ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಾರ್ಕ್ಟಿಕ್‌ ಹಿಮನದಿಯಲ್ಲಿ ಹರಿಯುತ್ತಿರುವ ‘ರಕ್ತದ್ರವ’ದ ಶತಮಾನದ ರಹಸ್ಯ ಬಯಲು

Last Updated 30 ಏಪ್ರಿಲ್ 2017, 12:38 IST
ಅಕ್ಷರ ಗಾತ್ರ

ಅಂಟಾರ್ಕ್ಟಿಕಾ: ಇಲ್ಲಿನ ಟೇಲರ್‌ ಹಿಮನದಿಯಲ್ಲಿ ನೂರಾರು ವರ್ಷಗಳಿಂದ ಹರಿಯುತ್ತಿರುವ ರಕ್ತ ವರ್ಣದ ದ್ರವದ ರಹಸ್ಯವನ್ನು ವಿಜ್ಞಾನಿಗಳು ಬಯಲು ಮಾಡಿದ್ದಾರೆ.

ಈ ಬಗ್ಗೆ ಜರ್ನಲ್‌ ಆಫ್‌ ಗ್ಲೇಸಿಯೊಲಜಿ ವರದಿ ಮಾಡಿದೆ. ಹೇರಳವಾಗಿ ಹರಿಯುತ್ತಿರುವ ರಕ್ತ ವರ್ಣದ್ರವವನ್ನು ಇಲ್ಲಿನ ಜನ ಅಶುಭ ಸೂಚಕವೆಂದು ನಂಬಿದ್ದರು.

ನದಿಯಲ್ಲಿ ಹರಿಯುತ್ತಿರುವ ಕೆಂಪು ದ್ರವದ ಪದರಗಳನ್ನು ರೇಡಾರ್ ಬಳಸಿ ಸ್ಕ್ಯಾನ್ ಮಾಡಲಾಗಿದ್ದು, ಕೆಂಪು ದ್ರವಕ್ಕೆ ನಿಜವಾದ ಕಾರಣವೇನು ಎಂಬುದನ್ನು ಖಚಿತ ಪಡಿಸಲಾಗಿದೆ.

‘ಹಿಮನದಿಯ ತಳದ ಅಧ್ಯಯನವು ರಹಸ್ಯವನ್ನು ತಿಳಿಯಲು ನೆರವಾಗಿದೆ. ನದಿಯಲ್ಲಿ ಕಬ್ಬಿಣದ ಅಂಶದೊಂದಿಗೆ ಉಪ್ಪುನೀರಿನ ಅಂಶ ಹೆಚ್ಚಾಗಿ ಬೆರೆತಿರುವುದರಿಂದ ನೀರು ಕೆಂಪು ಬಣ್ಣಕ್ಕೆ ಬದಲಾಗಿದೆ ಎಂದು ಅಧ್ಯಯನ ನಡೆಸಿದ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸಂಶೋಧನೆಯ ಮೂಲಕ ಹಿಮನದಿಯ ಆಳದಲ್ಲಿ ಮಾತ್ರವೇ ನೀರು ಹರಿಯುವುದಿಲ್ಲ. ಬದಲಾಗಿ ಹಿಮನದಿಯೂ ತನ್ನದೇ ಆದ ನೀರಿನ ಅರಿವಿನ ವ್ಯವಸ್ಥೆಯನ್ನು ಹೊಂದಿದೆ ಎಂಬುದನ್ನೂ ಸಹ ಅಲೆಸ್ಕಾ ಫೈರ್‌ಬ್ಯಾಂಕ್ಸ್‌ ವಿಶ್ವವಿದ್ಯಾಲಯ ಹಾಗೂ ಕೊಲೊರಾಡೋ ಕಾಲೇಜಿನ ವಿಜ್ಞಾನಿಗಳ ತಂಡ ಗಮನಿಸಿದೆ.

‘ಟೇಲರ್‌ ಹಿಮನದಿ’ಯ ಸರಾಸರಿ ಉಷ್ಣತೆಯು 1.4 ಡಿಗ್ರಿ ಫ್ಯಾರನ್ಹೀಟ್ (-17 ಡಿಗ್ರಿ ಸೆಲ್ಸಿಯಸ್)ಗಳಷ್ಟಿದ್ದು, ಇದನ್ನು ನಿರಂತರವಾಗಿ ಹರಿಯುತ್ತಿರುವ ಅತ್ಯಂತ ತಣ್ಣನೆಯ ನದಿ ಎಂದೂ ಸಹ ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT