ಚೆನ್ನಾಯ್ತು ಚಿನ್ನದ ವಿನ್ಯಾಸ

ಬಂಗಾರದ ಒಡವೆಗಳಲ್ಲಿ ನಾನಾ ನಮೂನೆಗಳಿವೆ. ಕಾಲಕ್ಕೆ ತಕ್ಕಂತೆ ವಿನ್ಯಾಸಗಳೂ ಬದಲಾಗುತ್ತವೆ. ಹಳತು ಹೊಸದಾಗಿ ಮತ್ತೊಂದು ರೂಪು ಪಡೆಯುತ್ತವೆ. ಅವುಗಳಲ್ಲಿ ಕೆಲವು ಮಾತ್ರವೇ ಹೆಂಗಳೆಯರ ಮನ ಮುಟ್ಟುತ್ತವೆ. ಅಂಥ ಕೆಲವು ವಿನ್ಯಾಸಗಳ ವಿವರ ಇಲ್ಲಿದೆ

ಚೆನ್ನಾಯ್ತು ಚಿನ್ನದ ವಿನ್ಯಾಸ
ಬಂಗಾರವೆಂದ ತಕ್ಷಣ ಕಣ್ಣರಳುತ್ತದೆ. ಕಾಲಕ್ಕೆ ತಕ್ಕಂತೆ ಮರುವಿನ್ಯಾಸಗೊಳ್ಳುತ್ತಿರುವ ಬಂಗಾರದ ಗುಣಗಳೇ ಅವುಗಳ ಮೋಹ ಹೆಚ್ಚಿಸಲು ಕಾರಣ. ಒಡವೆಗಳನ್ನು ಹೂಡಿಕೆ ಉದ್ದೇಶಕ್ಕೆ ಕೊಂಡುಕೊಳ್ಳುವವರು ಒಂದೆಡೆಯಾದರೆ, ವಿನ್ಯಾಸಕ್ಕೆ ಮಾರುಹೋಗಿ ಅದನ್ನು ಕೊಳ್ಳುವವರು ಇನ್ನೊಂದೆಡೆ.

ನಾನಾ ನಮೂನೆಯ ಆಭರಣ ವಿನ್ಯಾಸಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾತ್ರವೇ ಹೆಂಗಳೆಯರ ಮನ ಸೆಳೆದು ಭದ್ರ ಸ್ಥಾನವನ್ನು ಪಡೆದುಕೊಳ್ಳುತ್ತವೆ. 
 
ಅಂಥವುಗಳಲ್ಲಿ ಆ್ಯಂಟಿಕ್‌ ವಿನ್ಯಾಸಗಳು ಮುಂಚೂಣಿಯಲ್ಲಿವೆ. ಹಿಂದೆ ರಾಜರ ಕಾಲದಲ್ಲಿದ್ದ ಆಭರಣಗಳೇ ಇಂದು ಮರು ವಿನ್ಯಾಸಗೊಂಡಿವೆ. ಧರಿಸಿದರೆ ಅಭರವಾಗಿ ಕಾಣುವ ಇವು ಹಗುರವಾಗಿರುತ್ತವೆ. ಇದರಲ್ಲಿ ಕಪ್ಪು ಪಾಲಿಶ್‌ ಮತ್ತು  ಕೆಂಪು ಪಾಲಿಶ್‌ಗಳಿವೆ. 
 
ಟೆಂಪಲ್‌ ಜ್ಯುವೆಲರಿಗಳು ಟ್ರೆಂಡ್‌ ಆಗಿರುವುದು ಗೊತ್ತೇ ಇದೆ. ಆದರೆ ಇತ್ತೀಚೆಗೆ ಅವುಗಳು ಸ್ವಲ್ಪ ಮಟ್ಟಿಗೆ ಮಹತ್ವ ಕಳೆದುಕೊಳ್ಳುತ್ತಿದೆ ಎನ್ನುತ್ತಾರೆ ಜೋಯಾಲುಕಾಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜೀಜಿ ಕೆ. ಮ್ಯಾಥ್ಯೂ.
 


‘ಟೆಂಪಲ್‌ ಜ್ಯುವೆಲರಿಗಳು ಸಹಜ ಬಂಗಾರದ ಬಣ್ಣಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಆದರೆ ಆ್ಯಂಟಿಕ್‌ ವಿನ್ಯಾಸದ ಜೊತೆಗೆ ಸಹಜ ಬಂಗಾರದ ಬಣ್ಣವನ್ನೇ ಹೋಲುವ  ಒಡವೆಗಳಂತೆಯೇ ಇದ್ದು, ಅದರಲ್ಲಿ ಆ್ಯಂಟಿಕ್‌ ಕುಸುರಿ ಇರುವ ಒಡವೆಗಳು ಹೆಚ್ಚು ಮಾರಾಟವಾಗುತ್ತವೆ’ ಎನ್ನುತ್ತಾರೆ ಅವರು.  
 
ಮದುವೆ, ಸಮಾರಂಭಗಳಲ್ಲಿ ಮಹಿಳೆಯರ ಕತ್ತಿನಲ್ಲಿ  ಮೋಹನ ಮಾಲೆ ಸರಗಳು ಸ್ಥಾನ ಪಡೆದಿರುವುದನ್ನು ನೀವು ಕಂಡಿರಬಹುದು. ಇವುಗಳಲ್ಲಿ ನಾನಾ ನಮೂನೆಗಳಿವೆ. ಸರಳತೆಯ ಜೊತೆಗೆ ಅದ್ದೂರಿ ಸಮಾರಂಭಗಳಿಗೂ ಒಪ್ಪುವ ಆಭರಣಗಳಿವು. ಚಿಕ್ಕ ಮಣಿಯ ಒಂದೆಳೆ ಸರದ ಜೊತೆಗೆ ಮೂರು, ನಾಲ್ಕು ಎಳೆಗಳುಳ್ಳ ಸರ, ಅದಕ್ಕೊಂದು ಪೆಂಡೆಂಟ್‌ ಇರುತ್ತದೆ.
 
ಆದರೆ ಇದನ್ನು ಹೂಡಿಕೆ ಉದ್ದೇಶದಿಂದ ಕೊಳ್ಳುವವರು ಕಡಿಮೆ. ಮಣಿಯ ಒಳಗೆ ಟೊಳ್ಳಾಗಿರುವುದುರಿಂದ ಬಂಗಾರವನ್ನು ವಾಪಸ್ಸು ಕೊಡುವಾಗ ಇದರಲ್ಲಿ ಲಾಭ ಕಡಿಮೆ. 
 
ಇವೆಲ್ಲಾ ಸಮಾರಂಭಗಳಲ್ಲಿ ಮಿಂಚುವ ಮಹಿಳೆಯರ ಆಯ್ಕೆಯಾದರೆ ದಿನನಿತ್ಯದ ಬಳಕೆಯಲ್ಲಿ ಲೈಟ್‌ವೇಟ್‌ ಆಭರಣಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರತಿಷ್ಠೆಯ ಸಂಕೇತವಾಗಿರುವ ಆಭರಣಗಳು ಎಲ್ಲಾ ಉಡುಪುಗಳಿಗೂ ಹೊಂದಿಕೆಯಾಗುವ ವಿನ್ಯಾಸದಲ್ಲಿ ದೊರಕುವ ಕಾರಣಕ್ಕೆ ಕಾಲೇಜು ಹುಡುಗಿಯರ ಸಂಗ್ರಹವನ್ನೂ ಸೇರಿಕೊಳ್ಳುತ್ತಿವೆ. 
 
ಹಗುರವಾದ ಆಭರಣಗಳು ಹುಡುಗಿಯ ಫ್ಯಾಷನ್‌ಗೆ ಜೊತೆಯಾಗುತ್ತಿವೆ. ಎಲ್ಲಾ ಬಗೆಯ ದಿರಿಸಿಗೆ ಒಪ್ಪಿಗೆಯಾಗುವುದು ಇದಕ್ಕೆ ಕಾರಣ.  ಡಿಸೈನರ್‌ ಉಂಗುರ. ಕಿವಿಗೆ ಸ್ಟಡ್ಸ್‌, ಬ್ರೆಸ್‌ಲೈಟ್‌ಗಳು, ಕತ್ತಿನಲ್ಲಿ ಇಣುಕುವ ತೆಳುವಾದ ಸರಗಳು ಅವರ ಆಯ್ಕೆಯಾಗುತ್ತಿವೆ.  
 
ಓಲೆಗಳ ವಿಷಯಕ್ಕೆ ಬಂದರೆ ಜುಮುಕಿಗಳಿಗೆ ಮೊದಲ ಸ್ಥಾನ. ಅದರಲ್ಲಿಯೂ ನೀರಿನ ಹರಿವಿನಿಂದ ಪ್ರೇರಣೆ ಪಡೆದಿರುವ (ವಾಟರ್‌ ಫ್ಲೋಯಿಂಗ್‌) ಓಲೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆಗೆ ಡಾಲ್ಫಿನ್‌, ಆನೆ, ಗೂಬೆ, ಚಿಟ್ಟೆಗಳಿಂದ ಪ್ರೇರಣೆ ಪಡೆದ ವಿನ್ಯಾಸಗಳು ಹುಡುಗಿಯರ   ಕಿವಿಯಲ್ಲಿ ಕಳಿತಿವೆ. 
 
 
ಒಂದೇ ತರಹದ ಸೆಟ್‌ ಬಳೆಗಳಿಗೆ ಬೇಡಿಕೆ ಹೆಚ್ಚಿದೆ. ಆ್ಯಂಟಿಕ್‌ಗಿಂತ ಕೋಲ್ಕತ್ತ, ಮುಂಬೈ ಡಿಸೈನ್‌ಗಳಿಗೆ ಜನರು ಮಾರುಹೋಗುತ್ತಿದ್ದಾರೆ.  
ಹರಳುಗಳು ಕಡಿಮೆ ಇರುವ ಕೇರಳ ವಿನ್ಯಾಸಗಳು ಸಹ ಬೇಡಿಕೆ ಕುದುರಿಸಿಕೊಂಡಿವೆ. ಇವುಗಳಲ್ಲಿ ಬಂಗಾರ ಹೆಚ್ಚಿರುತ್ತದೆ. ಮುತ್ತು, ಹರಳುಗಳು ಇರುವುದು ಕಡಿಮೆ. 
 
ಭಿನ್ನ ಸಮಾರಂಭಗಳಿಗೆ ವಿಭಿನ್ನವಾದ ಆಭರಣ ಧರಿಸಬೇಕು ಎಂದು ಮನ ಬಯಸುತ್ತದೆ. ಆದರೆ ಅದನ್ನು ಕೊಂಡುಕೊಳ್ಳಲು ಕಾಸಿನ ಸಮಸ್ಯೆ. ಈ ರೀತಿಯ ಸಮಸ್ಯೆಗೆ ಪರಿಹಾರಕ್ಕಾಗಿಯೇ 10 ಇನ್‌ 1 ಆಭರಣಗಳಿವೆ.
 
ಇದೇನಪ್ಪ ಎಂದು ಯೋಚಿಸುತ್ತಿದ್ದೀರಾ. ಒಂದೇ ಒಡವೆಗಳನ್ನು ಹಲವು ಬಗೆಗಳಲ್ಲಿ ಬಳಸಬಹುದು. ಒಂದೇ ಆಭರಣವನ್ನು ಡಾಬು, ನೆಕ್ಲೆಸ್‌, ತೋಳು ಬಂಧಿ... ಹೀಗೆ 10 ಬಗೆಯಲ್ಲಿ ಬಳಸಬಹುದು. ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುವುದರಿಂದ ನೋಡುವವರಿಗೆ ಒಂದೇ ತರಹದ ಒಡವೆ ಎನಿಸುವುದಿಲ್ಲ. ಇದರ ಬೆಲೆ ಸ್ವಲ್ಪ ಹೆಚ್ಚಿರುತ್ತದೆ. 
 
‘ಲೈಟ್‌ವೇಟ್‌ ಆಭರಣಗಳನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ್ಯಂಟಿಕ್‌, ಟೆಂಪಲ್‌, ದೇವರ ವಿಗ್ರಹಗಳಿರುವ ಆಭರಣಗಳಿಗೆ ಹೆಚ್ಚು ಬೇಡಿಕೆ ಇದೆ. ಹೊಳಪಿರುವ ಬಂಗಾರಕ್ಕಿಂತ ಡಲ್‌ ಫಿನಿಶಿಂಗ್‌ ಇರುವ ಆಭರಣಗಳನ್ನೇ ಹೆಚ್ಚು ಇಷ್ಟಪಡುತ್ತಾರೆ’ ಎನ್ನುತ್ತಾರೆ ಸಾಯಿಗೋಲ್ಡ್‌ ಪ್ಯಾಲೇಸ್‌ನ ಶರವಣ.  
 

 

Comments
ಈ ವಿಭಾಗದಿಂದ ಇನ್ನಷ್ಟು
ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

ಪ್ರೇರಣೆ
ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

25 Apr, 2018
ಬದುಕೆಂಬ ನಿಶ್ಶಬ್ದ ನರ್ತನ...

ಶಿಸ್ತಿನ ಪ್ರಯೋಜನ
ಬದುಕೆಂಬ ನಿಶ್ಶಬ್ದ ನರ್ತನ...

11 Apr, 2018
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

ನಾದಲೋಕ
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

7 Apr, 2018
ಮನೆಯಲ್ಲೇ ನೀರು ಉಳಿಸಿ

ವಿಶ್ವ ಜಲ ದಿನ
ಮನೆಯಲ್ಲೇ ನೀರು ಉಳಿಸಿ

22 Mar, 2018
ಕ್ಷಮಿಸಲು ಕಾರಣ ಹಲವು...

ಮಾನಸಿಕ ನೆಮ್ಮದಿ
ಕ್ಷಮಿಸಲು ಕಾರಣ ಹಲವು...

21 Mar, 2018