ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಸಮಿತಿ ಸದಸ್ಯರ ಪಟ್ಟಿ

ಮೇ 2ನೇ ವಾರದಲ್ಲಿ ಪಟ್ಟಿ ಹೈಕೋರ್ಟ್‌ಗೆ ಸಲ್ಲಿಸಲು ಯೋಜನೆ: ಮೇಯರ್‌
Last Updated 29 ಏಪ್ರಿಲ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ತಿಂಗಳೊಳಗೆ ವಾರ್ಡ್‌ ಸಮಿತಿ ರಚಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.

ವಾರ್ಡ್‌ ಸಮಿತಿ ರಚನೆ ವಿಳಂಬದ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಿಂಗಳೊಳಗೆ ವಾರ್ಡ್‌ ಸಮಿತಿಗಳನ್ನು ರಚಿಸಬೇಕೆಂದು ಆದೇಶಿಸಿತ್ತು. ಮೇಯರ್‌ ಜಿ. ಪದ್ಮಾವತಿ, ‘ಪಾಲಿಕೆ ಎಲ್ಲಾ ಸದಸ್ಯರು ಈಗಾಗಲೇ ವಾರ್ಡ್‌ ಸಮಿತಿಗೆ ಸಂಭವನೀಯ ಸದಸ್ಯರ ಪಟ್ಟಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ( ವಾರ್ಡ್‌ ಸಮಿತಿ) ನಿಯಮದ ಅನ್ವಯ 2016ರಲ್ಲೇ ಕೆಲ ವಾರ್ಡ್‌ಗಳಲ್ಲಿ ಸಮಿತಿ ರೂಪಿಸಲಾಗಿದೆ.

ಕುವೆಂಪುನಗರದ ಪಾಲಿಕೆ ಸದಸ್ಯ ವಿ.ವಿ. ಪ್ರತಿಭಾರಂಜನ್‌, ‘ಆರು ತಿಂಗಳ ಹಿಂದೆಯೇ ವಾರ್ಡ್‌ ಸಮಿತಿ ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದೇನೆ. ನಾಗರಿಕ ಸಮಸ್ಯೆಗಳ ಕುರಿತು ಚರ್ಚಿಸಲು ಅದರ ಸದಸ್ಯರು ಪ್ರತಿ ತಿಂಗಳು ಸಭೆ ನಡೆಸುತ್ತಿದ್ದಾರೆ’ ಎಂದರು.
ಮತ್ತೀಕೆರೆ ವಾರ್ಡ್‌ನ ಸದಸ್ಯ  ಎಂ.ಸಿ. ಜಯಪ್ರಕಾಶ್‌, ‘ವಾರ್ಡ್‌ನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಕೆಲವರಹೆಸರುಗಳನ್ನು ಸೂಚಿಸಿವೆ.  ಹಾಗಾಗಿ ಸಮಿತಿ ಸದಸ್ಯರ ಆಯ್ಕೆ ದೊಡ್ಡ ಕೆಲಸವಲ್ಲ’ ಎಂದರು.

ಸಮಿತಿ ಕಾರ್ಯಗಳು

* ವಾರ್ಡ್‌ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು
*  ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಿಗಾ ವಹಿಸುವುದು
* ನೀರು ಸರಬರಾಜು ಸರಿಯಾಗಿ ಆಗುತ್ತಿದೆಯೇ ಎಂದು ತಿಳಿಯುವುದು
* ಉದ್ಯಾನ ಮತ್ತು  ಮೈದಾನಗಳ ನಿರ್ವಹಣೆ ಬಗ್ಗೆ ಗಮನ ಹರಿಸುವುದು
*  ವಾರ್ಡ್‌ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾದ ಹಣ ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT