ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೊಕಾನ್‌: 2:1 ಬೋನಸ್‌ ಷೇರು

Last Updated 28 ಏಪ್ರಿಲ್ 2017, 19:41 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾಗಿರುವ ಬಯೊಕಾನ್‌, ನಾಲ್ಕನೇ ತ್ರೈಮಾಸಿಕದಲ್ಲಿ ₹ 127 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದೆ ಇದೇ ಅವಧಿಯಲ್ಲಿನ  ₹ 333 ಕೋಟಿಗೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣ ಶೇ 62ರಷ್ಟು ಕಡಿಮೆಯಾಗಿದೆ. ವರಮಾನವೂ ಕೂಡ ಮೂರನೇ ತ್ರೈಮಾಸಿಕದಲ್ಲಿನ ₹ 1,092 ಕೋಟಿಗೆ ಹೋಲಿಸಿದರೆ ಶೇ 11ರಷ್ಟು (₹ 974 ಕೋಟಿ) ಇಳಿಕೆಯಾಗಿದೆ.

‘2016–17ನೆ ಹಣಕಾಸು ವರ್ಷದಲ್ಲಿ  ಸಂಸ್ಥೆಯ ವರಮಾನವು ಶೇ 18ರಷ್ಟು ಏರಿಕೆ ಕಂಡಿದೆ’ ಎಂದು ಸಂಸ್ಥೆಯ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಹೇಳಿದ್ದಾರೆ.

ಬೋನಸ್‌ ಷೇರು: ₹ 5 ಮುಖಬೆಲೆಯ ಪ್ರತಿ ಎರಡು ಷೇರುಗಳಿಗೆ ಒಂದು ಬೋನಸ್  ಷೇರು (2:1) ವಿತರಿಸಲು ಸಂಸ್ಥೆಯ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ. ಗುರುವಾರದ ವಹಿವಾಟಿನಲ್ಲಿ ಸಂಸ್ಥೆಯ ಷೇರಿನ ಬೆಲೆ ₹ 1,119.60 ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT