ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮಾನ ನಿಲ್ದಾಣದಲ್ಲಿ ಆಟವಾಡಿ, ಪ್ರಯಾಣ ಬೆಳೆಸಿ’

Last Updated 4 ಮೇ 2017, 19:43 IST
ಅಕ್ಷರ ಗಾತ್ರ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುವವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನರಂಜನೆ ಪಡೆಯಬಹುದು.
 
ಪ್ರಯಾಣಿಕರು ಹಾಗೂ ಸಂದರ್ಶಕರ ಅನುಕೂಲಕ್ಕಾಗಿ ‘ಪ್ಲೇಪೋರ್ಟ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 
 
ಎಮೋಜಿ ಪೂಲ್‌ನಲ್ಲಿ 6,000 ಬಾಲ್‌ಗಳನ್ನು ಹಾಕಿದ್ದು, 3–8 ವರ್ಷದ ಮಕ್ಕಳು ಆಟವಾಡಬಹುದು. ಸಮುದ್ರದಲ್ಲಿ ಸರ್ಫಿಂಗ್‌ ಮಾಡುವಂತಹ ಅನುಭವ ಸರ್ಫಿಂಗ್‌ ಸಿಮ್ಯುಲೇಟರ್‌ನಿಂದ ಸಿಗಲಿದೆ.
 
ಟರ್ಮಿನಲ್‌ನಲ್ಲಿ ಸ್ನೂಕರ್‌ ಫುಟ್ಬಾಲ್‌, ಮೇಜ್‌-ಪಜಲ್‌ ಗೇಮ್‌, ಪ್ಯಾರಾಚ್ಯೂಟ್‌ನಿಂದ ಬೀಳುವಂತಹ ಅನುಭವವಾಗುವ ತ್ರೀಡಿ ಗೇಮ್‌, ಆನ್‌ಲೈನ್‌ ಗೇಮ್‌ ಆಡಬಹುದು.ವ್ಯಂಗ್ಯಚಿತ್ರ ಬರೆಸಿಕೊಳ್ಳಿ: ಕಲಾವಿದ ಶಿವ ಪ್ರಯಾಣಿಕರ ವ್ಯಂಗ್ಯಚಿತ್ರವನ್ನು ಉಚಿತವಾಗಿ ಬರೆದುಕೊಡುತ್ತಾರೆ.
 
ವ್ಯಂಗ್ಯಚಿತ್ರ ಬರೆಸಿಕೊಳ್ಳುತ್ತಿದ್ದ ಅರೆಕೆರೆಯ ಭಾಸ್ಕರ್‌ ಮಾತನಾಡಿ, ‘ಒಮಾನ್‌ ದೇಶಕ್ಕೆ ಹೋಗುತ್ತಿದ್ದೇನೆ. ವಿಮಾನ ಬರಲು ಇನ್ನೂ ಒಂದು ಗಂಟೆ ಇತ್ತು. ಹೀಗಾಗಿ ವಿವಿಧ ಆಟಗಳನ್ನು ಆಡಿ ಇಲ್ಲಿಗೆ ಬಂದೆ. ತುಂಬಾ ಖುಷಿ ಆಗುತ್ತಿದೆ’ ಎಂದು ಸಂತಸ ಹಂಚಿಕೊಂಡರು.
 
ಈ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗೆ ₹200 ಮೌಲ್ಯದ ಗಿಫ್ಟ್‌ ವೋಚರ್‌ ಸಹ ನೀಡಲಾಗುತ್ತದೆ. ಟರ್ಮಿನಲ್‌ನಲ್ಲಿ ಇರುವ ಶಾಪಿಂಗ್‌ ಮಳಿಗೆಗಳಲ್ಲಿ ವೋಚರ್‌ ಬಳಸಿ ವಸ್ತುಗಳನ್ನು ಖರೀದಿಸಬಹುದು.
 
‘ಬೇಸಿಗೆ ರಜೆ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ವಿಮಾನಕ್ಕಾಗಿ ಸ್ವಲ್ಪ ಸಮಯ ಕಾಯಲೇಬೇಕು. ಮಕ್ಕಳು, ಯುವ ಜನರಿಗೆ ಮನರಂಜನೆ ಹಾಗೂ ಉಲ್ಲಾಸಭರಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಮೇ 15ರವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ’ ಎಂದು ಕೆಐಎಎಲ್‌ ವಿಮಾನ ನಿಲ್ದಾಣ ಕಾರ್ಯಾಚರಣೆಯ ಅಧ್ಯಕ್ಷ ಹರಿ ಮರಾರ್ ತಿಳಿಸಿದರು.
****
ತ್ವರಿತ ತಪಾಸಣೆಗೆ ಸಹಕಾರಿ
ಪ್ರಯಾಣಿಕರ ಪರ್ಸ್‌, ವ್ಯಾಲೆಟ್‌, ಕೈ ಚೀಲಗಳನ್ನು ತಪಾಸಣೆ ನಡೆಸಲು ಸ್ವಯಂಚಾಲಿತ ಟ್ರೇ ಮರುಪಡೆಯುವ ವ್ಯವಸ್ಥೆ (ಆಟೊಮೆಟಿಕ್‌ ಟ್ರೇ ರಿಟ್ರೀವಲ್‌ ಸಿಸ್ಟಮ್‌) ಅಳವಡಿಸಲಾಗಿದೆ. ಇದರಿಂದ ತ್ವರಿತಗತಿಯಲ್ಲಿ ತಪಾಸಣೆ ನಡೆಸಬಹುದು.

‘ಈ ಹಿಂದೆ ಪ್ರತಿಯೊಬ್ಬರ ವಸ್ತುಗಳನ್ನು ಟ್ರೇಯಲ್ಲಿ ಹಾಕಿ ಸ್ಕ್ಯಾನರ್‌ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತಿತ್ತು. ಇದಕ್ಕೆ ಸುಮಾರು ಒಂದೂವರೆ ನಿಮಿಷ ಹಿಡಿಯುತ್ತಿತ್ತು. ಆದರೆ, ಈಗ ಟ್ರೇಗಳಲ್ಲಿ ವಸ್ತುಗಳನ್ನು ಹಾಕಿದ ತಕ್ಷಣ ಅವು ಸ್ಕ್ಯಾನರ್‌ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಬಳಿಗೆ ಹೋಗುತ್ತವೆ.
 
ಇದಕ್ಕೆ 25 ಸೆಕೆಂಡ್‌ ಸಾಕು. ಅನುಮಾನಾಸ್ಪದ ವಸ್ತುಗಳು ಇದ್ದರೆ ಅಂತಹ ಟ್ರೇ ಪ್ರತ್ಯೇಕಗೊಂಡು ಭದ್ರತಾ ಸಿಬ್ಬಂದಿ ಬಳಿ ಹೋಗುತ್ತದೆ’ ಎಂದು ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT