ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಸ್ಥಿತಿಗೆ ಕೈಗನ್ನಡಿ ‘ಪ್ಲಾಸ್ಟರ್’

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಗಾಯ ವಾಸಿಯಾಗಲು ಬ್ಯಾಂಡೇಜ್ ಅಥವಾ ಪ್ಲಾಸ್ಟರ್‌ ಬಳಸುವುದು ರೂಢಿ. ಆದರೆ ಈ ಬ್ಯಾಂಡೇಜ್ ಗಾಯ ವಾಸಿ ಮಾಡುವುದಷ್ಟೇ ಅಲ್ಲ, ಗಾಯದ ಸ್ಥಿತಿಯನ್ನು, ಗಾಯದ ವಿವಿಧ ಹಂತಗಳನ್ನು ವೈದ್ಯರಿಗೆ ತಿಳಿಸುವ ಕೆಲಸವನ್ನೂ ಮಾಡುತ್ತದೆ. ಇದಕ್ಕೆ ಸ್ಮಾರ್ಟ್‌ ಬ್ಯಾಂಡೇಜ್ ಎಂದು ಕರೆಯಲಾಗಿದ್ದು, ಈ ತಂತ್ರಜ್ಞಾನದ ಪ್ರಯೋಗ ನಡೆಸಿರುವುದು ಸ್ವಾನ್‌ಸೀ ವಿಶ್ವವಿದ್ಯಾಲಯ.
 
ಬ್ಯಾಂಡೇಜ್ ಕಾರ್ಯ ವೈಖರಿ
ಈ ಬ್ಯಾಂಡೇಜ್‌ ಒಳಗೆ ಅತಿ ಚಿಕ್ಕ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇದು ನ್ಯಾನೊ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಸೋಂಕನ್ನು ಕಂಡುಹಿಡಿಯುವುದು ಮತ್ತು ರಕ್ತಹೆಪ್ಪುಗಟ್ಟುವುದನ್ನು ಕಂಡುಕೊಳ್ಳುತ್ತದೆ.

ಗಾಯ ಯಾವ ಹಂತದಲ್ಲಿದೆ, ವಾಸಿಯಾಗುತ್ತಿದೆಯೇ, ಇಲ್ಲವೇ, ಅದರ ಅಗತ್ಯಗಳೇನು ಎಂಬುದನ್ನು ತಿಳಿಸುತ್ತದೆ. ಇವೆಲ್ಲಾ ಸಾಧ್ಯವಾಗುವುದು ಈ ಪ್ಲಾಸ್ಟರ್ ಅನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕ ನೀಡಿರುವುದರಿಂದ.
 
ಗಾಯದ ಬಗ್ಗೆ ವೈದ್ಯರಿಗೆ ಸಂದೇಶವನ್ನು ನೀಡುವಂಥ ಒಂದು ಮಾದರಿ ಇದಾಗಿದೆ. ಇದರೊಂದಿಗೆ, ಹೇಗೆ ನಮ್ಮ ನಿತ್ಯದ ಆಹಾರ ಸೇವನೆ ಗಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಪ್ರತಿ ಹಂತದ ಮಾಹಿತಿಯನ್ನೂ ಫೋನಿಗೆ ನೀಡುತ್ತದೆ.  
 
‘ಈ ಸ್ಮಾರ್ಟ್‌ ಬ್ಯಾಂಡೇಜ್ ವೈದ್ಯರಿಗೆ ನಿರ್ದಿಷ್ಟ ಸಮಸ್ಯೆಯನ್ನು ಗುರುತಿಸಿ, ಅದನ್ನು ಬಹು ಬೇಗನೆ ಗುಣಮುಖಗೊಳಿಸುವಲ್ಲಿ ಸಹಾಯ ಮಾಡುತ್ತದೆ.
 
ಅದರ ಆಧಾರದ ಮೇಲೆ ಚಿಕಿತ್ಸೆ ನೀಡುವ ಮೂಲಕ ಅನಗತ್ಯ ಖರ್ಚು ವೆಚ್ಚಗಳನ್ನು ತಗ್ಗಿಸಬಲ್ಲದು ಎಂದು ಲೈಫ್‌ಸೈನ್ಸ್‌ ಇನ್‌ಸ್ಟಿಟ್ಯೂಟ್‌ನ ಚೇರ್‌ಮನ್ ಪ್ರೊ. ಮಾರ್ಕ್ ಕ್ಲೆಮೆಂಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ವೈದ್ಯಕೀಯ ಕ್ಷೇತ್ರದಲ್ಲಿ ಇಂಥ ಹೊಸ ಪ್ರಯೋಗಗಳು ಇನ್ನಷ್ಟು ಮುಂದುವರೆಯಲಿವೆ ಎಂದು ಭರವಸೆಯನ್ನೂ ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT