ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಲಕ್ಷದ ಟಿಕೆಟ್‌ಗೆ ₹1 ಕೋಟಿಯ ದಾವೆ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಪಡೆದಿದ್ದರೂ ಒತ್ತಾಯಪೂರ್ವಕವಾಗಿ ವಿಮಾನದಿಂದ ಕೆಳಗಿಳಿಸಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಯುನೈಟೆಡ್ ಏರ್‌ಲೈನ್ಸ್ ವಿರುದ್ಧ ದಾವೆ ಹೂಡಿದ್ದಾರೆ. 1.50 ಲಕ್ಷ ಅಮೆರಿಕನ್ ಡಾಲರ್ (ಸುಮಾರು ₹1 ಕೋಟಿ) ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಜೆರ್ಸಿಯ ನೆವಾರ್ಕ್‌ನಿಂದ ಲಂಡನ್‌ಗೆ ಹೊರಟಿದ್ದ ಕರೆನ್ ಶಿಬೊಲೆಥ್ ಎಂಬುವರು 3146 ಅಮೆರಿಕನ್ ಡಾಲರ್ (ಸುಮಾರು ₹2.10 ಲಕ್ಷ) ನೀಡಿ ಟಿಕೆಟ್ ಪಡೆದಿದ್ದರು.

‘ವಿಮಾನ ಹತ್ತಿದ ಬಳಿಕ ಸಿಬ್ಬಂದಿಯೊಬ್ಬರು ನನ್ನನ್ನು ವಿಮಾನದ ಹಿಂಭಾಗದ ಸೀಟ್‌ನತ್ತ ತೆರಳುವಂತೆ ಒತ್ತಾಯಿಸಿ, ಅವಾಚ್ಯವಾಗಿ ನಿಂದಿಸಿ ತಳ್ಳಿದರು’ ಎಂದು ಮ್ಯಾನ್‌ಹಟನ್ ಕೋರ್ಟ್‌ಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT