ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು, ರಕ್ಷಣಾ ಸಂಶೋಧನೆ ಸಂಸ್ಥೆಗಳ ವೆಬ್‌ಸೈಟ್‌ಗೆ ಕನ್ನ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪರಮಾಣು ಸಂಶೋಧನೆ ಮತ್ತು ರಕ್ಷಣಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸಂಸ್ಥೆಗಳು ಸೇರಿದಂತೆ 10 ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ದುಷ್ಕರ್ಮಿಗಳು ಕನ್ನ (ಹ್ಯಾಕ್‌) ಹಾಕಿದ್ದಾರೆ. ಜೊತೆಗೆ, ಅವುಗಳಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆಯನ್ನು ಪ್ರದರ್ಶಿಸಿದ್ದಾರೆ.

‘ಪಾಕಿಸ್ತಾನ ಹ್ಯಾಕ್ಸರ್‌್ಸ ಕ್ರೂ’ (ಪಿಎಚ್‌ಸಿ) ಎಂದು ಹೇಳಿಕೊಂಡಿರುವ ಹ್ಯಾಕರ್‌ಗಳ ಗುಂಪು, ‘ವೆಬ್‌ಸೈಟ್‌ನಲ್ಲಿರುವ ಯಾವುದೇ ಮಾಹಿತಿ ಕದ್ದಿಲ್ಲ ಅಥವಾ ಅಳಿಸಿ ಹಾಕಿಲ್ಲ. ಭಾರತೀಯರಿಗೆ ನಮ್ಮ ಸಂದೇಶವನ್ನು ರವಾನಿಸಲು ಹ್ಯಾಕ್‌ ಮಾಡಿದ್ದೇವೆ’ ಎಂದು ಹೇಳಿದೆ.

‘ಭಾರತ ಸರ್ಕಾರ ಮತ್ತು ಭಾರತದ ಪ್ರಜೆಗಳಿಗೆ ಶುಭಾಶಯಗಳು. ನಿಮ್ಮ ಹೀರೋಗಳು (ಸೈನಿಕರು) ಕಾಶ್ಮೀರದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಕಾಶ್ಮೀರದ ಹಲವಾರು ಮುಗ್ಧ ಜನರನ್ನು ಅವರು ಕೊಲ್ಲುತ್ತಿದ್ದಾರೆ ಎಂಬುದು ಗೊತ್ತಿದೆಯೇ?’ ಎಂಬ ಸಂದೇಶಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ.

‘ಅವರು ಹಲವು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಿದೆಯೇ? ಕಾಶ್ಮೀರದಲ್ಲಿ ಈಗಲೂ ಅವರು ಅತ್ಯಾಚಾರ ಮಾಡುತ್ತಿದ್ದಾರೆ ಎಂಬುದು ತಿಳಿದಿದೆಯೇ? ನಿಮ್ಮ ಸಹೋದರ, ಸಹೋದರಿ, ಅಪ್ಪ ಮತ್ತು ಅಮ್ಮಂದಿರನ್ನು ಕೊಂದರೆ ನಿಮಗೆ ಹೇಗನ್ನಿಸುತ್ತದೆ? ಯಾರಾದರೂ ನಿಮ್ಮ ತಾಯಿ ಅಥವಾ ಸಹೋದರಿ ಮೇಲೆ ಅತ್ಯಾಚಾರ ಮಾಡಿದರೆ ಹೇಗನಿಸಬಹುದು? ನಿಮ್ಮ ಜೀವನ ಮತ್ತು ಕುಟುಂಬ ನಾಶವಾಗುವುದಿಲ್ಲವೇ ಎಂದುಸಂದೇಶದಲ್ಲಿ ಪ್ರಶ್ನಿಸಲಾಗಿದೆ.

ಕಾಶ್ಮೀರದಲ್ಲಿ ಸೇನೆಯು ಜನರ ಮೇಲೆ ನಡೆಸುತ್ತಿದೆ ಎನ್ನಲಾದ ಕ್ರೌರ್ಯವನ್ನು ತೋರಿಸುತ್ತಿರುವ ಮತ್ತು ಅದರ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿರುವ ಎರಡು ವಿಡಿಯೊಗಳಿಗೆ  ‘ಪಾಕಿಸ್ತಾನ ಜಿಂದಾಬಾದ್‌’ ಶೀರ್ಷಿಕೆ ನೀಡಲಾಗಿದೆ.

ಸಂಸ್ಥೆಗಳ ಹೆಸರು:  ಗ್ರೇಟರ್‌ ನೊಯಿಡಾದ ಆರ್ಮಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಟೆಕ್ನಾಲಜಿ, ಡಿಫೆನ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಟೆಕ್ನಾಲಜಿ, ಕೋಲ್ಕತ್ತದ ಆರ್ಮಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟರೀಸ್‌,  ಬೋರ್ಡ್‌ ಆಫ್‌  ರಿಸರ್ಚ್‌ ಇನ್‌ ನ್ಯೂಕ್ಲಿಯರ್‌ ಸೈನ್ಸಸ್‌ (ಬಿಆರ್‌ಎನ್‌ಎಸ್‌), ದೆಹಲಿ ವಿಶ್ವವಿದ್ಯಾಲಯ, ಅಲಿಗಡ ಮುಸ್ಲಿಂ ವಿವಿ, ಐಐಟಿ ದೆಹಲಿ, ಐಐಟಿ ಭುವನೇಶ್ವರ, ರಾಜಸ್ತಾನದ ಕೋಟ ವಿವಿಗಳ ವೆಬ್‌ಸೈಟ್‌ಗಳಿಗೆ ಕನ್ನ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT