ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾಗೆ ಶೀಘ್ರ 85 ಕಿರಿಯ ಪೈಲಟ್‌ಗಳ ನೇಮಕ

Last Updated 25 ಏಪ್ರಿಲ್ 2017, 19:39 IST
ಅಕ್ಷರ ಗಾತ್ರ

ಮುಂಬೈ: ಏರ್‌ ಇಂಡಿಯಾ  ವಿಮಾನಯಾನ ಕಂಪೆನಿ ಹೊಸದಾಗಿ 80–85 ಕಿರಿಯ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ.

ಭಾರಿ ಸಾಮರ್ಥ್ಯದ ಬೋಯಿಂಗ್‌ ಬಿ777 ಮತ್ತು ಬಿ787 ಸರಣಿಯ 15 ದೊಡ್ಡ ವಿಮಾನಗಳಿಗೆ ಸಹ  ಪೈಲಟ್‌ಗಳ ಅಗತ್ಯವಿದ್ದು, ಮುಂದಿನ ತಿಂಗಳಿನಿಂದಲೇ ಕಿರಿಯ ಪೈಲಟ್‌ಗಳನ್ನು ಸೇವೆಗೆ ನಿಯೋಜಿಸಲಾಗುವುದು ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ. 

ಏರ್ ಇಂಡಿಯಾದಲ್ಲಿ ಸದ್ಯ 170 ಸಹ ಪೈಲಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 370 ಸಹ ಅಥವಾ ಕಿರಿಯ ಪೈಲಟ್‌ಗಳ ಅಗತ್ಯವಿದೆ. 2017ನೇ ಜುಲೈ ಮತ್ತು 2018ರ ಮಾರ್ಚ್‌ ಅವಧಿಯಲ್ಲಿ  ಏರ್‌ ಇಂಡಿಯಾ ಇನ್ನೂ 4 ಬೋಯಿಂಗ್‌ 787 ಮತ್ತು 3  ಬಿ777 ವಿಮಾನ ಖರೀದಿಸಲಿದೆ.

ಲಿಖಿತ ಪರೀಕ್ಷೆಯಲ್ಲಿ ಪಾಸಾದ 95 ಅಭ್ಯರ್ಥಿಗಳ ಪೈಕಿ 85 ಪೈಲಟ್‌ ಗಳನ್ನು  ವಿಮಾನ ಚಾಲನಾ ಮಾದರಿಗಳ ಹಾರಾಟ (ಸಿಮ್ಯುಲೇಟರ್‌)  ಸಾಮರ್ಥ್ಯದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT