ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ‘ಸೂಪರ್’ ಜಯ

Last Updated 29 ಏಪ್ರಿಲ್ 2017, 19:56 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಜಸ್‌ಪ್ರೀತ್ ಬೂಮ್ರಾ ಅವರ ಚಾಣಾಕ್ಷ ಬೌಲಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್‌ ತಂಡವು ಶನಿವಾರ ಲಯನ್ಸ್‌ ಗುಜರಾತ್ ತಂಡದ ವಿರುದ್ಧ ಸೂಪರ್ ಓವರ್‌ನಲ್ಲಿ 5 ರನ್‌ಗಳಿಂದ ರೋಚಕ ಜಯ ಸಾಧಿಸಿತು.

ಐಪಿಎಲ್ ಹತ್ತನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರವಾದ ಪಂದ್ಯ ಇದಾಯಿತು. ಹಲವು ನಾಟಕೀಯ ತಿರುವುಗಳನ್ನು ಕಂಡ ಪಂದ್ಯವು ನಿಗದಿತ ಓವರ್‌ಗಳಲ್ಲಿ ಟೈ ಆಯಿತು. ಅದರಿಂದಾಗಿ ಸೂಪರ್ ಓವರ್ ಆಡಿಸಲಾಯಿತು.

ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 1 ಓವರ್‌ನಲ್ಲಿ 2 ವಿಕೆಟ್‌ಗಳಿಗೆ 11 ರನ್‌ ಗಳಿಸಿತು. ಅದಕ್ಕುತ್ತರವಾಗಿ ಲಯನ್ಸ್‌ ಒಂದು ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 6 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ ನ  ಕೀರನ್ ಪೊಲಾರ್ಡ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ ಹೊಡೆದರು. ಲಯನ್ಸ್ ವೇಗಿ ಜೇಮ್ಸ್ ಫಾಕ್ನರ್ ಪೊಲಾರ್ಡ್ ಮತ್ತು ಜಾಸ್ ಬಟ್ಲರ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ನಂತರ ಬ್ಯಾಟಿಂಗ್ ಮಾಡಲು ಬಂದ ಲಯನ್ಸ್ ತಂಡದ ಬ್ರೆಂಡನ್ ಮೆಕ್ಲಮ್ ಮತ್ತು ಆ್ಯರನ್ ಫಿಂಚ್ ಅವರು ದೊಡ್ಡ ಹೊಡೆತಗಳಿಗೆ ಯತ್ನಿಸಿದರೂ ಸಫಲರಾಗದಂತೆ ನೋಡಿ ಕೊಂಡವರು ಬೂಮ್ರಾ.

ಓವರ್ ಆರಂಭದಲ್ಲಿ ಒಂದು ನೋ ಬಾಲ್, ಒಂದು ವೈಡ್ ಎಸೆತಗಳನ್ನು ಹಾಕಿದ್ದ ಬೂಮ್ರಾ ನಂತರದ ಎಸೆತಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ವಂಚಿಸುವಲ್ಲಿ ಸಫಲರಾದರು. ಇದರಿಂದಾಗಿ ಲಯನ್ಸ್‌ ಸೋತಿತು.

ರೋಚಕ ಟೈ : ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಯನ್ಸ್ ತಂಡವು ಆರಂಭಿಕ ಆಟಗಾರ ಇಶಾನ್‌ ಕಿಶನ್‌ (48; 35ಎ, 6ಬೌಂ, 2ಸಿ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿ ನಿಂದ   20 ಓವರ್‌ಗಳಲ್ಲಿ 9 ವಿಕೆಟ್‌ಗೆ 153ರನ್‌ ಗಳಿಸಿತ್ತು.  

ನಂತರ ಗುರಿ ಬೆನ್ನತ್ತಿದ್ದ ಮುಂಬೈ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ (70; 44ಎ, 9ಬೌಂ, 1ಸಿ) ಅವರು ಉತ್ತಮ ಅಡಿಪಾಯ ಹಾಕಿದರು. ಆದರೆ ಜೇಮ್ಸ್‌ ಫಾಕ್ನರ್ (34ಕ್ಕೆ2)ಮತ್ತು ಬೇಸಿಲ್ ಥಂಪಿ (29ಕ್ಕೆ3) ಮುಂಬೈ ತಂಡದ ಮಧ್ಯಮಕ್ರಮಾಂಕಕ್ಕೆ ಪೆಟ್ಟು ನೀಡಿದರು. 

ಇದರಿಂದಾಗಿ ರನ್‌ ಗಳಿಕೆಯ ವೇಗ ಕಡಿಮೆಯಾಯಿತು. ಕೀರನ್ ಪೊಲಾರ್ಡ್ (15 ರನ್) ಮತ್ತು ಕೃಣಾಲ್ ಪಾಂಡ್ಯ (29ರನ್) ಅವರು ಚೇತರಿಕೆ ನೀಡಿದರು.ಕೊನೆಯ ಎಸೆತದವರೆಗೂ ಹಗ್ಗ ಜಗ್ಗಾಟ ನಡೆಯಿತು.

ಮುಂಬೈ ತಂಡದ ಜಯಕ್ಕೆ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಕೇವಲ ಒಂದು ವಿಕೆಟ್ ಮಾತ್ರ ಬಾಕಿಯಿತ್ತು. ಇರ್ಫಾನ್ ಪಠಾಣ್ ಎಸೆತವು ಲಸಿತ್ ಮಾಲಿಂಗ್ ಅವರ ಪ್ಯಾಡ್‌ಗೆ ತಗುಲಿ ಪುಟಿಯಿತು.

ಮಾಲಿಂಗ ಓಡಿದರು. ಅತ್ತ ಕಡೆಯ ಕ್ರೀಸ್‌ನಲ್ಲಿದ್ದ ಬೂಮ್ರಾ ಕೂಡ ಓಡಿ ಬಂದರು. ಆದರೆ ಫೀಲ್ಡರ್ ರವೀಂದ್ರ ಜಡೇಜ ಅವರ ನಿಖರ ಥ್ರೋಗೆ ಬೂಮ್ರಾ ರನ್‌ಔಟ್ ಆದರು. ಇದರಿಂದಾಗಿ ಪಂದ್ಯ ಟೈ ಆಯಿತು. ಸೂಪರ್ ಓವರ್‌ನಲ್ಲಿ ಬೂಮ್ರಾ ಅವರೇ ಗೆಲುವಿನ ರೂವಾರಿ ಯಾದರು.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌ ಲಯನ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 (ಇಶಾನ್‌ ಕಿಶನ್‌ 48, ರವೀಂದ್ರ ಜಡೇಜ 28, ಜೇಮ್ಸ್‌ ಫಾಕ್ನರ್‌ 21, ಆ್ಯಂಡ್ರ್ಯೂ ಟೈ 25; ಲಸಿತ್‌ ಮಾಲಿಂಗ 33ಕ್ಕೆ2, ಹರಭಜನ್‌ ಸಿಂಗ್‌ 23ಕ್ಕೆ1, ಜಸ್‌ಪ್ರೀತ್‌ ಬೂಮ್ರಾ 32ಕ್ಕೆ2, ಕೃಣಾಲ್‌ ಪಾಂಡ್ಯ 14ಕ್ಕೆ3).

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 153 (ಪಾರ್ಥಿವ್ ಪಟೇಲ್ 70, ನಿತೀಶ್ ರಾಣಾ 19, ಕೀರನ್ ಪೊಲಾರ್ಡ್ 15, ಕೃಣಾಲ್ ಪಾಂಡ್ಯ 29, ಬೇಸಿಲ್ ಥಂಪಿ 29ಕ್ಕೆ3, ಜೇಮ್ಸ್‌ ಫಾಕ್ನರ್ 34ಕ್ಕೆ2, ಅಂಕಿತ್ ಸೋನಿ 16ಕ್ಕೆ1)

ಸೂಪರ್ ಓವರ್: ಮುಂಬೈ ಇಂಡಿಯನ್ಸ್: 1 ಓವರ್‌ನಲ್ಲಿ 2 ವಿಕೆಟ್‌ಗೆ 11 (ಕೀರನ್ ಪೊಲಾರ್ಡ್ 10, ಜಾಸ್ ಬಟ್ಲರ್ 1, ಜೇಮ್ಸ್‌ ಫಾಕ್ನರ್ 11ಕ್ಕೆ2) ಗುಜರಾತ್ ಲಯನ್ಸ್: 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 6 (ಬ್ರೆಂಡನ್ ಮೆಕ್ಲಮ್ 1, ಆ್ಯರನ್ ಫಿಂಚ್ 2)
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ ಸೂಪರ್‌ ಓವರ್‌ನಲ್ಲಿ ಜಯ (ಪಂದ್ಯ ಟೈ) ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT