ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮತ್ತು ‘ವೇಟೇಜ್’

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಸಮಾಜದಲ್ಲಿ ಜನಸಾಮಾನ್ಯರು ಮತ್ತು ವಿಐಪಿಗಳಿಗೆ ವ್ಯತ್ಯಾಸವಿದೆ. ಸಭೆ – ಸಮಾರಂಭಗಳಿಗೆ ಕೆಂಪು ದೀಪ ಇಲ್ಲದ ವಾಹನದಲ್ಲಿ ಹೋದರೆ, ಜನಪ್ರತಿನಿಧಿಗಳಿಗೆ ‘ವೇಟೇಜ್’ ಇರುವುದಿಲ್ಲ’  ಎಂದು   ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ (ಪ್ರ.ವಾ. ಏ. 25).
ಕೆಲಸ ಮಾಡಲು ‘ವೇಟೇಜ್’ ಇರಬೇಕು ಎಂಬ ವಿಚಾರವೇ ಆಶ್ಚರ್ಯಕರವಾಗಿದೆ.

ಸಿಂಗಪುರದ ಪ್ರಧಾನಿ ಸಾರ್ವಜನಿಕ ರೈಲಿನಲ್ಲಿ,  ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ನಮ್ಮ ಪ್ರಧಾನಿಯವರೂ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ರೈತ ತನ್ನ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡುತ್ತಲೇ ಇರುತ್ತಾನೆ. ಅವನೇನಾದರೂ ‘ವೇಟೇಜ್’ ಕೇಳುತ್ತಾನೆಯೇ?

‘ವೇಟೇಜ್’ ಎಂಬುದು ಆಡಂಬರದ ವಸ್ತುವಲ್ಲ. ಅದನ್ನು ಯಾರೂ ತೋರಿಸಿಕೊಳ್ಳಬೇಕಾಗಿಲ್ಲ. ನಿಸ್ವಾರ್ಥ ಮನೋಭಾವದಿಂದ ತನ್ನ ಕೆಲಸವನ್ನು ತಾನು ಮಾಡುತ್ತಾ ಹೋಗುವವನನ್ನು ಪ್ರತಿಷ್ಠೆ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಆದ್ದರಿಂದ, ನಮ್ಮ ಜನಪ್ರತಿನಿಧಿಗಳು ಕರ್ತವ್ಯ ನಿಷ್ಠರಾಗುವುದು ಅಪೇಕ್ಷಣೀಯವೇ ಹೊರತು, ‘ವೇಟೇಜ್’ನ ಬೆನ್ನು ಹತ್ತುವುದು ಖಂಡಿತಕ್ಕೂ ಅಲ್ಲ.

–ಉಡುಪಿ ಅನಂತೇಶ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT