ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಗೆಟ್ಟವರ ಮನದಲ್ಲಿ ನಕಾರಾತ್ಮಕ ಚಿಂತನೆ!

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಕಡಿಮೆ ನಿದ್ದೆ ಮಾಡುವವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಮೂಡುತ್ತವೆ ಎಂದು ನೂತನ ಸಂಶೋಧನೆ ತಿಳಿಸಿದೆ.

ಹೌದು, ನ್ಯೂಯಾರ್ಕ್‌ನ ಇಲಿನೊಯಿಸ್‌ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಈ ಅಧ್ಯಯನ ಮಾಡಿದೆ. ಮುಖ್ಯವಾಗಿ  ಖಿನ್ನತೆ ಮತ್ತು ಆತಂಕಕ್ಕೆ ಒಳಗಾದವರ ಮನದಲ್ಲಿ ನಕಾರಾತ್ಮಕ ಚಿಂತನೆಗಳು ಬರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಅಧ್ಯಯನಕ್ಕಾಗಿ 18ರಿಂದ 65 ವರ್ಷದೊಳಗಿನ 78 ಮಾನಸಿಕ ರೋಗಿಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕೆಂದೇ ವಿವಿಧ ಪ್ರದೇಶಗಳಲ್ಲಿ ಸಂಶೋಧನೆ ಮಾಡಲಾಗಿದೆ. ಮಿದುಳಿನ ಕಾರ್ಯವೈಖರಿ ಅಧ್ಯಯನಕ್ಕಾಗಿ ಎಂಆರ್‌ಐ ಸಹಾಯ ಪಡೆದಿದ್ದಾರೆ.

ಮಾನಸಿಕ ಕಾಯಿಲೆಗೆ ತುತ್ತಾದ ರೋಗಿಗಳು ಒಂದು ತಿಂಗಳು ಹೇಗೆ ನಿದ್ದೆ ಮಾಡಿದ್ದಾರೆ ಎಂಬುದನ್ನು ಪ್ರಶ್ನಾವಳಿ ಮೂಲಕ ಮಾಹಿತಿ ಕಲೆಹಾಕಿದ್ದಾರೆ.

ಯುದ್ಧ, ಅಪಘಾತಗಳ ಚಿತ್ರಣಗಳು ಮನಸಿನಲ್ಲಿ ಮೂಡುತ್ತಿದ್ದರಿಂದ ಸಕಾರಾತ್ಮಕ ಚಿಂತನೆ ಹೇಗೆ ಬರಲು ಸಾಧ್ಯ ಎಂದು ಅಧ್ಯಯನಕ್ಕೆ ಒಳಪಟ್ಟವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT