ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ನ ಅಂತ್ಯ ಸನಿಹ?

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಜಗತ್ತು ಪ್ಲಾಸ್ಟಿಕ್ ಎಂಬ ಟೈಂ ಬಾಂಬ್ ಮೇಲೆ ಕೂತಿದೆ ಎನ್ನುತ್ತಾರೆ ಪರಿಸರ ವಾದಿಗಳು. ಸಮಯ ಗತಿಸುತ್ತಲೂ ಪ್ಲಾಸ್ಟಿಕ್‌ನಿಂದ ಜಗತ್ತಿನ ನಾಶ ಸನ್ನಿಹಿತವಾಗುತ್ತಿದೆ ಎನ್ನುತ್ತಾರೆ ಅವರು. ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದಾಗಿ ಪ್ರಾಕೃತಿಕ ವಿನಾಶದೆಡೆಗೆ ವೇಗವಾಗಿ ಸಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದು.

ಅಧ್ಯಯನವೊಂದರ ಪ್ರಕಾರ ದೇಶದ 60 ಪ್ರಮುಖ ನಗರಗಳಿಂದ ಪ್ರತಿದಿನ 15000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಆದರೆ ಸ್ಪೇನ್‌ನ ವಿಜ್ಞಾನಿ ಫೆಡ್ರಿಕಾ ಬೆಟ್ರೂಚಿನಿ ಅವರ ಸಂಶೋಧನೆಯೊಂದು ಭಾರತಕ್ಕೆ ಪ್ಲಾಸ್ಟಿಕ್‌ ಸಮಸ್ಯೆಯಿಂದ ಮುಕ್ತಿ ದೊರಕಿಸುವ ಆಶಾಭಾವನೆ ಮೂಡಿಸಿದೆ.

ಹವ್ಯಾಸಿ ಜೇನು ಸಾಕಣೆದಾರರೂ ಆಗಿರುವ ಮಹಿಳೆ ಫೆಡ್ರಿಕಾ ಪ್ಲಾಸ್ಟಿಕ್‌ ಕವರ್‌ನಲ್ಲಿ (ಮೇಣದ ಹುಳು) ವ್ಯಾಕ್ಸ್‌ ವರ್ಮ್‌ ಅನ್ನು ಇಟ್ಟುಹೋಗಿದ್ದರು. ಅವರು ವಾಪಾಸ್ ಬಂದಾಗ ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ಹುಳಗಳೆಲ್ಲಾ ಕೊಠಡಿಯಲ್ಲಿ ಎಲ್ಲೆಂದರಲ್ಲೆ ಓಡಾಡುತ್ತಿದ್ದವು. ಅವು ಪ್ಲಾಸ್ಟಿಕ್‌ ಕವರ್‌ ಅನ್ನು ತೂತು ಮಾಡಿಕೊಂಡು ಆಚೆ ಬಂದಿದ್ದವು.

ಇದನ್ನು ಗಮನಿಸಿದ ಫೆಡ್ರಿಕಾ ಮೇಣದ ಹುಳುಗಳು ಪ್ಲಾಸ್ಟಿಕ್‌ ಅನ್ನು ತಿನ್ನಬಲ್ಲವೇ  ಎಂಬ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು.
ಅವರೊಂದಿಗೆ ಸೇರಿಕೊಂಡ ಕೇಂಬ್ರಿಡ್ಜ್‌ ವಿವಿಯ ವಿಜ್ಞಾನಿಗಳು ಒಟ್ಟಾಗಿ ಅಧ್ಯಯನ ನಡೆಸಿ ಮೇಣದ ಹುಳುಗಳು ಪ್ಲಾಸ್ಟಿಕ್‌ ತಿಂದು ಕೊಳೆಸುವ ಶಕ್ತಿ ಹೊಂದಿವೆ ಎಂದು ಸಾಬೀತುಪಡಿಸಿದ್ದಾರೆ.

ಆದರೆ ವಿಜ್ಞಾನಿಗಳಿಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. 100 ಮೇಣದ ಹುಳುಗಳು 92 ಮಿಲಿಗ್ರಾಂ ಪ್ಲಾಸ್ಟಿಕ್‌ ತಿನ್ನಲು 12 ಗಂಟೆ ಸಮಯ ತೆಗೆದುಕೊಳ್ಳುತ್ತವೆಯಂತೆ.

ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ತಂಡಕ್ಕೆ ಯಶಸ್ಸು ದೊರಕಲಿ ಮತ್ತು ಪ್ಲಾಸ್ಟಿಕ್ ಸಮಸ್ಯೆ ಅಂತ್ಯವಾಗಲಿ ಎಂಬುದು ಫೆಡ್ರಿಕಾ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT