ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 28–4–1967

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆಹಾರ ಧಾನ್ಯದ ಬೆಲೆಗಳಲ್ಲಿ ಏರಿಕೆ ಸಂಭವ
ನವದೆಹಲಿ, ಏ. 27–
ನ್ಯಾಯ ಬೆಲೆ ಅಂಗಡಿಗಳಲ್ಲಿ ಮತ್ತು ರೇಷನ್‌ ಅಂಗಡಿಗಳಲ್ಲಿ ದೊರೆವ ಆಮದು ಮಾಡಿಕೊಂಡ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಹೆಚ್ಚುವ ಸಂಭವವಿದೆ.

ಆಹಾರ ಧಾನ್ಯಗಳ ಬೆಲೆಯನ್ನು ಅಗ್ಗವಾಗಿಸುವ ಬಗ್ಗೆ ಕೇಂದ್ರ ಸರಕಾರ ಕೊಡುತ್ತಿದ್ದ ಸಹಾಯ ಧನದಲ್ಲಿ ಖೋತಾ ಮಾಡಿರುವುದೇ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಕೇಂದ್ರ ಸರಕಾರದ ಅರ್ಥಖಾತೆಯ ಸೂಚನೆಯ ಮೇರೆಗೆ ಸಹಾಯ ಧನದಲ್ಲಿ ಖೋತಾ ಮಾಡಲಾಗಿದೆ.

ಹಿಂದೀ ಅಥವಾ ಇಂಗ್ಲೀಷ್‌ ಕಡ್ಡಾಯ ಶಿಕ್ಷಣ
ನವದೆಹಲಿ, ಏ. 27–
ಎಂಟನೇ ತರಗತಿಯವರೆಗೆ ಹಿಂದೀ ಅಥವಾ ಇಂಗ್ಲೀಷ್‌ ಭಾಷೆಯನ್ನು ಅಧ್ಯಯನ ಮಾಡದ ವಿದ್ಯಾರ್ಥಿಗಳಿಗೆ, ಆ ತರಗತಿಯಿಂದ ಈ ಎರಡರಲ್ಲೊಂದು ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ಶಿಕ್ಷಣ ಕುರಿತ ಪಾರ್ಲಿಮೆಂಟ್‌ ಸದಸ್ಯರ ಸಮಿತಿಯು ಇಂದು ನಿರ್ಧರಿಸಿತು.

ಭಾಷಾ ನೀತಿ ಕುರಿತ ಸಮಿತಿ ಸಭೆಯು ಇಂದು ಚರ್ಚೆಯನ್ನು ಮುಂದುವರಿಸಿತಲ್ಲದೆ ನಿನ್ನೆ ಕೈಗೊಂಡ ನಿರ್ಧಾರಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT