ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ನೀರು ತುಂಬಿಸಲು ತಿಂಗಳ ಗಡುವು

ವಾಟಾಳ್ ಪಕ್ಷದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ
Last Updated 4 ಮೇ 2017, 7:33 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ಒಂದು ತಿಂಗಳೊಳಗೆ ನದಿ ಮೂಲದಿಂದ ನೀರು ತುಂಬಿಸಬೇಕು. ಇಲ್ಲದಿದ್ದರೆ ಜೂನ್‌ 2ರಂದು ಚಾಮರಾಜನಗರ ಬಂದ್‌ ಮಾಡಲಾಗು ವುದು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌್ ಎಚ್ಚರಿಕೆ ನೀಡಿದರು.

ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇ ರಿಕೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ದಿಂದ ಮೆರವಣಿಗೆ ಆರಂಭಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿ ಳೆಯರು ಖಾಲಿ ಬಿಂದಿಗೆ ಪ್ರದರ್ಶಿಸಿದರು.

‘ರೈತರಿಗೆ ಬೆಳೆ ವಿಮೆ ಸರಿಯಾಗಿ ಪಾವತಿಬೇಕು. ಜಿಲ್ಲೆಯ ಗೋ ಶಾಲೆಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡ ಬೇಕು. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಯಿಲ್ಲದೆ ತೆಂಗಿನ ಮರಗಳು ನಾಶವಾಗಿವೆ. ತೋಟಗಾರಿಕೆ ಇಲಾಖೆ ಯಿಂದ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕುಡಿಯುವ ನೀರಿನ ಸಮಸ್ಯೆ ತಲೆ ದೋರಿರುವ ಗ್ರಾಮಗಳಿಗೆ ಜಿಲ್ಲಾಡಳಿತ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಪ್ರಗತಿ ಯಲ್ಲಿರುವ ಒಳಚರಂಡಿ ಕಾಮಗಾರಿ ಯನ್ನು ಶೀಘ್ರವೇ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಚಾಮರಾಜೇಶ್ವರಸ್ವಾಮಿ ದೇವ ಸ್ಥಾನದ ಅಭಿವೃದ್ಧಿ ಆಮೆಗತಿ ವೇಗ ದಲ್ಲಿ ಸಾಗುತ್ತಿದೆ. ಕೂಡಲೇ ದೇವಸ್ಥಾನ ಅಭಿವೃದ್ಧಿ ಪೂರ್ಣಗೊಳಿಸ ಬೇಕು. ಚಾಮರಾಜೇಶ್ವರಸ್ವಾಮಿ ದೊಡ್ಡ ರಥ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯು ಸತತ ಬರಗಾಲಕ್ಕೆ ತುತ್ತಾ ಗಿದೆ. ಮಳೆ ಕೊರತೆಯಿಂದ ಗ್ರಾಮಗಳಲ್ಲಿ ನೀರಿನ ಮೂಲಗಳೇ ಇಲ್ಲದಂತಾಗಿವೆ. ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗುತ್ತಿವೆ. ಕೃಷಿ, ಜನ- ಹಾಗೂ ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾ­ಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಕೆಲಸ ಅರಸಿ ಗುಳೆ ಹೋಗುತ್ತಿ ದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಆದರೂ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೆರೆಗಳಿಗೆ ಸಮ ರ್ಪಕವಾಗಿ ನೀರು ತುಂಬಿಸದೆ ನಿರ್ಲಕ್ಷಿಸು ತ್ತಿವೆ. ಕೂಡಲೇ, ಜಿಲ್ಲೆಯ ಕೊತ್ತಲವಾಡಿ ಕೆರೆ, ಸುವರ್ಣನಗರ ಕೆರೆ, ಅರಕಲವಾಡಿ ಕೆರೆ, ಅಮಚವಾಡಿ ಎಣ್ಣೆಹೊಳೆ, ಹರ ದನಹಳ್ಳಿ ಬಂಡಿಗೆರೆ, ಮರದಗ ಕೆರೆ, ನಗರದ ಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಸಿಂಡನ ಕೆರೆ, ಕೋಡಿಮೋಳೆ ಕೆರೆ, ದೊಡ್ಡರಾಯಪೇಟೆ ಕೆರೆ, ಮಾಲಗೆರೆ ಸೇರಿದಂತೆ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದಳಪತಿ ವೀರತಪ್ಪ, ನಾಗೇಶ್, ನಾಗರಾಜ್‌ ಮೂರ್ತಿ, ಶಿವಲಿಂಗ ಮೂರ್ತಿ, ಕಿರಗಸೂರು ಮಾದಪ್ಪ, ನಾರಾಯಣಸ್ವಾಮಿ, ಸುರೇಶ್‌ ನಾಗ್‌, ಮಲ್ಲಿಕಾರ್ಜುನಸ್ವಾಮಿ, ನಿಂಗಶೆಟ್ಟಿ, ಬಿ.ವಿ. ರೇವಣ್ಣ, ವರದನಾಯಕ, ಅಮಚವಾಡಿ ಮಹದೇವನಾಯಕ, ಲಿಂಗಣ್ಣ ನಾಯಕ, ಲೋಕೇಶ್, ವಿಜಯ್‌, ವರದರಾಜು ಹಾಜರಿದ್ದರು.

*
ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿಯೇ ವಾಸ್ತವ್ಯ ಹೂಡಬೇಕು. ರಾಜ್ಯ ಸರ್ಕಾರ ಶೀಘ್ರವೇ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು.
-ವಾಟಾಳ್‌ ನಾಗರಾಜ್‌,
ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT