ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ‘ಮೂಟೆ’

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹೊಸಬರು ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸುವುದು ಸುಲಭದ ಮಾತಲ್ಲ. ಪ್ರತಿಭೆ ಇದ್ದರೂ ಅದರ ಪ್ರದರ್ಶನಕ್ಕೆ ವೇದಿಕೆ ಬೇಕು. ನಟ ನಟಿಯರಾದರೆ ಹೇಗಾದರೂ ಒಂದು ಚಿಕ್ಕ ಅವಕಾಶ ಗಿಟ್ಟಿಸಿಕೊಳ್ಳಬಹುದೇನೋ. ಆದರೆ ನಿರ್ದೇಶಕನಾಗುವುದು ಕಷ್ಟ. ನಿರ್ದೇಶಕ ಇಡೀ ತಂಡದ ಚಾಲಕ ಶಕ್ತಿ.

ಅಂಥ ಜವಾಬ್ದಾರಿ ಹೊರುವವರಿಗೆ ಒಂದಷ್ಟು ಅನುಭವ ಇರಬೇಕು ಎಂಬ ನಿರೀಕ್ಷೆ ಸಹಜ. ಅದಕ್ಕೆ ಯಾವುದಾದರೂ ನುರಿತ ತಂತ್ರಜ್ಞರ ಬಳಿ ಸಹಾಯಕರಾಗಿ ಕೆಲಸ ಮಾಡಿ, ವರ್ಷಾನುಗಟ್ಟಲೆ ಕಾದು ನಿರ್ದೇಶಕನ ಪಟ್ಟ ಗಿಟ್ಟಿಸಬೇಕಾಗುತ್ತದೆ.
 
ಎಷ್ಟೋ ಜನರಿಗೆ ಅಷ್ಟೊಂದು ತಾಳ್ಮೆ ಇರುವುದಿಲ್ಲ. ಅದರಿಂದ ಈಗಿನವರು ಕಿರುಚಿತ್ರಗಳನ್ನು ನಿರ್ದೇಶಿಸಿ, ಅದರ ಮೂಲಕ ನಿರ್ಮಾಪಕರನ್ನು ಮೆಚ್ಚಿಸುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಂಥದ್ದೇ ಪ್ರಯತ್ನ ‘ಮೂಟೆ’.
 
‘ಮೂಟೆ’ ಕಿರುಚಿತ್ರ ನಿರ್ದೇಶಕ ಯೋಗೇಶ್ ಶಂಕರ್ ನಾರಾಯಣ್ ಅವರ ಕನಸಿನ ಮೂಟೆ. ಮಾದಕ ದೃವ್ಯಗಳನ್ನು ಸರಬರಾಜು ಮಾಡುವ ಗುಂಪಿನ ಸದಸ್ಯನೊಬ್ಬನನ್ನು ಪೊಲೀಸರು ಹಿಡಿಯುವುದು ಕಥಾಹಂದರ.

ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ಬಳಸಿಕೊಂಡಿರುವ ಯೋಗೇಶ್, ಕಿರುಚಿತ್ರದ ಕಿರು ಅವಧಿಯ ಮಿತಿಯನ್ನು ಅರಿತು ಅದಕ್ಕೆ ಅಗತ್ಯವಿದ್ದ ವೇಗವನ್ನು ಕಲ್ಪಿಸಿದ್ದಾರೆ. ಈ ಕಿರುಚಿತ್ರದಲ್ಲಿ ಉಂಟಾದ ಮಾಡಿರುವ ಲೋಪಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇನೆ ಎಂಬ ಮಾತು ಅವರದ್ದು.
 
‘ಮೂಟೆ’ಗೆ ಏಳು ದಿನಗಳ ಚಿತ್ರೀಕರಣ ನಡೆಸಿದ್ದು, ಮೂರು ಲಕ್ಷ ರೂಪಾಯಿ ವೆಚ್ಚವಾಗಿದೆ. ಈ ಪ್ರಯತ್ನಕ್ಕೆ ಬಂಡವಾಳ ತೊಡಗಿಸಿದ್ದು ವಾರ್ದಿಕ್ ಜೋಸೆಫ್. ಮುಖ್ಯ ಪಾತ್ರದಲ್ಲಿ ಸುಜಿತ್‌ಗೌಡ, ಆರ್ಯದೇವ್, ಹರೀಶ್ ರಾವ್, ವಿನಯ್ ಪ್ರಸಾದ್, ಅರುಣ್ ಕುಮಾರ್ ನಟಿಸಿದ್ದಾರೆ.

ಅನಂತ್ ಕಾಮತ್ ಸಂಗೀತ, ಮಹೇಶ್ ಚಿದ್ರೆ ಸಂಕಲನ, ದೇವು, ಸಂದೀಪ್ ಹೊನ್ನಳ್ಳಿ, ಪ್ರಶಾಂತ್ ಪಟೇಲ್ ಛಾಯಾಗ್ರಹಣ ಇದೆ. ‘ಯು ಟ್ಯೂಬ್‌’ನಲ್ಲಿಯೂ ಕಿರುಚಿತ್ರವನ್ನು ವೀಕ್ಷಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT