ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಫ್‌ಟಿಆರ್‌ಐ: ‘ಟೆಫ್’ ಧಾನ್ಯ ಬಿಡುಗಡೆ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಮೈಸೂರಿನಲ್ಲಿ ಇರುವ  ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರವು (ಸಿಎಫ್‌ಟಿಆರ್‌ಐ), ‘ಟೆಫ್’ ಹೆಸರಿನ ಹೊಸ ಆಹಾರ ಧಾನ್ಯ ಪರಿಚಯಿಸಿದೆ.

ಇಥಿಯೊಪಿಯಾ ಮೂಲದ ಈ ಧಾನ್ಯವು  ಕಂದು ಮತ್ತು ಬಿಳಿ ಬಣ್ಣದಲ್ಲಿ ಇರಲಿದೆ.  ಈ ಧಾನ್ಯವು  ಬರ ನಿರೋಧಕ ಬೆಳೆಯಾಗಿದೆ. ಪ್ರತಿ ಎಕರೆಗೆ 200ರಿಂದ 250 ಕೆಜಿಗಳಷ್ಟು ಇಳುವರಿ ನೀಡಲಿದೆ. ಇದನ್ನು ಮುಂಗಾರು ಮತ್ತು ಹಿಂಗಾರು ಋತುಗಳಲ್ಲಿ ಬೆಳೆಯಬಹುದಾಗಿದೆ  ಎಂದು ‘ಸಿಎಫ್‌ಟಿಆರ್‌ಐ’ ತಿಳಿಸಿದೆ.
ರಾಜ್ಯದ ಒಣ ಪ್ರದೇಶದಲ್ಲಿರುವ ಜಿಲ್ಲೆಗಳಲ್ಲಿ ಬೆಳೆಯಲೂ ಇದು  ಸೂಕ್ತವಾಗಿದೆ. ರಾಜ್ಯದಲ್ಲಿ ಈ ಧಾನ್ಯದ ಉಪಯುಕ್ತತೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ‘ಸಿಎಫ್‌ಟಿಆರ್‌ಐ’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.

‘ಟೆಫ್’ ಧಾನ್ಯಕ್ಕೆ ಹೊಂದಿಕೊಳ್ಳುವಂತಹ ಪಾಕ ವಿಧಾನಗಳನ್ನು ಭಾರತೀಯ ಸಾಂಪ್ರದಾಯಿಕ ಆಹಾರಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸಲು ಕೂಡ ಯೋಜಿಸಿದೆ.

ಶ್ರೀ ಶ್ರೀ ರವಿಶಂಕರ್  ಅವರು ತಮ್ಮ ಆಶ್ರಮದಲ್ಲಿ ಈ ಧಾನ್ಯ ಬಿಡುಗಡೆ ಮಾಡಿದರು. ರೈತರಿಗೆ ಇದರ ಉಪಯುಕ್ತತೆ ಮನದಟ್ಟು ಮಾಡಿಕೊಡಲು ‘ಸಿಎಫ್‌ಟಿಆರ್‌ಐ’, ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಜತೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT