ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 7–5–1967

Last Updated 6 ಮೇ 2017, 19:30 IST
ಅಕ್ಷರ ಗಾತ್ರ
ಶ್ರೀ ವಿ.ವಿ. ಗಿರಿ ಉಪರಾಷ್ಟ್ರಪತಿ 483–193 ಮತಗಳ ಅದ್ಭುತ ವಿಜಯ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಮೇ 6– ಹಿರಿಯ ಕಾರ್ಮಿಕ ನಾಯಕ ಹಾಗೂ ಆಡಳಿತಗಾರ, 73 ವರ್ಷ ವಯಸ್ಸಿನ ಶ್ರೀ ವಿ.ವಿ. ಗಿರಿ ಅವರು ಉಪ ರಾಷ್ಟ್ರಪತಿಯಾಗಿ ಇಂದು ಚುನಾಯಿತರಾದರು.
 
ಶ್ರೀ ಗಿರಿ ಅವರು 483 ಮತಗಳನ್ನು ವಿರೋಧ ಪಕ್ಷಗಳ ಸ್ಪರ್ಧಿ ಪ್ರೊ. ಹಬೀಬ್ ಅವರು 193 ಮತಗಳನ್ನು ಗಳಿಸಿದರು.ಮೈಸೂರಿನ ರಾಜ್ಯಪಾಲರಾಗಿ ನಿವೃತ್ತರಾಗಲಿರುವ ಶ್ರೀ ಗಿರಿ ಅವರು ಕಾಂಗ್ರೆಸ್ ಪಕ್ಷದ ಸ್ಪರ್ಧಿಯಾಗಿದ್ದರು.
 
ಪಾರ್ಲಿಮೆಂಟಿನ ಉಭಯ ಸದನಗಳ 759 ಮಂದಿ ಸದಸ್ಯರಲ್ಲಿ ಮತದಾರರ ಕಾಲೇಜಿನ 679 ಮಂದಿ ಉಪರಾಷ್ಟ್ರಪತಿಯವರ ಚುನಾವಣೆಯಲ್ಲಿ ಭಾಗವಹಿಸಿದ್ದರು.
 
ರಾಷ್ಟ್ರಪತಿ ಆಯ್ಕೆಗೆ ಉತ್ಸಾಹದ ಮತದಾನ
ನವದೆಹಲಿ, ಮೇ 6– ರಾಷ್ಟ್ರದ ಸರ್ವೋಚ್ಛ ಅಧಿಕಾರಕ್ಕೆ ಪ್ರಥಮ ಬಾರಿಗೆ ಕುತೂಹಲ ಕೆರಳಿಸಿದ ಸ್ಪರ್ಧೆ. ರಾಷ್ಟ್ರದ ಮೂರನೇ ರಾಷ್ಟ್ರಪತಿಯ ಆಯ್ಕೆಗೆ ನವದೆಹಲಿ ಹಾಗೂ ರಾಜ್ಯಗಳ ರಾಜಧಾನಿಗಳಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಾಯಂಕಾಲ ನಾಲ್ಕು ಗಂಟೆಗೆ ಮುಕ್ತಾಯಗೊಂಡಿತು. ಪಾರ್ಲಿಮೆಂಟ್ ಭವನದ ಮತದಾನ ಕೇಂದ್ರದಲ್ಲಿ 680 ಮಂದಿ ಪಾರ್ಲಿಮೆಂಟ್ ಸದಸ್ಯರ ಪೈಕಿ 671 ಮಂದಿ ಮತದಾನ ಮಾಡಿದರು.
 
ಸಭೆಯನ್ನು ಅಸಭ್ಯ ರೀತಿಯಲ್ಲಿ ಕಂಡಿಲ್ಲ ಎಂದು ಮುಖ್ಯಮಂತ್ರಿ
ಬೆಂಗಳೂರು, ಮೇ 6– ‘ನಾನು ನಿಜವಾದ ಅಂಶವನ್ನು ಸಭೆಯ ಮುಂದೆ ಇಟ್ಟಿದ್ದೇನೆಯೇ ವಿನಾ ತಪ್ಪು ತಿಳುವಳಿಕೆ ಕೊಟ್ಟು ಅಸಭ್ಯತೆಯನ್ನು ತೋರುವುದಾಗಲೀ ಹಕ್ಕಿನ ಲೋಪವನ್ನಾಗಲೀ ಮಂಡಿಸಿಲ್ಲ’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಹೇಳಿದರು.
ಅಧಿವೇಶನದ ಅವಧಿಯನ್ನು ಕಡಿಮೆ ಮಾಡಿದ್ದಕ್ಕೆ ತಾವು ನೀಡಿದ್ದ ಹೇಳಿಕೆಯನ್ನು ಅವರು ಸಮರ್ಥಿಸಿದರು.
 
ತಿಳಿ ವಾತಾವರಣದಲ್ಲಿ ಐದು ದಿನಗಳ ಬಿರುಸಿನ ಅಧಿವೇಶನ ಮುಕ್ತಾಯ
ಬೆಂಗಳೂರು, ಮೇ 6– ಮೈಸೂರು ವಿಧಾನ ಮಂಡಲದ ಇತಿಹಾಸದಲ್ಲಿ ಅಪೂರ್ವ ಘಟನೆಗಳನ್ನು ಬರೆದ ಐದು ದಿನಗಳ ಕಾಲದ ಬಿರುಸಿನ ವಿಧಾನ ಸಭಾಧಿವೇಶನವು ಇಂದು ಮುಗಿದು, ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.
 
ಮೂರು ದಿನಗಳ ಕಾಲ ಯಾವುದೇ ನಿರ್ದಿಷ್ಟ ಕಾರ್ಯಕಲಾಪಗಳನ್ನು ಎತ್ತಿಕೊಳ್ಳದೆ ಪ್ರಶ್ನೋತ್ತರ ಕಾಲವನ್ನು ಮುಂದಕ್ಕೆ ಹಾಕುವ ಶ್ರೀ ಶಿವಪ್ಪನವರ ಸೂಚನೆಯ ಮೇಲೆ ಚರ್ಚೆ ನಡೆಸಿದ ಸಭೆಯು, ನಿನ್ನೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಪರಿಶೀಲಿಸುವ ಶ್ರೀ ಕೆ.ಎಸ್. ಪಾಟೀಲರ ಸೂಚನೆಯ ಮೇಲೆ ಚರ್ಚೆ ಆರಂಭಿಸಿ, ಇಂದು ಮುಗಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT