ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಬ್ ನಾಗ’ ಪದ ಬಳಕೆ ಕಮಿಷನರ್‌ಗೆ ನೋಟಿಸ್

Last Updated 28 ಏಪ್ರಿಲ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸರು ನನ್ನನ್ನು ‘ಬಾಂಬ್ ನಾಗ’ ಎಂದು ಕರೆಯುತ್ತಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ರೌಡಿಶೀಟರ್ ವಿ.ನಾಗರಾಜ್ ವಕೀಲರ ಮೂಲಕ ನಗರ ಪೊಲೀಸ್ ಕಮಿಷನರ್‌ಗೆ ಶುಕ್ರವಾರ ನೋಟಿಸ್ ಕಳುಹಿಸಿದ್ದಾನೆ.

‘ನನ್ನ ಹೆಸರನ್ನು ನಾಗ, ಬಾಂಬ್ ನಾಗ, ಪಾಲ್‌ ನಾಗ ಎಂದು ಕರೆಯಲಾಗುತ್ತಿದೆ. ಪೊಲೀಸ್ ದಾಖಲೆಗಳಲ್ಲೂ  ಹಾಗೆಯೇ ಬರೆದುಕೊಳ್ಳಲಾಗಿದೆ. ಇದರಿಂದ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ನಾಗರಾಜ್ ಹೈಕೋರ್ಟ್‌ ಮೆಟ್ಟಿಲೇರಿದ್ದ. ಆತನ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಧೀಶರು, ‘ಇನ್ನು ಮುಂದೆ ವಿ.ನಾಗರಾಜ್ ಎಂದೇ ಕರೆಯಬೇಕು’ ಎಂದು 2015ರ ಜೂನ್‌ನಲ್ಲಿ ಸೂಚಿಸಿದ್ದರು. ಆ ನಂತರ ಪೊಲೀಸರು ದಾಖಲಾತಿಗಳಲ್ಲಿ ನಾಗರಾಜ್‌ನ ಅಡ್ಡ ಹೆಸರುಗಳನ್ನು ತೆಗೆದಿದ್ದರು.

‘ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಏ. 14 ರಂದು ಹೆಣ್ಣೂರು ಪೊಲೀಸರು ನಾಗರಾಜ್ ಮನೆ ಮೇಲೆ ದಾಳಿ ಮಾಡಿದ್ದರು. ಆ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್, ‘ಬಾಂಬ್‌ ನಾಗ’ ಎಂದೇ ಕರೆದಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಇದನ್ನು ಕಮಿಷನರ್ ಅವರ ಗಮನಕ್ಕೆ ತರಲಾಗಿದೆ’ ಎಂದು ನಾಗರಾಜ್  ಪರ ವಕೀಲ ಶ್ರೀರಾಮರೆಡ್ಡಿ ಹೇಳಿದರು.

‘ನಿಮ್ಮ ಕೆಳಹಂತದ ಅಧಿಕಾರಿಗಳು ಹೈಕೋರ್ಟ್‌ನ ಆದೇಶ ಉಲ್ಲಂಘಿಸುತ್ತಿದ್ದಾರೆ. ಇದೇ ಮುಂದುವರಿದರೆ, ನ್ಯಾಯಾಲಯದಲ್ಲಿ ಮೊಕದ್ದಮೆ
ಹೂಡುತ್ತೇವೆ’ ಎಂದು ಕಮಿನಷರ್‌ ಪ್ರವೀಣ್ ಸೂದ್ ಅವರಿಗೆ ಕೊಟ್ಟಿರುವ ನೋಟಿಸ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT