ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗಿನ 'ಅದುರ್ಸ್' ಚಿತ್ರದಿಂದ ಬಂದ 'ಗೂಗ್ಲಿ' ಏನ್ ಮಾಡ್ಲೀ?

Last Updated 30 ಏಪ್ರಿಲ್ 2017, 11:32 IST
ಅಕ್ಷರ ಗಾತ್ರ

ಪವನ್ ಒಡೆಯರ್ ನಿರ್ದೇಶಿಸಿ, ಯಶ್ ಮತ್ತು ಕೃತಿ ಖರಬಂದಾ ನಾಯಕ ನಾಯಕಿಯರಾಗಿ ನಟಿಸಿರುವ ಚಿತ್ರ ಗೂಗ್ಲಿ. 2013ರಲ್ಲಿ ಬಿಡುಗಡೆಯಾಗಿ ಮಾಸ್ ಹಿಟ್ ಆದ 'ಗೂಗ್ಲಿ'ಯ ರೊಮ್ಯಾಂಟಿಕ್ ಕಥೆಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿ ಬಿಟ್ಟಿದ್ದರು.

ಜೋಶ್ ಭರಿತ ಹಾಡು ಮತ್ತು ಅವುಗಳ ಕಲರ್‍‍ಫುಲ್ ಮೇಕಿಂಗ್‍ ಚಿತ್ರದ ಪ್ಲಸ್ ಪಾಯಿಂಟ್ ಎಂಬುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದಲ್ಲಿ 'ಗೂಗ್ಲಿ ...ಗಂಡಸರೇ ಕೇಳಿ ಎಂಬ ಹಾಡೊಂದಿದೆ. ಹರಿಚರಣ್ ಮತ್ತು ಅಪೂರ್ವ ಹಾಡಿದ ಈ ಹಾಡು ಅದ್ಭುತವಾಗಿ ಮೂಡಿಬಂದಿತ್ತು.

2010ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ ಅದುರ್ಸ್. ಎನ್‍ಟಿಆರ್ ಜೂನಿಯರ್ ಮತ್ತು ನಯನತಾರಾ ಅಭಿನಯಿಸಿದ್ದ ಈ ಚಿತ್ರ ಕೂಡಾ ಹಿಟ್ ಆಗಿತ್ತು. ಇದರಲ್ಲಿ ಪ್ರಿಯಾ ಹಿಮೇಶ್ ಮತ್ತು ಬಾಬಾ ಸೆಹ್‍‌ಗಲ್ ಹಾಡಿದ 'ಅಸ್ಸಲಾಂ ವಾಲೇಕ್ಕುಂ' ಎಂದು ಆರಂಭವಾಗುವ ಹಾಡೊಂದಿದೆ. ತೆಲುಗು ಹಾಡಿನ ಬಗ್ಗೆ ಇಲ್ಲಿ ಉಲ್ಲೇಖಿಸಿದ್ದು ಯಾಕೆಂದರೆ ಆ ಹಾಡಿಗೂ 'ಗೂಗ್ಲಿ' ಸಿನಿಮಾದ 'ಗಂಡಸರೇ ಕೇಳಿ' ಹಾಡಿಗೂ ತುಂಬಾ ಸಾಮ್ಯತೆ ಇದೆ.

'ಅಸ್ಸಲಾಂ ವಾಲೇಕ್ಕುಂ' ಹಾಡಿನ ರಾಗಕ್ಕೆ 'ಗೂಗ್ಲಿ' ಸಂಗೀತ ನಿರ್ದೇಶಕರು ಕ್ಲೀನ್ ಬೋಲ್ಡ್ ಆದ ಕಾರಣ ಈ ರೀತಿ ಆಗಿರಬಹುದೇ? ಅಥವಾ ಗೂಗ್ಲಿ ಹಾಡಿಗೆ 'ಅದುರ್ಸ್' ಸಂಗೀತವೇ ಸ್ಫೂರ್ತಿಯೇ? ಹಾಡು ಕೇಳಿ ನೋಡಿ.

ಚಿತ್ರ: ಗೂಗ್ಲಿ
ಹಾಡು: ಗಂಡಸರೇ ಕೇಳಿ
ಸಂಗೀತ ನಿರ್ದೇಶನ: ಜೂಶುವಾ ಶ್ರೀಧರ್

ಸಾಮ್ಯತೆ
ಚಿತ್ರ: ಅದುರ್ಸ್
ಹಾಡು: ಅಸ್ಸಲಾಂ ವಾಲೇಕ್ಕುಂ
ಸಂಗೀತ ನಿರ್ದೇಶನ: ದೇವಿ ಶ್ರೀ ಪ್ರಸಾದ್

[related]

ಪರಭಾಷೆಯಿಂದ ಸ್ಫೂರ್ತಿ ಪಡೆದ ಕನ್ನಡ ಸಿನಿಮಾಗಳ ಹಾಡುಗಳ ಬಗ್ಗೆ ನಿಮಗೂ ತಿಳಿದಿದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT