ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವರನ್ನು ಮಾತ್ರ ಅತಿ ಗಣ್ಯ ವ್ಯಕ್ತಿಗಳು ಎಂದು ಪರಿಗಣಿಸುವ ಬದಲು ದೇಶದ ಎಲ್ಲ ವ್ಯಕ್ತಿಗಳನ್ನು ಗಣ್ಯರೆಂದು ಪರಿಗಣಿಸಬೇಕಿದೆ

Last Updated 30 ಏಪ್ರಿಲ್ 2017, 6:39 IST
ಅಕ್ಷರ ಗಾತ್ರ

ನವದೆಹಲಿ: ಬೇಸಿಗೆ ರಜೆಯಲ್ಲಿ ಪಾಕೆಟ್ ಮನಿ ಗಳಿಸಬೇಕೇ? ಪಾಕೆಟ್ ಮನಿ ಗಳಿಸಲು ಇಲ್ಲೊಂದು ಹೊಸ ಮಾರ್ಗವಿದೆ. ಭೀಮ್ ಆ್ಯಪ್‌ನ್ನು ಡೌನ್‍ಲೋಡ್ ಮಾಡಿ ಆ ಆ್ಯಪ್ ಬಳಸುವಂತೆ ನೀವು ಇನ್ನೊಬ್ಬರಿಗೆ ಶಿಫಾರಸು ಮಾಡಿದರೆ ನಿಮಗೆ ₹10 ಸಿಗುತ್ತದೆ. ಈ ರಜಾಕಾಲದಲ್ಲಿ ನೀವು ಪ್ರತಿದಿನ 20 ಜನರಿಗೆ ಭೀಮ್ ಆ್ಯಪ್ ಡೌನ್‍ಲೋಡ್ ಮಾಡುವಂತೆ ಶಿಫಾರಸು ಮಾಡಿ ಅವರು ಭೀಮ್ ಆ್ಯಪ್ ಡೌನ್‍‌ಲೋಡ್  ಮಾಡಿಕೊಂಡರೆ ನಿಮಗೆ ದಿನವೊಂದಕ್ಕೆ  ₹200 ಗಳಿಸಬಹುದು ಎಂದು 'ಮನದ ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನದ ಮಾತು ಮುಖ್ಯಾಂಶಗಳು

* ಮನದ ಮಾತು ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಜನರು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಈ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ

* ಈ ರೀತಿ ಸಲಹೆಗಳನ್ನು ನೀಡುವವರು ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡುವವರಾಗಿದ್ದಾರೆ. ಅವರು ತಮ್ಮ ಅನುಭವಗಳಿಂದಲೇ ಈ ಸಲಹೆಗಳನ್ನು ನೀಡುತ್ತಿದ್ದಾರೆ

* ಮೇ.1ನೇ ತಾರೀಖು ಗುಜರಾತ್ ಮತ್ತು ಮಹಾರಾಷ್ಟ್ರದ ಸಂಸ್ಥಾಪನಾ ದಿನ. ನಮ್ಮ ದೇಶಕ್ಕಾಗಿ ಈ ರಾಜ್ಯದವರು ಮಾಡಿದ ಸೇವೆಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಹಲವಾರು ನಾಯಕರು ಈ ರಾಜ್ಯಗಳಿಂದ ಬಂದವರಾಗಿದ್ದಾರೆ.

* ದೇಶದಲ್ಲೀಗ ಉಷ್ಣ ಗಾಳಿ ಬೀಸುತ್ತಿದೆ.ಹವಾಮಾನ ವೈಪರೀತ್ಯ ಎಂಬುದು ಈಗ ಚರ್ಚಾ ವಿಷಯವಾಗಿ ಮಾತ್ರ ಉಳಿದಿಲ್ಲ. ನಾವೆಲ್ಲರೂ ಇದನ್ನು ಪ್ರತಿದಿನ ಅನುಭವಿಸುತ್ತಿದ್ದೇವೆ.

* ಇಂದಿನ ಯುವ ಜನಾಂಗ  ಕಂಫರ್ಟ್ ಜೋನ್‌ನಿಂದ ಹೊರಗೆ ಬರಲು ಬಯಸುವುದಿಲ್ಲ. ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಲಿಯಿರಿ.

* ಮಕ್ಕಳು, ಯುವ ಜನಾಂಗ 'ಗೂಗಲ್ ಗುರು' ಬಳಕೆ ಮಾಡಿ.  ಹೊಸ ಹೊಸ ಅನುಭವಗಳನ್ನು ತಮ್ಮದಾಗಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

* ಈ ಬೇಸಿಗೆ ರಜಾದಿನವನ್ನು ಆನಂದದಾಯಕವಾಗಿರಿಸುವುದಕ್ಕೆ ಮೂರು ಸಲಹೆಗಳು: ಹೊಸ ಜಾಗ, ಹೊಸ ಅನುಭವ ಮತ್ತು ಹೊಸ ನೈಪುಣ್ಯವನ್ನು ತಮ್ಮದಾಗಿಸಿಕೊಳ್ಳಿ.

* ಯುವ ತಲೆಮಾರು ಕಂಫರ್ಟ್ ಜೋನ್‍ನಿಂದ ಹೊರಗೆ ಬಂದು ಹೊಸ ಖುಷಿಯನ್ನು ಅನುಭವಿಸಬೇಕು.

* ಮಕ್ಕಳು ಹೊಸ ಚಿಂತನೆಗಳ (ಔಟ್ ಆಫ್ ಬಾಕ್ಸ್ ) ಮೂಲಕ ಈ ಬೇಸಿಗೆ ರಜಾಕಾಲವನ್ನು ಕಳೆಯಲಿ.

* ಬೇಸಿಗೆ ರಜೆಯಲ್ಲಿ ಪಾಕೆಟ್ ಮನಿ ಗಳಿಸಬೇಕೇ? ಪಾಕೆಟ್ ಮನಿ ಗಳಿಸಲು ಇಲ್ಲೊಂದು ಹೊಸ ಮಾರ್ಗವಿದೆ. ಭೀಮ್ ಆ್ಯಪ್‌ನ್ನು ಡೌನ್‍ಲೋಡ್ ಮಾಡಿ ಆ ಆ್ಯಪ್ ಬಳಸುವಂತೆ ನೀವು ಇನ್ನೊಬ್ಬರಿಗೆ ಶಿಫಾರಸು ಮಾಡಿದರೆ ನಿಮಗೆ ₹10 ಸಿಗುತ್ತದೆ. ಈ ರಜಾಕಾಲದಲ್ಲಿ ನೀವು ಪ್ರತಿದಿನ 20 ಜನರಿಗೆ ಭೀಮ್ ಆ್ಯಪ್ ಡೌನ್‍ಲೋಡ್ ಮಾಡುವಂತೆ ಶಿಫಾರಸು ಮಾಡಿ ಅವರು ಭೀಮ್ ಆ್ಯಪ್ ಡೌನ್‍‌ಲೋಡ್  ಮಾಡಿಕೊಂಡರೆ ನಿಮಗೆ ದಿನವೊಂದಕ್ಕೆ  ₹200 ಗಳಿಸಬಹುದು.

* ವಾಹನಗಳ ಮೇಲೆ ಕೆಂಪು ದೀಪ ಬಳಕೆ ವಿಐಪಿ ಸಂಸ್ಕೃತಿ. ಕೆಂಪು ದೀಪಗಳ ಬಳಕೆ ನಿಷೇಧಿಸಿದ ನಂತರ ನನಗಿದು ಮನವರಿಕೆಯಾಯಿತು.ಕೆಂಪು ದೀಪ ಬಳಕೆ ನಿಷೇಧಿಸಿದ್ದಕ್ಕೆ ಜಬಲ್‍ಪುರ್‍ ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ.

* ವಿಐಪಿ (ವೆರಿ ಇಂಪಾರ್ಟೆಂಟ್ ಪರ್ಸನ್) ಅಥವಾ ಅತಿ ಗಣ್ಯ ವ್ಯಕ್ತಿಗಳು ಎಂಬುದರ ಬದಲು ಪ್ರತಿಯೊಬ್ಬ ವ್ಯಕ್ತಿಯೂ ಗಣ್ಯರು (EPI-Every Person is Important) ಎಂದು ಪರಿಗಣಿಸಬೇಕಾಗಿದೆ.

* ಸಂತ ರಾಮಾನುಜ ಆಚಾರ್ಯರ ಜನ್ಮ ದಿನಾಚರಣೆಯನ್ನೂ ಪ್ರಧಾನಿ ಸ್ಮರಿಸಿದ್ದಾರೆ.

*ಬೇಸಿಗೆ ಕಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳುವ ಮೂಲಕ ಮೋದಿ ಇಂದಿನ 'ಮನದ ಮಾತು' ಕಾರ್ಯಕ್ರಮ ಮುಕ್ತಾಯಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT