ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇಯಲ್ಲಿ ಡಾಲರ್‌ ಇಂಡಸ್ಟ್ರೀಸ್‌

Last Updated 25 ಏಪ್ರಿಲ್ 2017, 19:36 IST
ಅಕ್ಷರ ಗಾತ್ರ

ಮುಂಬೈ: ದೇಶದ ಪ್ರಮುಖ ಸಿದ್ಧ ಉಡುಪು ತಯಾರಿಕಾ ಸಂಸ್ಥೆಯಾಗಿರುವ ಕೋಲ್ಕತ್ತದಲ್ಲಿ ಪ್ರಧಾನ ಕಚೇರಿ ಹೊಂದಿರುವ ಡಾಲರ್  ಇಂಡಸ್ಟ್ರೀಸ್‌ ಲಿಮಿಟೆಡ್‌, ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ವಹಿವಾಟು ಆರಂಭಿಸಿದೆ.

ವಹಿವಾಟು ಆರಂಭದ ದಿನ ಸಂಸ್ಥೆಯ ಷೇರು ಬೆಲೆ ₹ 1,314 ರಷ್ಟಿತ್ತು. ‘ದೇಶದ ಪ್ರಮುಖ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿರುವುದು ಸಂಸ್ಥೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ವಿನೋದ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ.   ಬ್ರ್ಯಾಂಡೆಡ್‌ ಸಿದ್ಧ ಉಡುಪುಗಳ ಮಾರುಕಟ್ಟೆಯಲ್ಲಿ ಸಂಸ್ಥೆ ಶೇ 15ರಷ್ಟು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT