ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರಕೆ ಹಿಡಿದು ರಸ್ತೆ ಗುಡಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ

Last Updated 6 ಮೇ 2017, 10:41 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಪೊರಕೆ ಹಿಡಿದು ರಸ್ತೆ ಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಲಖನೌ‍ನಲ್ಲಿ ಶನಿವಾರ ಬೆಳಗ್ಗೆ ರಸ್ತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆದಿತ್ಯನಾಥ ಅವರ ಜತೆ ಸಚಿವ ಸಂಪುಟದ ಸದಸ್ಯರೂ ಭಾಗಿಯಾಗಿದ್ದರು.

ಮಳೆಗಾಲ ಆರಂಭವಾಗುವ ಮುನ್ನ ಚರಂಡಿಗಳಲ್ಲಿರುವ ಕಸಗಳನ್ನೆಲ್ಲಾ ತೆಗೆದು ನೀರು ಹರಿದುಹೋಗಲು ವ್ಯವಸ್ಥೆ ಮಾಡಬೇಕೆಂದು ಆದಿತ್ಯನಾಥ ಸಂಬಂಧಪಟ್ಟ ಇಲಾಖೆಗೆ ಆದೇಶಿಸಿದ್ದರು. ಪ್ರತಿ ವಾರ್ಡ್ ಗಳಲ್ಲಿ ಚರಂಡಿ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂಬುದನ್ನು ಕೌನ್ಸಿಲರ್ ಗಳು ಪರಿಶೀಲನೆ ನಡೆಸಿ ದೃಢೀಕರಿಸಬೇಕೆಂದು ಆದಿತ್ಯನಾಥ್ ಹೇಳಿದ್ದರು.

2017ರ ಸ್ವಚ್ಛ ಸರ್ವೇಕ್ಷಣಾ ವರದಿಯ ಪ್ರಕಾರ 100 ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮಾತ್ರ ಸ್ಥಾನ ಪಡೆದಿತ್ತು. ಸ್ವಚ್ಛತೆ ಇಲ್ಲದ 15 ಜಿಲ್ಲೆ ಗಳ ಪೈಕಿ 9 ಜಿಲ್ಲೆಗಳು ಉತ್ತರಪ್ರದೇಶದ್ದಾಗಿತ್ತು. ರಾಜ್ಯದಲ್ಲಿ ಸ್ವಚ್ಛತೆಯ ಕೊರತೆ ಇರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಆದಿತ್ಯನಾಥ, ಡಿಸೆಂಬರ್ ತಿಂಗಳೊಳಗೆ ರಾಜ್ಯದ 30 ಜಿಲ್ಲೆಗಳನ್ನು ಬಯಲು ಶೌಚ ಮುಕ್ತವಾಗಿಸಲು ಕಾರ್ಯಾರಂಭ ಮಾಡಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ ತಿಂಗಳೊಳಗೆ ಇಡೀ ರಾಜ್ಯವನ್ನು ಬಯಲ ಶೌಚ ಮುಕ್ತಗೊಳಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT