ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಇಲ್ಲ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಪಾತಾಳಗಂಗೆಗೂ ಕನ್ನ’ ಸುದ್ದಿ ಓದಿ ಆಶ್ಚರ್ಯವಾಯಿತು. ‘ಭೂ ದಿನ’ ಆಚರಿಸಿದ್ದು ನೆನಪಿನಿಂದ ಮಾಸುವ ಮುನ್ನವೇ ಈ ರೀತಿಯ ವಿಚಾರಗಳು ಹೊರಬರುತ್ತಿರುವುದು ದುಃಖಕರ. ಜಗದ ಒಟ್ಟು ನೀರಿನ ಕೇವಲ ಮೂರು ಪ್ರತಿಶತ ಸಿಹಿನೀರಿನ ರೂಪದಲ್ಲಿ ಕೆರೆ, ನದಿ, ಹಳ್ಳ-ಕೊಳ್ಳ, ಬಾವಿಗಳಲ್ಲಿ ಇಲ್ಲವೆ ಧ್ರುವಪ್ರದೇಶಗಳಲ್ಲಿ ಮಂಜುಗಡ್ಡೆಯಾಗಿ ಅಥವಾ ಭೂಮಿಯ ಅಂತರಾಳದಲ್ಲಿ ಕಂಡುಬರುತ್ತದೆ.

ಭೂಮಿಯ ಮೇಲಿನ ಶೇ 80ರಷ್ಟು ನೀರು ಮಾನವ ಮತ್ತು ಅವನ ವಿವಿಧ ಚಟುವಟಿಕೆಗಳಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ. ಕೊಳವೆಬಾವಿಗಳ ಕಾರಣದಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ. ಒಳಜಲ ಬರಿದು ಮಾಡುವುದಕ್ಕೆ ಬದಲಾಗಿ ಮಳೆನೀರನ್ನು ಭೂ ಒಡಲಿಗೆ ತುಂಬುವ ಕೆಲಸ ತುರ್ತಾಗಿ ಆಗಬೇಕು. ನೀರಿನ ಸಮರ್ಪಕ ಬಳಕೆ ಮಾಡಬೇಕು. 

ಭೂಮಾತೆಯ ಒಡಲನ್ನು ಖಾಲಿ ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ಅಂತಹ ಪ್ರಯತ್ನ  ಮಾಡಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ನೀರಿನ ಸಂರಕ್ಷಣಾ ಯೋಜನೆ, ಕಾರ್ಯಗಳು ಹೆಚ್ಚಾಗಬೇಕು.
– ಬಿ.ಆರ್‌. ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT