ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕ್‌ನ ಶುಚಿ ರುಚಿ ಖಾದ್ಯ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪಾಲಕ್ ಒಗ್ಗರಣೆ ಮಜ್ಜಿಗೆ
ಬೇಕಾಗುವ ಸಾಮಗ್ರಿಗಳು 
ಪಾಲಕ್ ಸೊಪ್ಪು  – ಒಂದು ಕಟ್ಟು
ಮೊಸರು – ಒಂದು ಕಪ್
ಉಪ್ಪು – ಸ್ವಲ್ಪ
ಇಂಗು – ಸ್ವಲ್ಪ
ಶುಂಠಿ – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ 
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಎರಡು ನಿಮಿಷ ಬೇಯಿಸಿ. ಆರಿದ ನಂತರ ಕೊತ್ತಂಬರಿಸೊಪ್ಪು, ಶುಂಠಿ, ಮೊಸರು ಸೇರಿಸಿ ಮಿಕ್ಸಿಗೆ ಹಾಕಿ. ನುಣ್ಣಗಾದ ಮೇಲೆ ನೀರು ಇಂಗು ಉಪ್ಪು ಬೆರೆಸಿ. ತುಪ್ಪದಲ್ಲಿ ಜೀರಿಗೆ  ಒಣಮೆಣಸಿನಕಾಯಿ ಒಗ್ಗರಣೆ ಹಾಕಿ.

ಪಾಲಕ್ ತಂಬುಳಿ 
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು – ಒಂದು ಕಟ್ಟು
ಉಪ್ಪು
ಕಾಳುಮೆಣಸು
ಮೊಸರು
ಜೀರಿಗೆ
ಉದ್ದಿನ ಬೇಳೆ  – 1/2 ಚಮಚ
ಕಡಲೆಬೇಳೆ – 1/2 ಚಮಚ
ಕಾಯಿ ತುರಿ                
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಎರಡು ನಿಮಿಷ ಬೇಯಿಸಿ. ತುಪ್ಪದಲ್ಲಿ  ಕಾಳುಮೆಣಸು ಉದ್ದಿನ ಬೇಳೆ, ಕಡಲೆಬೇಳೆ  ಜೀರಿಗೆ ಹುರಿದುಕೊಂಡು ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಮೊಸರಿಗೆ ಹಾಕಿ. ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಹಾಕಿ. ಜೀರ್ಣಕ್ರಿಯೆಯನ್ನು ಹೆಚ್ಚು ಮಾಡಲು ಸಹಕಾರಿ.

ಪಾಲಕ್ ಸೂಪ್‌ 
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು –
ಒಂದು ಕಟ್ಟು
ಉಪ್ಪು
ಇಂಗು 
ಕಾಳುಮೆಣಸು ಪುಡಿ
ರಸ್ಕ್
ನಿಂಬೆರಸ       
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಎರಡು ನಿಮಿಷ ಬೇಯಿಸಿ. ಆರಿದ ನಂತರ ಮಿಕ್ಸಿಗೆ ಹಾಕಿ.  ನುಣ್ಣಗಾದ ಮೇಲೆ ನೀರು ಇಂಗು ಕಾಳುಮೆಣಸು ಪುಡಿ ಉಪ್ಪು ನಿಂಬೆರಸ ಬೆರೆಸಿ. ಬೌಲಿಗೆ ಹಾಕಿ ರಸ್ಕಿನ ತುಂಡುಗಳನ್ನು ತೇಲಿಬಿಟ್ಟು ಸರ್ವ್ ಮಾಡಿ.

ಪಾಲಕ್ ತೊವ್ವೆ
ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು–ಒಂದು ಕಟ್ಟು
ಹೆಸರು ಬೇಳೆ – 1/2 ಕಪ್
ತೆಂಗಿನ ತುರಿ – 1/4 ಕಪ್            
ಉಪ್ಪು
ಇಂಗು
ನಿಂಬೆರಸ     
ಹಸಿರು ಮೆಣಸಿನಕಾಯಿ
ತಯಾರಿಸುವ ವಿಧಾನ
ಹೆಸರು ಬೇಳೆಯನ್ನು ಸ್ವಲ್ಪ ಕೆಂಪಗೆ ಹುರಿದುಕೊಂಡು,  ನೀರು ಸೇರಿಸಿ ಬೇಯಿಸಿ. ನಂತರ ಪಾಲಕ್ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಬೆಂದ ಹೆಸರು ಬೇಳೆಗೆ ಸೇರಿಸಿ ಎರಡು ನಿಮಿಷ ಬೇಯಿಸಿ. ನಂತರ ತುಪ್ಪದಲ್ಲಿ ಹಸಿರು ಮೆಣಸಿನಕಾಯಿ ಜೀರಿಗೆ ಒಗ್ಗರಣೆ ಮಾಡಿ ಎಲ್ಲವನ್ನು ಸೇರಿಸಿ ಕೂಡಿಸಿ ನಿಂಬೇರಸ ಹಾಕಿ.   ಚಪಾತಿ ದೋಸೆಯ ಜತೆ ತಿನ್ನಲು ಬಲು ರುಚಿ ಹಾಗೂ ದೇಹಕ್ಕೆ ತಂಪು.

ಪಾಲಕ್ ಜ್ಯೂಸ್
ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು – ಒಂದು ಕಟ್ಟು
ಉಪ್ಪು
ಕಾಳುಮೆಣಸು ಪುಡಿ
ನಿಂಬೆರಸ
ಜೀರಿಗೆ ಪುಡಿ
ಬೆಲ್ಲದ ಪುಡಿ                 
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಎರಡು ನಿಮಿಷ ಬೇಯಿಸಿ. ಆರಿದ ನಂತರ ಮಿಕ್ಸಿಗೆ ಹಾಕಿ. ನುಣ್ಣಗಾದ ಮೇಲೆ ನೀರು  ಕಾಳುಮೆಣಸು ಪುಡಿ ಜೀರಿಗೆ ಪುಡಿ ಬೆಲ್ಲದ ಪುಡಿ ಉಪ್ಪು ನಿಂಬೆರಸ ಬೆರೆಸಿ ಕೂಡಿಸಿ. ಪಿತ್ತ ಶಮನಕ್ಕೆ ಇದು ಸಹಕಾರಿ.

ಪಾಲಕ್ ಟಾನಿಕ್
ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು – ಒಂದು ಕಟ್ಟು
ಜೇನು            
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಎರಡು ನಿಮಿಷ ಬೇಯಿಸಿ. ಆರಿದ ನಂತರ ಮಿಕ್ಸಿಗೆ ಹಾಕಿ. ಇದಕ್ಕೆ ಜೇನು ಬೆರೆಸಿ ನಿತ್ಯ ಬೆಳಗ್ಗೆ ಕುಡಿಯುತ್ತಾ ಬಂದರೆ ರಕ್ತದಲ್ಲಿನ ಕೆಂಪುಕಣಗಳು ವೃದ್ಧಿಯಾಗಿ ಶರೀರಕ್ಕೆ ಪುಷ್ಠಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT