕ ವೈಫೈ ಸಂಪರ್ಕ ಜಾಲದ ವೇಗವನ್ನು ಅನ್ನು ಹೆಚ್ಚಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಆ್ಯಪ್ ಇನ್ನು ಪ್ರಯೋಗದ ಹಂತದಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ವಿನ್ಯಾಸಕರು ತಿಳಿಸಿದ್ದಾರೆ.
ಗೂಗಲ್ ಪ್ಲೇಸ್ಟೋರ್: waitsuite app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT