ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ನಿವ್ವಳ ಲಾಭ ₹2,267 ಕೋಟಿ

Last Updated 25 ಏಪ್ರಿಲ್ 2017, 19:29 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಸಂಸ್ಥೆಯಾಗಿರುವ ವಿಪ್ರೊ, ನಾಲ್ಕನೆ ತ್ರೈಮಾಸಿಕದಲ್ಲಿ ₹ 2,267 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ವರಮಾನವು ₹ 15,033 ಕೋಟಿಗಳಷ್ಟಾಗಿದೆ.  ವರ್ಷದ ಹಿಂದೆ ಸಂಸ್ಥೆಯ ಒಟ್ಟು ವರಮಾನವು ₹ 14,312 ಕೋಟಿ ಮತ್ತು ನಿವ್ವಳ ಲಾಭವು ₹ 2,257 ಕೋಟಿಗಳಷ್ಟಿತ್ತು.

ಬೋನಸ್‌ ಷೇರು: ಎರಡು ತಿಂಗಳಲ್ಲಿ   ಬೋನಸ್‌ ಷೇರು ವಿತರಿಸುವುದಾಗಿ ಸಂಸ್ಥೆಯ ಸಿಇಒ ಅಬಿದಾಲಿ  ನಿಮೂಚ್‌ವಾಲಾ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಷೇರುದಾರರಿಗೆ ಹೆಚ್ಚಿನ ಲಾಭ ಮರಳಿಸಲು ಇನ್ಫೊಸಿಸ್‌ ಮತ್ತು ಟಿಸಿಎಸ್‌ ಸಂಸ್ಥೆಗಳು ಷೇರು ಮರು ಖರೀದಿಗೆ ಮುಂದಾಗಿರುವುದರಿಂದ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

ಷೇರುದಾರರು ಹೊಂದಿರುವ ಪ್ರತಿ ಒಂದು ಷೇರಿಗೆ ಒಂದು ಬೋನಸ್‌ ಷೇರು  ವಿತರಿಸಲು ನಿರ್ಧರಿಸಿದೆ.

ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆ  ಉತ್ತೇಜಿಸಲು, ನಗದುತನ   ಮತ್ತು ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಹೆಚ್ಚಿಸಲು ಈ  ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ಮಾರ್ಚ್‌ ಅಂತ್ಯಕ್ಕೆ ಸಂಸ್ಥೆಯ ಲಾಭವು ₹ 2,518 ಕೋಟಿಗಳಷ್ಟಿದ್ದು, ಶೇ 5ರಷ್ಟು ಕಡಿಮೆಯಾಗಿದೆ.   ಒಟ್ಟು ವರಮಾನವು  ₹ 57,995 ಕೋಟಿಗಳಷ್ಟಾಗಿ ₹ ಶೇ 7.4ರಷ್ಟು ಏರಿಕೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT