ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಬಸ್‌ಗಳ ನಡುವೆ ಅಪಾಯಕಾರಿ ರೇಸ್!

Last Updated 1 ಮೇ 2017, 11:09 IST
ಅಕ್ಷರ ಗಾತ್ರ
ADVERTISEMENT

ಕೊಯಮತ್ತೂರು: ಓವರ್‌ಟೇಕ್ ಮಾಡುವ ಧಾವಂತ ಎರಡು ಖಾಸಗಿ ಬಸ್‌ಗಳ ನಡುವಣ ಅಪಾಯಕಾರಿ ರೇಸ್‌ಗೆ ಕಾರಣವಾದ ಘಟನೆ ಇಲ್ಲಿ ನಡೆದಿದೆ.

ಮುಂದೆ ಸಂಚರಿಸುತ್ತಿರುವ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಚಾಲಕ ಬಸ್ಸನ್ನು ತೀರಾ ಬಲಬದಿಯಲ್ಲಿ ವೇಗವಾಗಿ ಚಲಾಯಿಸಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಚಾಲಕ ಸಹ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ. ಬಸ್‌ಗಳ ನಡುವಣ ಈ ಅಪಾಯಕಾರಿ ರೇಸ್ ಎದುರಿನಿಂದ ಬರುವ ವಾಹನಗಳ ಚಾಲಕರನ್ನು ಭೀತಿಗೊಳಗಾಗಿಸಿತ್ತು. ಈ ದೃಶ್ಯವನ್ನು ಬಸ್‌ಗಳ ಹಿಂಬದಿಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸವಾರರು ಚಿತ್ರೀಕರಿಸಿದ್ದಾರೆ. ವಿಡಿಯೊ ಈಗ ಅಂತರ್ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೀರಾ ಬಲಬದಿಯಲ್ಲಿ ಮುನ್ನಗ್ಗಿದ ಬಸ್ ಹೆದ್ದಾರಿಯಿಂದ ಕೆಳಗಿಳಿದು ಅನತಿ ದೂರದಲ್ಲಿ ವೇಗವಾಗಿ ಚಲಿಸುತ್ತಿರುವುದೂ ವಿಡಿಯೊದಲ್ಲಿ ಕಾಣಿಸಿದೆ. ಅಜಾಗರೂಕತೆಯ ಚಾಲನೆ ಮಾತ್ರವಲ್ಲದೆ, ರಸ್ತೆ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಬಸ್‌ ಚಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿ ಎರಡೂ ಬಸ್‌ಗಳ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

‘ಅಜಾಗರೂಕತೆಯ ಚಾಲನೆ ಮಾಡಿದಲ್ಲಿ ಪರವಾನಗಿ ಕಳೆದುಕೊಳ್ಳಬೇಕಾದೀತು ಎಂದು ಖಾಸಗಿ ಬಸ್‌ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಇಂಥ ಘಟನೆಗಳಿಗೆ ಸಂಬಂಧಿಸಿ ಮೂವರು ಚಾಲಕರ ಚಾಲನಾ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT