ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಥ್ಸ್‌ ಕೆಫೆ’ಯಲ್ಲಿ ಆಡಾಡ್ತಾ ಗಣಿತ

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಲವರಿಗೆ ಗಣಿತ ಕಬ್ಬಿಣದ ಕಡಲೆ. ಗಣಿತದ ಸೂತ್ರಗಳಂತೂ ಅರ್ಥವಾಗುವುದೇ ಇಲ್ಲ ಎಂದು ಅಳಲು ತೋಡಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ಗಣಿತದ ಪರಿಕಲ್ಪನೆಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಲು ತಡವರಿಸುತ್ತಾರೆ. ಅಂತಹ ಮಕ್ಕಳಿಗೆ ಗಣಿತವನ್ನು ಆಟದ ಮೂಲಕ ಕಲಿಸಲು ಮುಂದಾಗಿದೆ ‘ಮ್ಯಾಥ್ಸ್‌ ಕೆಫೆ’.

ಬೆಂಗಳೂರಿನ ಸಹಕಾರ ನಗರದಲ್ಲಿ ಕ್ರಿಯಾಶೀಲವಾಗಿರುವ ಈ ‘ಗಣಿತ ಕಲಿಕಾ ಕೇಂದ್ರ’ದಲ್ಲಿ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಗಣಿತ ಕಲಿಸಲಾಗುತ್ತದೆ. ಫಜಲ್‌, ಚಿತ್ರ ಬಿಡಿಸುವುದು – ಹೀಗೆ ಆಟಗಳ ರೂಪದಲ್ಲಿ ಗಣಿತ ಕಲಿಸಲಾಗುತ್ತದೆ.

ಗಣಿತದ ಮೂಲ ಪರಿಕಲ್ಪನೆಯನ್ನು ಮಕ್ಕಳು ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕು ಎಂಬುದು ಈ ಕೇಂದ್ರದ ಉದ್ದೇಶ. ಇಲ್ಲಿ ಗಣಿತದ ಜೊತೆಗೆ ಯೋಗವನ್ನೂ ಕಲಿಸಲಾಗುತ್ತದೆ. ಜೊತೆಗೆ ಮಕ್ಕಳಿಗಾಗಿ ಲೈಬ್ರರಿಯನ್ನು ತೆರೆಯಲಾಗಿದೆ. ಇದರಿಂದ ಮಕ್ಕಳಲ್ಲಿ ಜ್ಞಾನ ಹಾಗೂ ಏಕಾಗ್ರತೆ ವೃದ್ಧಿಯಾಗಲಿದೆ.

ಮ್ಯಾಥ್ಸ್ ಕೆಫೆ ವಿಳಾಸ: ನಂ. 19, 4ನೇ ಅಡ್ಡರಸ್ತೆ, ಶಾಂತಿವನ, ಕೊಡಿಗೆಹಳ್ಳಿ ಮುಖ್ಯರಸ್ತೆ, ಸಹಕಾರ ನಗರ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT