ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಮೇಲೆ ಆಕ್ರಮಣದಿಂದ ತಾಪ ಹೆಚ್ಚಳ

ಪೋತಲೂರಿ ವೀರಬ್ರಹ್ಮೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ
Last Updated 6 ಮೇ 2017, 8:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಪ್ರಕೃತಿ ಮೇಲೆ ನಾವು ನಡೆಸುತ್ತಿರುವ ಆಕ್ರಮಣ ಭೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪ್ರದೇಶಗಳಲ್ಲಿಯೂ ಭೂ ಕಂಪನವಾಗುವ ದಿನಗಳು ದೂರವಿಲ್ಲ’ ಎಂದು ಪರಿಸರವಾದಿ ಕೆ.ಗುರುದೇವ್ ಹೇಳಿದರು.

ವಿರಾಟ್ ವಿಶ್ವಕರ್ಮ ಶ್ರೀವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ನಗರದ ಅಯ್ಯಪ್ಪ ಭವನದಲ್ಲಿ ನಡೆದ ಪೋತಲೂರಿ ವೀರಬ್ರಹ್ಮೇಂದ್ರಸ್ವಾಮಿಗಳ 8ನೇ ವರ್ಷದ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರಬ್ರಹ್ಮೇಂದ್ರರ ಕಾಲಜ್ಞಾನದ ವಿಚಾರವಾಗಿ ಮಾತನಾಡಿದರು.

ವಿಜ್ಞಾನಿಗಳು ಇಂದು ಪ್ರಕೃತಿಯ ಸವಾಲುಗಳ ಬಗ್ಗೆ ಚಿಂತಿಸುತ್ತಿದ್ದಾರೆ. ಕಾಲಜ್ಞಾನಿ ವೀರಬ್ರಹ್ಮೇಂದ್ರ  ಮುಂದಾಗುವ ಹಲವಾರು ವಿಚಿತ್ರಗಳನ್ನು ಶತಮಾನಗಳ ಹಿಂದೆಯೇ ತಿಳಿಸಿದ್ದರು.  ಹೊಸ ಜಗತ್ತಿನ ಸೃಷ್ಟಿ ಆಗುತ್ತೋ ಇಲ್ಲವೋ, ಆದರೆ ಇರುವ ಜಗತ್ತು ಶುದ್ಧೀಕರಣಕ್ಕೆ ಹಲವಾರು ಘಟನೆಗಳು ಸಂಭವಿಸುತ್ತಿವೆ ಎಂದರು.

ಮಾನವನ ವಿಕಾಸ, ಆಧುನಿಕ ಜೀವನ ಪದ್ಧತಿಗಳು ನಮ್ಮ  ಏಳಿಗೆಗಾಗಿ ಇರಬೇಕೇ ಹೊರತು ನಾಶಕ್ಕಲ್ಲ. ಮಾನವನ ವಿಕಾಸದ ಪ್ರತಿ ಹಂತಗಳನ್ನು 400 ವರ್ಷಗಳ ಹಿಂದೆಯೇ ವೀರಬ್ರಹ್ಮೇಂದ್ರಸ್ವಾಮಿ ಹೇಳಿದ್ದರು. ಇವರ ಮಾತಿನ ಅಂತರಿಕ ಸತ್ವವನ್ನು ನಾವು ತಿಳಿಯಬೇಕಿದೆ ಎಂದರು.

ವಿಶ್ವಕುಂಡಲಿ ಯೋಗಾಶ್ರಮದ  ಶ್ರೀಉಮೇಶ್ವರಸ್ವಾಮಿ ಮಾತನಾಡಿ, ವಿಶ್ವಕರ್ಮ ಒಂದು ಜಾತಿಯಲ್ಲ. ಅದು ಒಂದು ಸಂಸ್ಕೃತಿ. ಮಾನವ ಜನ್ಮ ಶ್ರೇಷ್ಠವಾಗಿದ್ದು ಸತ್ಕಾರ್ಯ, ಸೇವಾ ಕಾರ್ಯಗಳೊಂದಿಗೆ ಜಗತ್ತಿಗೆ ಒಳಿತನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕಿದೆ.

ಸನ್ಮಾರ್ಗಗಳು, ಒಳ್ಳೆಯ ಕೆಲಸಗಳು ಜಗತ್ತಿನಲ್ಲಿ ಕೀರ್ತಿಶೇಷವಾಗಬೇಕು. ಇಂತಹ ಕಾರ್ಯಗಳನ್ನು ಮಾಡಿ ಕಾಲಜ್ಞಾನವನ್ನು ರಚಿಸಿದ ಪೋತಲೂರಿ ವೀರಬ್ರಹ್ಮೇಂದ್ರಸ್ವಾಮಿಗಳ ಚಿಂತನೆಗಳು ಸದಾಕಾಲಕ್ಕೂ ಪ್ರಸ್ತುತ ಎಂದರು.

ಆರಾಧನೆಯ ಅಂಗವಾಗಿ ಕಾಳಿಕಾ ಕಮ್ಮಟೇಶ್ವರಿ ದೇವಾಲಯದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಜನಾಂಗದ ಹಿರಿಯರಾದ ರಾಜಶೇಖರಾಚಾರ್, ಶೇಷಾಚಾರ್, ರಾಮಕೃಷ್ಣಾಚಾರ್, ಶಂಕರಾಚಾರ್ ಅವರನ್ನು ಸನ್ಮಾನಿಸಲಾಯಿತು.

ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಇ. ಪರಮಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಪಾರ್ಥಸಾರಥಿ, ಸಂಘಟನಾ ಕಾರ್ಯದರ್ಶಿ ಟಿ.ಎಸ್.ಭಾಸ್ಕರಾಚಾರ್, ಶಿವಕುಮಾರ್ ಹಾಗೂ ಟ್ರಸ್ಟಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT