ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಿಂದ ನೃತ್ಯ– ಸಂಗೀತ ಉತ್ಸವ

Last Updated 25 ಏಪ್ರಿಲ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸೃಷ್ಟಿ ಅಭಿನಯ ಕಲಾವಿದರ ಕೇಂದ್ರವು ಏ. 29ರಿಂದ ಮೇ 7ರವರೆಗೆ  ನಗರದ ವಿವಿಧ ಸ್ಥಳಗಳಲ್ಲಿ ನೃತ್ಯ, ನಾಟಕ, ಸಂಗೀತ ಮತ್ತು ಯೋಗ ಉತ್ಸವ ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಕೇಂದ್ರದ ನಿರ್ದೇಶಕ ಎ.ವಿ.ಸತ್ಯನಾರಾಯಣ ಅವರು, ‘9 ದಿನಗಳಲ್ಲಿ 55 ತಂಡಗಳ 224 ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ದೆಹಲಿ ಮತ್ತು ಮಹಾರಾಷ್ಟ್ರದ ಕಲಾವಿದರು ಆಯಾ ರಾಜ್ಯಗಳ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಮೋಹಿನಿಯಾಟ್ಟಂ, ಕೂಚಿಪುಡಿ, ಒಡಿಸ್ಸಿ ಮತ್ತು ಕಥಕ್‌ ನೃತ್ಯ ಪ್ರದರ್ಶನಗಳು ಇರಲಿವೆ’ ಎಂದು ತಿಳಿಸಿದರು.

‘ಕಲಾವಿದೆ ಕನಕಾ ರೆಲೆ ಅವರು ಏ. 30ರಂದು ಮೋಹಿನಿಯಾಟ್ಟಂ ಪ್ರದರ್ಶನ ನೀಡಲಿದ್ದಾರೆ. ಮಹಾನ್‌ ಬುದ್ಧ ನೃತ್ಯರೂಪಕ ಇರಲಿದೆ. ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ಮಂದಿರ, ಕೃಷ್ಣದೇವರಾಯ ಕಲಾಭವನ, ನಯನ ಸಭಾಂಗಣಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT