ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ 1ಬಿ ವೀಸಾ ಬದಲಾವಣೆ ಭಾರತೀಯ ಟೆಕಿಗಳಿಗೆ ಲಾಭ

Last Updated 28 ಏಪ್ರಿಲ್ 2017, 19:18 IST
ಅಕ್ಷರ ಗಾತ್ರ

ವಾಷಿಂಗ್ಟನ್:  ಎಚ್‌1ಬಿ ವೀಸಾ ನೀತಿಯಲ್ಲಿ  ಬದಲಾವಣೆ ತರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರ ನಡೆಯಿಂದ ಅಮೆರಿಕದಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ  ಪ್ರಯೋಜನವಾಗಲಿದೆ ಎಂದಿದ್ದಾರೆ ಆರ್ಥಿಕ ತಜ್ಞರು.

ಅಮೆರಿಕದಲ್ಲಿರುವ ತಾಂತ್ರಿಕ ಕಂಪೆನಿಗಳು ಮತ್ತು  ಹೊರಗುತ್ತಿಗೆ ಸೇವೆಗಳ ಕಾರ್ಮಿಕ ವೆಚ್ಚಗಳು ಹೊಸ ವೀಸಾ ನೀತಿಯಿಂದ ಹೆಚ್ಚಳವಾಗಲಿದೆ ಎಂದು ಬನ್ಯನ್ ಟ್ರೀ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಸ್ಥಾಪಕ  ಇಗ್ನೀಷಿಯಸ್‌ ಚಿತೆಲೆನ್ ತಿಳಿಸಿದ್ದಾರೆ. ‘ಈ ನೀತಿಯಿಂದಾಗಿ ವಾರ್ಷಿಕ ವೆಚ್ಚ   2.6ಬಿಲಿಯನ್‌ ಅಮೆರಿಕನ್‌ ಡಾಲರ್‌  (ಸುಮಾರು ₹260 ಕೋಟಿ) ಹೆಚ್ಚಾಗಲಿದೆ. ವೀಸಾ ಹೊಂದಿರುವವರಿಗೆ ವಾರ್ಷಿಕ ವೇತನದಲ್ಲಿ 1ಲಕ್ಷ ಅಮೆರಿಕನ್‌ ಡಾಲರ್  (ಸುಮಾರು ₹64.30 ಲಕ್ಷ) ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖ ಕಂಪೆನಿಗಳಿಗೆ ಈ ನೀತಿ ಅನ್ವಯಿಸಲಿದೆ. ಮುಂದಿನ ನವೆಂಬರ್‌ನಲ್ಲಿ ಹೊಸ ನೀತಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ಎಚ್‌1ಬಿ  ವೀಸಾ ನಿಯಮ ಜಾರಿಯಾದರೆ ಹೆಚ್ಚು ಕೌಶಲಭರಿತ ವೃತ್ತಿನಿರತರಿಗೇ ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿ ಉನ್ನತ ಪದವಿ ಪಡೆದವರು ಮತ್ತು ಭಾರತದಲ್ಲಿ  ಕೌಶಲ ವೃತ್ತಿಯಲ್ಲಿ ಇರುವವರೇ ಹೆಚ್ಚು ಅರ್ಜಿ ಸಲ್ಲಿಸಲಿದ್ದಾರೆ. ಇಂಥವರಿಗೆ ಅಮೆರಿಕದಲ್ಲಿ ಹೆಚ್ಚು ವೇತನವಿರುವ ಉನ್ನತ ಹುದ್ದೆಗಳು ಸಿಗಲಿವೆ’ ಎಂದು ಚಿತೆಲೆನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT