ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್‌ ಗೃಹಬಂಧನ ವಿಸ್ತರಣೆ

Last Updated 30 ಏಪ್ರಿಲ್ 2017, 19:16 IST
ಅಕ್ಷರ ಗಾತ್ರ

ಲಾಹೋರ್‌ :ಮುಂಬೈ ದಾಳಿ ಸಂಚುಕೋರ ಹಾಗೂ ಜಮಾತ್‌ ಉದ್‌ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನ 90 ದಿನಗಳ ಗೃಹ ಬಂಧನ ಪೂರ್ಣಗೊಂಡಿದ್ದು, ಇದನ್ನು ವಿಸ್ತರಿಸಲು  ಪಾಕಿಸ್ತಾನದ ಪಂಜಾಬ್‌ ಸರ್ಕಾರ ಭಾನುವಾರ ತೀರ್ಮಾನಿಸಿದೆ.

‘ಭಯೋತ್ವಾದನಾ ನಿಗ್ರಹ ಕಾಯ್ದೆ  ಅಡಿಯಲ್ಲಿ ಹಫೀಜ್‌ ಹಾಗೂ ಆತನ ನಾಲ್ವರು ಸಹಚರರ ಗೃಹಬಂಧನವನ್ನು ಮುಂದಿನ 90 ದಿನಗಳಿಗೆ ವಿಸ್ತರಿಸಲಾಗಿದೆ. ಈ ಕುರಿತು ಶೀಘ್ರ ಅಧಿಸೂಚನೆ ಪ್ರಕಟಗೊಳ್ಳಲಿದೆ’ ಎಂದು ಪಂಜಾಬ್‌ ಸರ್ಕಾರದ ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಶಾಂತಿ ಮತ್ತು ಭದ್ರತೆಗೆ ಅಪಾಯ ತರುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಹಫೀಜ್‌ ಮತ್ತು ಸಹಚರರನ್ನು  ಜನವರಿ 30ರಿಂದ  ಗೃಹಬಂಧನದಲ್ಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT