ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೋಣೆಗೂ ವಾಸ್ತು

Last Updated 4 ಮೇ 2017, 19:30 IST
ಅಕ್ಷರ ಗಾತ್ರ

ಈಗಂತೂ ಮಕ್ಕಳ ಕೋಣೆಯ ವಿನ್ಯಾಸಕ್ಕೆ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ. ಹೀಗಿರುವಾಗ ವಾಸ್ತು ಮರೆಯಲು ಸಾಧ್ಯವೇ? ಮಕ್ಕಳು ಚುರುಕಾಗಬೇಕು, ಅವರು ಉತ್ಸಾಹದಿಂದ ಇರಬೇಕು ಎಂಬ ಕಾರಣಕ್ಕೆ ಪೋಷಕರು ಅವರ  ಕೋಣೆಯ ವಾಸ್ತುವಿಗೂ ಪ್ರಾಧಾನ್ಯ ನೀಡುತ್ತಿದ್ದಾರೆ.   ಮಕ್ಕಳ ಕೋಣೆಯ ವಾಸ್ತುವಿನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

* ಮಕ್ಕಳ ಕೋಣೆ ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಇದರ ಹೊರತಾಗಿ ಆಗ್ನೇಯ ಮತ್ತು ಈಶಾನ್ಯ ದಿಕ್ಕಿನಲ್ಲಿಯೂ ಇರಬಹುದು.

* ಕೋಣೆಯ ನೈಋತ್ಯ ಭಾಗದಲ್ಲಿ ಹಾಸಿಗೆ ಇದ್ದರೆ ಉತ್ತಮ. ಮಕ್ಕಳು ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು.

* ಮಕ್ಕಳ ಹಾಸಿಗೆಗೆ ನೇರವಾಗಿ ಕೋಣೆಯ ಬಾಗಿಲು ಇರಬಾರದು.

* ಕೋಣೆಯ ಮಧ್ಯದಲ್ಲಿ ಪೀಠೋಪಕರಣಗಳನ್ನು ಇರಿಸುವ ಬದಲು ನೈರುತ್ಯ ಭಾಗದಲ್ಲಿ ಇರಿಸಬೇಕು. ಇದರಿಂದ ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸಬಹುದು.

* ಮಕ್ಕಳ ಕೋಣೆಯ ಮಧ್ಯದಲ್ಲಿ ಖಾಲಿ ಬಿಡಬೇಕು. ಈ ಸ್ಥಳದಲ್ಲಿ ಏನನ್ನೂ ಇಡಬಾರದು.

* ದೀಪಗಳನ್ನು ಆಗ್ನೇಯ ದಿಕ್ಕಿನಲ್ಲಿ ಹಾಕಿಸಬೇಕು. ಇಲ್ಲದಿದ್ದರೆ ಬೆಳಕು ನೇರವಾಗಿ ಓದುವ ಟೇಬಲ್‌ ಮೇಲೆ ಬೀಳುವುದರಿಂದ ಮಕ್ಕಳ ಒತ್ತಡ ಹೆಚ್ಚುತ್ತದೆ.

* ಮಕ್ಕಳ ಕೋಣೆಗೆ ಹಸಿರು ಅಥವಾ ನೀಲಿ ಬಣ್ಣ ಹಾಕಿಸುವುದರಿಂದ ಅವರು ಶಾಂತಿ ಮತ್ತು ಉತ್ಸಾಹದಿಂದ ಇರುತ್ತಾರೆ. 

* ಮಕ್ಕಳು ಓದಲು ಕೂರುವ ಸ್ಥಳದ ಹಿಂದೆಯೇ ಕಿಟಕಿ ಇದ್ದರೆ ಉತ್ತಮ. ಇದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ.

* ಓದುವ ಟೇಬಲ್‌ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಿಸಬೇಕು. ಮತ್ತು ಅದನ್ನು ಗೋಡೆಗೆ ತಾಗಿಸಿ ಇಡಬಾರದು.

* ಕಂಪ್ಯೂಟರ್‌ ಅನ್ನು ಆಗ್ನೇಯ ಮೂಲೆಯಲ್ಲಿರಿಸಬೇಕು.

* ಮಕ್ಕಳ ಕೋಣೆಯಲ್ಲಿ ಕನ್ನಡಿ ಇಲ್ಲದಿರುವುದೇ ಒಳ್ಳೆಯದು. ಅದರಲ್ಲಿಯೂ ಹಾಸಿಗೆಯ ಎದುರು ಕನ್ನಡಿ ಹಾಕಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT