ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಹಬ್ಬ’ಕ್ಕೆ ಕೊಡುಗೆಯ ಮೆರುಗು

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವರ್ಷಕ್ಕೊಮ್ಮೆ  ಬರುವ ಅಕ್ಷಯ  ತೃತೀಯಕ್ಕೆ ಯಾವ ಒಡವೆ ಕೊಳ್ಳಲಿ? ಎಲ್ಲಿ ಕೊಳ್ಳಲಿ ಎಂಬ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ನಗರದ ವಿವಿಧ ಚಿನ್ನಾಭರಣ ಮಳಿಗೆಗಳು ಚಿನ್ನದ ಹಬ್ಬದ ನಿಮಿತ್ತವಾಗಿಯೇ ನೀಡಿರುವ ಕೊಡುಗೆಗಳ ಮಾಹಿತಿ ಇಲ್ಲಿದೆ

ವಿಶೇಷ ಉಡುಗೊರೆ
ಈ ಬಾರಿ ಅಕ್ಷಯ ತೃತೀಯ ಹಬ್ಬಕ್ಕೆ ‘ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌’ ಆಭರಣ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ಮತ್ತು ಉಡುಗೊರೆ ಪ್ರಕಟಿಸಲಾಗಿದೆ.

₹25 ಸಾವಿರ ಮೇಲ್ಪಟ್ಟು ಆಭರಣ ಖರೀದಿಸಿದರೆ ತಿರುಪತಿಯ ಶ್ರೀ ಪದ್ಮಾವತಿ ಸಾನ್ನಿಧ್ಯದಲ್ಲಿ ಪೂಜಿಸಿದ ಪಂಚಲೋಹದ ಲಕ್ಷ್ಮೀ ವಿಗ್ರಹವನ್ನು ಉಡುಗೊರೆಯಾಗಿ ಪಡೆಯಬಹುದು. ಚಿನ್ನಾಭರಣ ಖರೀದಿ ವೇಳೆ ಪ್ರತಿ ಗ್ರಾಂಗೆ ₹50 ಕಡಿತ, ಪ್ರತಿ ಕ್ಯಾರಟ್ ವಜ್ರ ಖರೀದಿಗೆ ₹5ಸಾವಿರ ರಿಯಾಯಿತಿ ಮತ್ತು ಪ್ರತಿ ಒಂದು ಕೆ.ಜಿ. ಬೆಳ್ಳಿ ಖರೀದಿಗೆ ₹2 ಸಾವಿರ ರಿಯಾಯಿತಿ ಇದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ.
ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಬಸವನಗುಡಿ ಮತ್ತು ಎಚ್‌.ಎಸ್.ಆರ್. ಲೇಔಟ್‌ ಶಾಖೆಗಳಲ್ಲಿ ಈ ಕೊಡುಗೆಗಳು ಲಭ್ಯ.

ಹಣ ಹಿಂಪಡೆಯಿರಿ!
‘ಮಲಬಾರ್ ಗೋಲ್ಡ್‌ ಅಂಡ್‌ ಡೈಮಂಡ್‌’ ಆಭರಣ ಮಳಿಗೆಯು ಈ ಬಾರಿಯ ಅಕ್ಷಯ ತೃತೀಯಕ್ಕಾಗಿ ಹಲವು ಉಡುಗೊರೆಗಳನ್ನು ನೀಡುತ್ತಿದೆ. ಅನ್‌ಕಟ್‌ ಡೈಮಂಡ್ ಆಭರಣ, ಸಾಂಪ್ರದಾಯಿಕ ಆಭರಣ, ಜೆಮ್‌ಸ್ಟೋನ್‌ ಆಭರಣ, ‘ಮೈನ್‌’ ಲಘು ಆಭರಣಗಳ ವಿಶೇಷ ಸಂಗ್ರಹ ಈ ಅಕ್ಷಯ ತೃತೀಯ ಹಬ್ಬಕ್ಕೆ ಲಭ್ಯ.

ಎಸ್‌ಬಿಐ ಕಾರ್ಡುದಾರರಿಗೆ ವಿಶೇಷ ಹಣ ವಾಪಸಾತಿ ಕೊಡುಗೆಯೂ ಇದೆ. ₹25 ಸಾವಿರಕ್ಕೂ ಹೆಚ್ಚಿನ ಖರೀದಿಗೆ ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ ನಿಂದ ಖರೀದಿ ಮಾಡಿದವರಿಗೆ ಶೇ 5 ಕ್ಯಾಶ್‌ಬ್ಯಾಕ್‌ ಕೊಡುಗೆ ಇದೆ. ಈ ಕೊಡುಗೆ ಏ. 29ರವರೆಗೆ ಇದೆ. ಚಿನ್ನದ ನಾಣ್ಯ ಖರೀದಿ ಮಾಡುವವರಿಗೆ ವಿಶೇಷ ಕೌಂಟರ್‌ ತೆರೆಯಲಾಗಿದೆ.

‘ಸ್ವರ್ಣಂ ಸಂಗ್ರಹ’ ಬಿಡುಗಡೆ
ತನಿಷ್ಕ್‌ ಮಳಿಗೆ ಅಕ್ಷಯ ತೃತೀಯ ವಿಶೇಷ ಸಂದರ್ಭಕ್ಕೆ ‘ಸ್ವರ್ಣಂ ಸಂಗ್ರಹ’ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಕೊಡುಗೆ ಏಪ್ರಿಲ್ 29ರ ವರೆಗೆ ಲಭ್ಯ.
ಈ ಸಂಗ್ರಹದಲ್ಲಿ ಬಳೆಗಳು, ಪದಕ, ಕಿವಿಯೋಲೆ, ನೆಕ್ಲೇಸ್, ಉಂಗುರ, ಮಂಗಳಸೂತ್ರ ಮತ್ತು ಕಿವಿಯೋಲೆಗಳನ್ನು ಹೊಂದಿದ್ದು ₹20 ಸಾವಿರದಿಂದ  ಆರಂಭವಾಗಲಿದೆ. 18 ಮತ್ತು 22 ಕ್ಯಾರಟ್ ಚಿನ್ನ, ವಜ್ರ ಮತ್ತು ಬಣ್ಣದ ಹರಳುಗಳಿಂದ ಈ ಸಂಗ್ರಹ ವಿನ್ಯಾಸಗೊಂಡಿದೆ. ಸಾಧಾರಣ ಚಿನ್ನಾಭರಣದ ತಯಾರಿಕಾ ವೆಚ್ಚದ ಮೇಲೆ ಶೇ 25ರಷ್ಟು ರಿಯಾಯಿತಿ ಮತ್ತು ವಜ್ರದ ಮೌಲ್ಯದ ಮೇಲೆ ಶೇ.25ರಷ್ಟು ರಿಯಾಯಿತಿ ನೀಡುತ್ತಿದೆ.

ಆಕರ್ಷಕ ಕೊಡುಗೆ
ಅಕ್ಷಯ ತೃತೀಯ ವಿಶೇಷ ಸಂದರ್ಭವನ್ನು ಆಚರಿಸುತ್ತಿರುವ ರಿಲಯನ್ಸ್‌ ಜ್ಯುವೆಲರಿ ವಜ್ರಾಭರಣಗಳ ಮೇಲೆ ಶೇ. 30 ಹಾಗೂ ತಯಾರಿಕಾ ವೆಚ್ಚದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡುತ್ತಿದೆ. ಏ. 30ರವರೆಗೆ ಕೊಡುಗೆ ಇದೆ. ರಿಲಯನ್ಸ್ ಜ್ಯುವೆಲ್ಸ್ ಸಾಂಪ್ರದಾಯಿಕ ಚಿನ್ನಾಭರಣಗಳಾದ ಕುಂದನ್, ಪೊಲ್ಕಿ, ಟೆಂಪಲ್‌ ವಿನ್ಯಾಸ ಆಭರಣ, ವಜ್ರದ ಆಭರಣಗಳು ಅಕ್ಷಯ ತೃತೀಯ ಸಂದರ್ಭಕ್ಕೆ ವಿಶೇಷ ಶ್ರೇಣಿ ಆಭರಣಗಳನ್ನು ಪರಿಚಯಿಸುತ್ತಿದೆ.

ಮೂರು ವಿಶೇಷ ಕೊಡುಗೆ
‘ನವರತನ್‌’ ಚಿನ್ನಾಭರಣ ಮಳಿಗೆ ಅಕ್ಷಯ ತೃತೀಯ ಪ್ರಯುಕ್ತ ಮೂರು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. 1ಗ್ರಾಂ ಚಿನ್ನ ಖರೀದಿಸಿದರೆ  ಒಂದು ಗ್ರಾಂ ಬೆಳ್ಳಿ ಉಚಿತ, ಒಂದು ಕ್ಯಾರಟ್‌ ವಜ್ರ ಖರೀದಿಸಿದರೆ ಒಂದು ಗ್ರಾಂ ಚಿನ್ನ ಉಚಿತ. ಒಂದು ಕೆ.ಜಿ. ಬೆಳ್ಳಿ ಖರೀದಿಸಿದರೆ 25ಗ್ರಾಂ ಬೆಳ್ಳಿ ಉಚಿತವಾಗಿ ನೀಡಲಿದ್ದಾರೆ. ಈ ಕೊಡುಗೆ ಏ. 29ರವರೆಗೆ ಇದೆ. ಎಂ.ಜಿ.ರಸ್ತೆ ಮತ್ತು ಜಯನಗರ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯ

ಪ್ಲಾಟಿನಂ ಖರೀದಿಸಿ ಪದಕ ಪಡೆಯಿರಿ
ಬ್ರ್ಯಾಂಡೆಡ್‌ ಆಭರಣ ಮಳಿಗೆಗಳಲ್ಲಿ ಪ್ಲಾಟಿನಂ ಆಭರಣ ಖರೀದಿಸುವವರಿಗೆ ‘ಪ್ಲಾಟಿನಂ’ ಬ್ರ್ಯಾಂಡ್‌ ವಿಶೇಷ ಕೊಡುಗೆಯನ್ನು ನೀಡಲಿದೆ.
ಗಣೇಶ ಮತ್ತು ಲಕ್ಷ್ಮೀ ದೇವರ ಪದಕಗಳನ್ನು ‘ಪ್ಲಾಟಿನಂ’ ಬಿಡುಗಡೆ ಮಾಡಿದೆ. ಜೊತೆಗೆ ವಿಶೇಷ ಶೈಲಿಯಲ್ಲಿ ಕೆತ್ತನೆಯಾದಂತಹ ಪದಕ, ಸರ, ಕಿವಿಯೋಲೆ, ಬಳೆ ಮತ್ತು ನೆಕ್ಲೇಸ್‌ಗಳನ್ನು ಬಿಡುಗಡೆ ಮಾಡಿದೆ. ಪುರುಷರಿಗಾಗಿ ನೂತನ ಶ್ರೇಣಿ ಬ್ರೇಸ್‌ಲೆಟ್‌ಗಳು ಲಭ್ಯ.
‘ಪ್ಲಾಟಿನಂ’ ಆಭರಣಗಳ ಸಂಗ್ರಹದ ಬೆಲೆ ₹10 ಸಾವಿರದಿಂದ ಆರಂಭ.  ಗಾತ್ರ, ತೂಕ ಮತ್ತು ವಜ್ರದ ಗುಣಮಟ್ಟ ಆಧರಿಸಿ ಬೆಲೆ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ www.preciousplatinum.in ತಾಣವನ್ನು ಸಂಪರ್ಕಿಸಿ.

‘ಕೃಷ್ಣಯ್ಯ ಚೆಟ್ಟಿ’ ಮಳಿಗೆಯಲ್ಲಿ ವಿಶೇಷ ಒಡವೆಗಳ ಸಂಗ್ರಹ
ನಗರದ ಅತ್ಯಂತ ಹಳೆಯ ಆಭರಣ ಮಳಿಗೆ ಎಂಬ ಹೆಗ್ಗಳಿಕೆಯ ‘ಸಿ.ಕೃಷ್ಣಯ್ಯ ಚೆಟ್ಟಿ ಅಂಡ್‌ ಸನ್ಸ್‌’ ಈ ಬಾರಿಯೂ ಅಕ್ಷಯ ತೃತೀಯಕ್ಕೆ ಆಭರಣಗಳ ವಿಶೇಷ  ಸಂಗ್ರಹವನ್ನು ಬಿಡುಗಡೆ ಮಾಡಿದೆ.ಮಳಿಗೆಯು 1869ರಿಂದಲೂ ಪಾರಂಪರಿಕ ಶೈಲಿಯ ಆಭರಣಗಳಿಗೆ ಹೆಸರಾದ ಮಳಿಗೆ. ಮೈಸೂರು ಶೈಲಿಯ ಆಭರಣಗಳಿಗೆ ಹೆಸರುವಾಸಿ. ಪಾರಂಪರಿಕ ಆಭರಣಗಳ ವಿನ್ಯಾಸ ಈ ಸಂಸ್ಥೆಯ ವಿಶೇಷ. ಮೈಸೂರು ರಾಜ ಮನೆತನದ ಲಾಂಛನ ಗಂಡಭೇರುಂಡದ ವಿನ್ಯಾಸವಿರುವ ಆಭರಣಗಳು ಕೃಷ್ಣಯ್ಯ ಚಿಟ್ಟಿ ಗ್ರೂಪ್‌ ವಿಶೇಷತೆ. ಈ ಅಕ್ಷಯ ತೃತೀಯ ಹಬ್ಬಕ್ಕೂ ಕೃಷ್ಣಯ್ಯ ಚಿಟ್ಟಿ ಗ್ರೂಪ್‌ ಅಂಗಡಿಯಲ್ಲಿ ವಿಶೇಷ ಬಗೆಯ ಚಿನ್ನಾಭರಣಗಳು ಮಾರಾಟಕ್ಕೆ ಇವೆ.

ಇಂದು (ಏ. 29) ಸಂಜೆ 6.30ರಿಂದ ರಾತ್ರಿ 8ರ ವರೆಗೆ ಆಭರಣಗಳ ಪ್ರದರ್ಶನವಿದೆ. ಸ್ಥಳ– ಫಿನಿಕ್ಸ್‌ ಕೆಇಎಸ್‌ಎಸ್ಎಕೆಯು (KESSAKU), ನಂ. 1. ಡಾ. ರಾಜಕುಮಾರ್ ರಸ್ತೆ, ಶೆರಟಾನ್‌ ಹೋಟೆಲ್‌ ಎದುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT