ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕರನ್‌ ಬಂಧನ

Last Updated 26 ಏಪ್ರಿಲ್ 2017, 11:28 IST
ಅಕ್ಷರ ಗಾತ್ರ

ನವದೆಹಲಿ: ಎಐಎಡಿಎಂಕೆ (‘ಅಮ್ಮ’ ಬಣ) ನಾಯಕ ಟಿ.ಟಿ.ವಿ. ದಿನಕರನ್‌ ಅವರನ್ನು, ನಾಲ್ಕು ದಿನಗಳ ವಿಚಾರಣೆ ಬಳಿಕ ಇಲ್ಲಿನ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ತಮ್ಮ ಬಣಕ್ಕೇ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಿದ ಆರೋಪವನ್ನು
ಅವರು ಎದುರಿಸುತ್ತಿದ್ದಾರೆ.

--------------

‘ದಿನಕರನ್‌ ವಿರುದ್ಧ ಕ್ರಮ ಏಕಿಲ್ಲ’

ನವದೆಹಲಿ: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ (‘ಅಮ್ಮ’ ಬಣ) ನಾಯಕ ದಿನಕರನ್‌ ವಿರುದ್ಧ  ಏಕೆ ಕ್ರಮಕೈಗೊಂಡಿಲ್ಲ ಎಂದು ವಿಶೇಷ ನ್ಯಾಯಾಲಯ ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.

ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಸುಕೇಶ್‌ ಚಂದ್ರಶೇಖರನನ್ನು ಮಂಗಳವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶ ಪೂನಂ ಚೌಧರಿ ಅವರು ದಿನಕರನ್‌ ಕುರಿತು ಪ್ರಶ್ನಿಸಿದರು.

‘ಪ್ರಮುಖ ಆರೋಪಿಯ ಸ್ಥಿತಿ ಏನು? ದಿನಕರನ್‌ ವಿರುದ್ಧ ಏನು ಕ್ರಮಕೈಗೊಳ್ಳಲಾಗಿದೆ. ಎಲ್ಲ ಆರೋಪಗಳು ಆತನ ವಿರುದ್ಧವೇ ಇರುವಾಗ ನೀವು ಏಕೆ  ಕ್ರಮಕೈಗೊಳ್ಳಲು  ಮುಂದಾಗುತ್ತಿಲ್ಲ’ ಎಂದು ನ್ಯಾಯಾಧೀಶರು ಅಪರಾಧ ವಿಭಾಗದ ಪೊಲೀಸರನ್ನು ಪ್ರಶ್ನಿಸಿದರು.

ಭಾವಚಿತ್ರ ತೆಗೆಯಿರಿ: ಎಐಎಡಿಎಂಕೆ ಮುಖ್ಯ ಕಚೇರಿಯಲ್ಲಿರುವ ವಿ.ಕೆ. ಶಶಿಕಲಾ ಅವರ ಭಾವಚಿತ್ರಗಳನ್ನು ತೆಗೆದು ಹಾಕುವಂತೆ  ಒ. ಪನ್ನೀರ್‌ಸೇಲ್ವಂ ಬಣ ಒತ್ತಾಯಿಸಿದೆ. ‘ಕಚೇರಿಯ ಪಾವಿತ್ರ್ಯತೆಯನ್ನು ಕಾಪಾಡಲು ಶಶಿಕಲಾ ಭಾವಚಿತ್ರಗಳನ್ನು ತೆಗೆದು ಹಾಕುವ ಅಗತ್ಯವಿದೆ’ ಎಂದು ಮುಖಂಡ ಇ. ಮದುಸೂಧನನ್‌  ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT